ಗೋಣಿಕೊಪ್ಪ ವರದಿ, ಮಾ. ೫: ಆರ್‌ಸಿಬಿ ಕರ‍್ಸ್ ಹಾಗೂ ಗೋ ಸ್ಪೋರ್ಟ್ಸ್ ವತಿಯಿಂದ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಕ್ಯಾಲ್ಸ್ ಆವರಣದಲ್ಲಿ ನಡೆಯಿತು. ಕೀಡಾ ಕೌಶಲ್ಯ, ವೈಜ್ಞಾನಿಕ ಯೋಜನೆ ಮತ್ತು ಸಿದ್ದತೆೆ ಬಗ್ಗೆ ತರಬೇತಿ ನೀಡಲಾಯಿತು. ಕಾರ್ಯಾಗಾರದಲ್ಲಿ ಕ್ರೀಡಾಪಟುಗಳ ವಿವಿಧ ರೀತಿಯ ಮೌಲ್ಯಮಾಪನ ನಡೆಯಿತು. ದೈಹಿಕವಾಗಿ ಮುನ್ನಡೆಯಲು ಪೂರಕ ಸಲಹೆ, ಮಾನಸಿಕ ಸಿದ್ದತೆ ಕ್ರೀಡಾಪಟುಗಳಿಗೆ ಅಗತ್ಯ ಎಂಬ ಸಲಹೆ ನೀಡಲಾಯಿತು. ಮನೋವಿಜ್ಞಾನ ಅಳವಡಿಸಿಕೊಳ್ಳಲು ಸೂಕ್ತ ಸಂವಾದ ನಡೆಸಲಾಯಿತು. ಕ್ರೀಡಾ ವಿಜ್ಞಾನ ಮತ್ತು ಮನೋವಿಜ್ಞಾನ ಮೂಲ ಬಲಪಡಿಸಲು ನಿರ್ದೇಶನ ನೀಡಲಾಯಿತು.