ಕುಶಾಲನಗರ, ಮಾ. ೨: ಪ್ರತೀಯೋರ್ವರಲ್ಲಿಯೂ ಇರುವ ಶ್ರೇಷ್ಠವಾದ ವ್ಯಕ್ತಿತ್ವವನ್ನು ಹೊರತರುವ ಮೂಲಕ ಸಮಾಜದಲ್ಲಿ ಉತ್ತಮ ಸೇವಾಕಾರ್ಯಗಳಿಗೆ ಮುಂದಾಗಿ ಎಂದು ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಕರೆ ನೀಡಿದ್ದಾರೆ.
ಕುಶಾಲನಗರದ ಎಸ್ ಎಲ್ ಎನ್ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಅರವಿಂದ್ ಕೆಲವು ದೊಡ್ಡ ಸಂಗತಿಗಳು ಕ್ಲೀಷೆಯಾಗುವ ಈ ಕಾಲಘಟ್ಟದಲ್ಲಿ ಸಣ್ಣ ಚಿಂತನೆಗಳೇ ದೊಡ್ಡ ಪರಿಣಾಮ ಬೀರಬಲ್ಲವಾಗಿದೆ. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದ್ದೇ ಆದಲ್ಲಿ ಅದ್ಬುತ ಯಶಸ್ಸು ಖಂಡಿತಾ ಸಾಧ್ಯವಿದೆ, ಯಾವುದೇ ಕೆಲಸ ಮಾಡುವ ಮುನ್ನ ನಿಮ್ಮ ಕೆಲಸವನ್ನು ಜಗತ್ತು ಗಮನಿಸುತ್ತಿರುತ್ತದೆ ಎಂದುಕೊAಡು ಮಾಡಿದಾಗ ಕೆಲಸ ಸುಲಭಸಾಧ್ಯವಾಗುತ್ತದೆ ಎಂದರು.
ಸಾಮಾಜಿಕ ಸೇವೆ ಮೂಲಕ ಕುಶಾಲನಗರ ರೋಟರಿ ಸಂಸ್ಥೆಯು ೫೦ ವರ್ಷಗಳನ್ನು ಕಳೆದಿರುವುದು ಗಮನಾರ್ಹವಾಗಿದೆ ಎಂದು ಶ್ಲಾಘಿಸಿದ ರಮೇಶ್ ಅರವಿಂದ್ ಖ್ಯಾತ ಕಲಾವಿದರು ಮೊದಲಿನಂತೆ ವರ್ಷಗಟ್ಟಲೆ ವಾರಗಟ್ಟಲೆ ಸೂಪರ್ ಸ್ಟಾರ್‌ಗಳಾಗಿ ಮುಂದುವರೆಯುವ ಕಾಲದ ಬದಲಾಗಿ ಸೂಪರ್‌ಸ್ಟಾರ್ ಗಿರಿ ಗಂಟೆಗೆ ಸೀಮಿತವಾಗುವ ಕಾಲದಲ್ಲಿ ನಾವಿದ್ದೇವೆ . ಆದರೆ ರೋಟರಿ ಸಂಸ್ಥೆಯು ಕೈಗೊಳ್ಳುವ ಸೇವಾ ಕಾರ್ಯ ಸಮಾಜದಲ್ಲಿ ೫೦ ವರ್ಷಾನುಗಟ್ಟಲೆ ಕಾಲ ರೋಟರಿಯನ್ನು ಸೂಪರ್ ಸ್ಟಾರ್ ಆಗಿಯೇ ಇರುವಂತೆ ಮಾಡಿದೆ ಎಂದೂ ರಮೇಶ್ ಹೆಮ್ಮೆಯಿಂದ ನುಡಿದರು.
