ಯುದ್ಧಪೀಡಿತ ಮಧ್ಯಪ್ರಾಚ್ಯದಲ್ಲಿ ವಾಯು ಸಂಚಾರ ಬಂದ್ ಆದ ಹಿನ್ನೆಲೆ ವಿಶ್ವದ ವಿವಿಧೆಡೆಗಳಿಂದ ಅಲ್ಲಿಗೆ ತೆರಳಿದ್ದ ಅನೇಕರು ತಮ್ಮ-ತಮ್ಮ ತವರುಗಳಿಗೆ ತೆರಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ.

ಹಲವಾರು ಭಾರತೀಯರು ಕೂಡ ಇಲ್ಲಿ ಸಿಲುಕಿಕೊಂಡಿದ್ದು, ರಾಷ್ಟçದ ಆಯಾ ರಾಜ್ಯ ಹಾಗೂ ಪ್ರತಿ ಜಿಲ್ಲೆಗಳ ನಿವಾಸಿಗಳ ಮಾಹಿತಿ ಕಲೆಹಾಕಲು ಜಿಲ್ಲಾವಾರು ಸಹಾಯವಾಣಿ ಸಂಖ್ಯೆ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗಿದ್ದು ಈ ಸಹಾಯವಾಣಿಗೆ ಕೊಡಗಿನ ೫ ಮಂದಿ ನಿವಾಸಿಗಳು ಕರೆ, ಸಂದೇಶ ಮೂಲಕ ಮಾಹಿತಿ ಹಂಚಿಕೊAಡಿದ್ದಾರೆ. ಮಧ್ಯಪ್ರಾಚ್ಯದ ಬಹ್ರೇನ್ ಹಾಗೂ ಯು.ಎ.ಇ ದೇಶಗಳಿಗೆ ‘ವಿಸಿಟರ್ ವೀಸಾ’ ಮೂಲಕ ತೆರಳಿರುವ ಕೊಡಗಿನವರ ಪೈಕಿ ಒಟ್ಟು ೫ ಮಂದಿ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿರುವುದಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಮಾಹಿತಿ ನೀಡಿದೆ. ಬಹ್ರೇನ್‌ನಲ್ಲಿ ಒಬ್ಬರು ಸಿಲುಕಿಕೊಂಡಿದ್ದು, ಉಳಿದಂತೆ ನಾಲ್ವರು ಯು.ಎ.ಇನಲ್ಲಿ ಬಾಕಿಯಾಗಿದ್ದಾರೆ.ಈ ಮಾಹಿತಿಯನ್ನು ರಾಜ್ಯ ಹಾಗೂ ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದ್ದು, ವಿಶೇಷ ವಿಮಾನ ಮೂಲಕ ರಕ್ಷಣಾ ಕಾರ್ಯ ನಡೆಯಲಿದ್ದರೆ ಕೇಂದ್ರದಿAದಲೇ ನಡೆಯಬೇಕಿದೆ.

ಮಧ್ಯಪ್ರಾಚ್ಯದ ಯು.ಎಸ್.ಎ ಮಿಲಿಟರಿ ಕೇಂದ್ರಗಳ ಮೇಲೆ ದಾಳಿ

ಇರಾನ್ ದೇಶವು, ಪರಮಾಣು ಆಯುಧಗಳನ್ನು ತಯಾರಿಸಿ ಪರೀಕ್ಷಿಸಲು ಮುಂದಾಗುತ್ತಿದೆ ಎಂದು ಆರೋಪಿಸಿ ಅಮೇರಿಕಾ-ಇಸ್ರೇಲ್ ಸೇರಿ ಇರಾನ್ ಮೇಲೆ ಜಂಟಿ ದಾಳಿ ನಡೆಸಿದ ಹಿನ್ನೆಲೆ ಇರಾನ್ ಸರ್ವಾಧ್ಯಕ್ಷ ಅಲಿ ಖಮೀನಿ ಹತರಾದರು. ಇದಕ್ಕೆ ಪ್ರತಿಕಾರವಾಗಿ ಇರಾನ್‌ನ ಸೇನೆಯು ಇಸ್ರೇಲ್ ಮೇಲೆ ದಾಳಿಮಾಡಿದ್ದಲ್ಲದೆ ಮಧ್ಯಪ್ರಾಚ್ಯದ ಯು.ಎ.ಇ, ಬಹ್ರೇನ್, ಕುವೈತ್, ಇರಾಕ್, ಜಾರ್ಡನ್, ಕತಾರ್ ಹಾಗೂ ಸೌದಿ ಅರೇಬಿಯಾದಲ್ಲಿರುವ ಅಮೇರಿಕಾದ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಈ ಹಿನ್ನೆಲೆ ಈ ರಾಷ್ಟçಗಳ ವಾಯು ಸಂಚಾರ ಬಂದ್ ಮಾಡಲಾಗಿದ್ದು, ಅಲ್ಲಿಗೆ ವಿಮಾನ ಮೂಲಕ ತೆರಳುವುದಾಗಲಿ, ಅಲ್ಲಿಂದ ವಾಪಸ್ ಬರುವುದಾಗಲಿ ಅನಿರ್ದಿಷ್ಟಾವಧಿ ಬಂದ್ ಆಗಿದೆ.

ಈ ದೇಶದಲ್ಲಿ ಸಿಲುಕಿಕೊಂಡಿರುವ ಕೊಡಗಿನವರು ೦೮೨೭೨-೨೨೧೦೭೭, ೦೮೨೭೨-೨೨೧೦೯೯ಗೆ ಕರೆ ಮಾಡಬಹುದು ಅಥವಾ ವಾಟ್ಸಾö್ಯಪ್ ಸಂಖ್ಯೆ - ೮೫೫೦೦೦೧೦೭೭ಗೆ ಸಂದೇಶ ಕಳುಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ಕೋರಿದೆ.