ಸೋಮವಾರಪೇಟೆ, ಮಾ. ೨: ಅಸ್ಸಾಮಿಗರ ಸೋಗಿನಲ್ಲಿ ಕೊಡಗಿನ ವಿವಿಧೆಡೆ ಬೀಡುಬಿಟ್ಟಿರುವ ಶಂಕಿತ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಬೇಕು. ಇಂತವರಿಗೆ ನೆಲೆ ಒದಗಿಸಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕರವೇ ಸಂಘಟನೆಯ ನೂರಾರು ಮಂದಿ ಕಾರ್ಯಕರ್ತರು, ನಿವೃತ್ತ ಜಿಲ್ಲಾ ಅರೆಸೇನಾ ಪಡೆಯ ಪದಾಧಿಕಾರಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಿAದ ಮಡಿಕೇರಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣದ ಮೂಲಕ ಜೇಸೀ ವೇದಿಕೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸುವ ಘೋಷಣೆಗಳನ್ನು ಕೂಗಲಾಯಿತು. ಅಕ್ರಮ ನುಸುಳುವಿಕೆಯನ್ನು ತಡೆಗಟ್ಟುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಕಾರ್ಯಕರ್ತರು, ರಾಜ್ಯದೊಳಗೆ ಇರುವ ಅಕ್ರಮ ನುಸುಳುಕೋರರನ್ನು ಪತ್ತೆಹಚ್ಚಿ ಗಡಿಪಾರು ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಈ ಸಂಬAಧಿತ ಮನವಿಯನ್ನು ತಾಲೂಕು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಸಲ್ಲಿಸಿದ ಪ್ರತಿಭಟನಾಕಾರರು, ಮುಂದಿನ ೪೦ ದಿನಗಳ ಒಳಗೆ ಸ್ಪಂದÀನ ಇಲ್ಲದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿದರು.

ಜೇಸೀ ವೇದಿಕೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್, ೪೦ ವರ್ಷ ಕಳೆದರೂ ಸರ್ಕಾರಗಳು ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಕ್ಕೆ ತಂದಿಲ್ಲ. ಕನ್ನಡಿಗರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ನೀಡುವ ವರದಿಯ ಅನುಷ್ಠಾನ ಆಗದೇ ಇರುವುದರಿಂದ ಕರ್ನಾಟಕದಲ್ಲಿ ಕನ್ನಡಿಗರ ಭವಿಷ್ಯ ದುಸ್ಥಿತಿಯಲ್ಲಿದೆ ಎಂದರು.

ಅಕ್ರಮ ಬಾಂಗ್ಲಾ ವಲಸಿಗರು ಅಸ್ಸಾಮಿಗರ ಸೋಗಿನಲ್ಲಿ ನೆಲೆಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಕಾರ್ಮಿಕರ ಬದುಕು ಬೀದಿಗೆ ಬರುತ್ತಿದೆ. ಬೆಂಗಳೂರಿನಲ್ಲಿಯೇ ಬಾಂಗ್ಲಾ ದೇಶದವರಿಗೆ ಸರ್ಕಾರವೇ ಮನೆ ನೀಡಿದೆ. ಅಂದು ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದು ಪ್ರವೀಣ್ ಶೆಟ್ಟಿ ಬಣದ ಕರವೇ ಮಾತ್ರ ಎಂದ ದೀಪಕ್, ಕೇವಲ ಆಧಾರ್ ಕಾರ್ಡ್ ಮಾಡಿಸಿಕೊಂಡು ಬಂದಿರುವ ಬಾಂಗ್ಲಾದೇಶಿಗರನ್ನು ಪತ್ತೆಹಚ್ಚುವ ಕಾರ್ಯ ಆಗಬೇಕಿದೆ ಎಂದು ಒತ್ತಾಯಿಸಿದರು.

ವಲಸಿಗರಿಂದ ೨೦೨೫ರ ವರ್ಷದಲ್ಲಿ ೬೨ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಅಸ್ಸಾಮಿಗರಿಂದ ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂದರು.