ಸಂವಾದ ಕಾಯರ್ಹಕ್ರಮದಲ್ಲಿ ಪಾಲ್ಗೊಂಡಿದ್ದ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತÀರ್ ಗೌಡ ಮಾತನಾಡಿ, ಸಣ್ಣ ವಯಸ್ಸಿನಲ್ಲಿಯೇ ಜನ ನನಗೆ ಶಾಸಕನಾಗುವ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಜನಸೇವೆಗೆ ತಾನು ಎಲ್ಲಾ ಸಮಯ ಮುಡಿಪಾಗಿಟ್ಟಿದ್ದೇನೆ ಎಂದರು. ಸುಮಾರು ೨೫ ವರ್ಷಗಳ ಸಮಸ್ಯೆಯಾಗಿ ಪರಿಣಮಿಸಿರುವ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಡಿಕೇರಿಯ ತ್ಯಾಜ್ಯದ ಗುಡ್ಡದಲ್ಲಿನ ಕಸಕ್ಕೆ ವೈಜಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ.ಸ್ವಚ್ಚ ಭಾರತ್ ಯೋಜನೆಯಡಿಯಲ್ಲಿ ೧೨ ಕೋಟಿ ರೂ. ಅನುದಾನದಲ್ಲಿ ಮಡಿಕೇರಿ, ಕುಶಾಲನಗರ ಮತ್ತು ವೀರಾಜಪೇಟೆಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.
ಮಕ್ಕಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯದ ಬಗ್ಗೆ ತಿಳುವಳಿಕೆ ಮೂಡಿಸಿ, ಪ್ಲಾಸ್ಟಿಕ್ ಮುಕ್ತ ಕೊಡಗನ್ನು ರೂಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದೂ ಡಾ.ಮಂತÀರ್ ಗೌಡ ಈ ಸಂದರ್ಭ ಕರೆ ನೀಡಿದರು.
ರೋಟರಿ ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಪಿ.ಕೆ. ರಾಮಕೃಷ್ಣ, ಸ್ವಚ್ಚ ಕುಶಾಲನಗರದಂಥ ಗಮನಾರ್ಹ ಯೋಜನೆ ಮೂಲಕ ರೋಟರಿ ಸಂಸ್ಥೆಯು ಅತ್ಯುತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ಎಸ್‌ಎಲ್‌ಎನ್ ಸಂಸ್ಥೆಯ ಪ್ರಮುಖರಾದ ಸಾತಪ್ಪನ್ ಮಾತನಾಡಿ, ಕುಶಾಲನಗರ ಸ್ವಚ್ಚ ನಗರವಾಗಿ ರೂಪಾಂತರಗೊAಡು ಕೊಡಗಿನಲ್ಲಿಯೇ ಸ್ವಚ್ಚತೆಗೆ ಮಾದರಿಯಾಗಬೇಕೆಂದು ಕರೆ ನೀಡಿದರು.
ಕುಶಾಲನಗರ ರೋಟರಿ ಸಂಸ್ಥೆಯ ಯುವ ಅಧ್ಯಕ್ಷ ಮಾಳೆಯಂಡ ಮನು ಪೆಮ್ಮಯ್ಯ ಮಾತನಾಡಿ, ೪೮ ಸದಸ್ಯರ ಸಹಕಾರದೊಂದಿಗೆ ಸ್ವಚ್ಚ ಕುಶಾಲನಗರ, ಪ್ಲಾಸ್ಟಿಕ್ ಮುಕ್ತ ಕುಶಾಲನಗರಕ್ಕಾಗಿ ಪಣತೊಟ್ಟಿದ್ದೇವೆ. ಉತ್ತಮ ಸಮಾಜದ ಪರಿಕಲ್ಪನೆಯೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸುವರ್ಣ ಸಂಭ್ರಮ ವರ್ಷವನ್ನು ಆಚರಿಸಿಕೊಳ್ಳಲಾಗುತ್ತಿದೆ ಎಂದರು.
ಸುವರ್ಣ ಸಂಭ್ರಮ ಆಚರಣಾ ಸಮಿತಿ ಅಧ್ಯಕ್ಷ ಎಸ್.ಕೆ. ಸತೀಶ್ ಮಾತನಾಡಿ, ೧೯೭೬ ರಲ್ಲಿ ಕೆ.ಬಿ. ಬೋಪಣ್ಣ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಕುಶಾಲನಗರ ರೋಟರಿ ಸಂಸ್ಥೆಯು ಮಾನವ ಸೇವೆ, ವಿದ್ಯಾಸೇವೆ, ಆರೋಗ್ಯ ಸೇವೆಯಂಥ ಹಲವಾರು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ ಎಂದು ಮಾಹಿತಿ ನೀಡಿದರು.
ಎಸ್ ಎಲ್ ಎನ್ ಸಂಸ್ಥೆ ಪ್ರಮುಖ ವಿಶ್ವನಾಥನ್, ದಾನಿಗಳಾದ ಸಿ.ಜೆ. ಅನಿಲ್ ಕುಮಾರ್, ಶರಣ್ ಪೂಣಚ್ಚ, ಕುಶಾಲನಗರ ರೋಟರಿ ಕ್ಲಬ್‌ನ ಕಾರ್ಯದರ್ಶಿ ಹೆಚ್.ಪಿ. ಮಂಜುನಾಥ್, ಖಜಾಂಚಿ ಕೆ.ಎಂ. ಜೇಕಬ್, ಸುವರ್ಣ ಸಂಭ್ರಮ ಸಮಿತಿ ಉಪಾಧ್ಯಕ್ಷರಾಗಿ ಮಹೇಶ್ ಕುಮಾರ್ ನಲ್ವಾಡೆ, ಡಾ. ಹರಿ ಎ. ಶೆಟ್ಟಿ, ಸಂಚಾಲಕ ಕ್ರೆಜ್‌ವೆಲ್ ಕೋಟ್ಸ್, ಸಹಾಯಕ ಗವರ್ನರ್ ಉಲ್ಲಾಸ್‌ಕೃಷ್ಣ, ಸಮಿತಿ ಕಾರ್ಯದರ್ಶಿ ಎಂ.ಡಿ. ರಂಗಸ್ವಾಮಿ, ಖಜಾಂಚಿ ಪಿ.ಆರ್. ನವೀನ್, ಸಹ ಕಾರ್ಯದರ್ಶಿ ರಿಚರ್ಡ್ ಡಿಸೋಜ, ಹಣಕಾಸು ಸಮಿತಿ ಅಧ್ಯಕ್ಷ ಸಿ.ಎ. ರುದ್ರೇಶ್ ಪಟೇಲ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆ.ಎಸ್. ರಾಜಶೇಖರ್, ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಎಸ್ ಎಲ್ ಎನ್ ಸಂಸ್ಥೆಯ ಸಾತಪ್ಪನ್ ಮತ್ತು ವಿಶ್ವನಾಥನ್ ಅವರಿಗೆ ರೋಟರಿ ಗೋಲ್ಡನ್ ಪರ್ಸನಾಲಿಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ನಿರೂಪಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಿಕ್ಕಿರಿದು ಸೇರಿದ್ದ ಜನರನ್ನು ಆಕರ್ಷಿಸಿದವು. ಖ್ಯಾತ ಗಾಯಕ ಚಂದನ್ ಶೆಟ್ಟಿ ಅವರ ಹಾಡುಗಳು, ಮಿಮಿಕ್ತಿ ಕಲಾವಿದ ಗೋಪಿಯವರ ಮಿಮಿಕ್ರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಮತ್ತು ದೀಪಿಕಾ ಅವರ ಹಾಸ್ಯ, ವೈವಿಧ್ಯಮಯ ನೃತ್ಯ ಕಾರ್ಯ್ಯಕ್ರಮಗಳು, ವರ್ಣ ಚೌಹಾನ್ ಮತ್ತು ಖಾಸಿಂ ಆಲಿ ಅವರ ಗಾಯನ ಕಾರ್ಯಕ್ರಮಗಳು ರೋಟರಿ ಸುವರ್ಣ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದವು. ಕೊಡವ ನೃತ್ಯಕ್ಕೆ ಚಂದನ್ ಶೆಟ್ಟಿ ಕೂಡ ಹೆಜ್ಜೆ ಹಾಕಿ ಗಮನ ಸೆಳೆದರು.
ರೋಟರಿಯ ನೂರಾರು ಸದಸ್ಯರು, ಸಾರ್ವಜನಿಕರು ಕುಶಾಲನಗರ ರೋಟರಿ ಸಂಸ್ಥೆಯ ಸುವರ್ಣ ಸಂಭ್ರಮ ಸಮಾರಂಭವನ್ನು ಆನಂದಿಸಿದರು.