ಶAಕಿತ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ತೋಟ ಕಾರ್ಮಿಕರಾಗಿ ಬಂದವರು ಇದೀಗ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ದೂರಿದ ಅವರು, ಅಕ್ರಮ ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡುವವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಅಕ್ರಮ ನುಸುಳುಕೋರರ ಪತ್ತೆಗೆ ಪ್ರತಿ ಜಿಲ್ಲೆಯಲ್ಲಿಯೂ ಎನ್.ಐ.ಎ. ಉಪ ಕಚೇರಿ ತೆರೆಯಬೇಕು. ವಲಸಿಗರ ಚಲನ ವಲನ ದಾಖಲಾಗಬೇಕು. ದೇಶದ ಐಕ್ಯತೆ, ಭದ್ರತೆ, ಭವಿಷ್ಯದ ವಿಚಾರದಲ್ಲಿ ಕರವೇ ನಿರಂತರ ಹೋರಾಟ ಮಾಡಲಿದೆ ಎಂದರು.

ಅರೆಸೇನಾ ಪಡೆಯ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ, ೧೯೭೧ ರಿಂದಲೂ ಬಾಂಗ್ಲಾ ವಲಸಿಗರು ಗಡಿಯ ಮೂಲಕ ಒಳನುಗ್ಗಿ ಅಸ್ಸಾಮಿನಲ್ಲಿ ನೆಲೆಸಿದ್ದಾರೆ. ಅವರನ್ನು ಈವರೆಗೆ ಓಡಿಸಲು ಸಾದ್ಯವಾಗಿಲ್ಲ. ಇದೀಗ ಎಲ್ಲೆಡೆ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸುತ್ತಿದ್ದಾರೆ. ಕೊಡಗಿನ ಎಲ್ಲರೂ ಭವಿಷ್ಯದ ದೃಷ್ಟಿಯಿಂದ ಜಾಗೃತಗೊಳ್ಳಬೇಕು ಎಂದರು.

ಕಾನೂನು ಸಲಹೆಗಾರ ಕಾಟ್ನಮನೆ ವಿಠಲ್ ಗೌಡ ಮಾತನಾಡಿ, ಅಕ್ರಮ ಬಾಂಗ್ಲಾ ವಲಸಿಗರು ಕೇವಲ ಕೊಡಗಿನ ಸಮಸ್ಯೆಯಲ್ಲ. ಇಡೀ ಭಾರತ ದೇಶದ ಸಮಗ್ರತೆಯ ಸಮಸ್ಯೆಯಾಗಿದೆ. ಗಡಿಗಳನ್ನು ಹಂಚಿಕೊAಡಿರುವ ರಾಜ್ಯಗಳ ಮೂಲಕ ಬಾಂಗ್ಲಾದವರು ಒಳಬರುತ್ತಿದ್ದಾರೆ. ೪ ಸಾವಿರ ಕಿ.ಮೀ. ಭಾರತ ಬಾಂಗ್ಲಾ ಗಡಿ ಹಂಚಿಕೊAಡಿದೆ. ಈ ಭಾಗದ ರಾಜಕಾರಣಿಗಳ ಸ್ವಹಿತಾಸಕ್ತಿಯಿಂದ ಅವರಿಗೆ ಓಟರ್ ಕಾರ್ಡ್ ಕೊಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಅಸ್ಸಾಮಿಗರಿಂದ ಸಮಸ್ಯೆಯಿಲ್ಲ; ಅಸ್ಸಾಮಿಗರ ಹೆಸರಿನಲ್ಲಿ ಬಂದಿರುವ ಬಾಂಗ್ಲಾದವರಿAದ ದೇಶಕ್ಕೆ, ಕೊಡಗಿಗೆ ಸಮಸ್ಯೆಯಿದೆ ಎಂದರು.

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ ಮಾತನಾಡಿ, ಪ್ರತಿಭಟನಾ ಮೆರವಣಿಗೆ ಮತ್ತು ಸಭೆಗೆ ಪೊಲೀಸ್ ಅನುಮತಿ ಪಡೆಯಲು ತೆರಳಿದ ಸಂದರ್ಭ, ಬಾಂಗ್ಲಾದವರು ಎಲ್ಲಿದ್ದಾರೆ ತೋರಿಸಿ ಎಂದು ಪೊಲೀಸ್ ಅಧಿಕಾರಿಯೋರ್ವರು ಕರವೇ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ. ನಾವೇ ಬಾಂಗ್ಲಾದವರನ್ನು ಪತ್ತೆಹಚ್ಚುವುದಾದರೆ ಪೊಲೀಸ್ ವ್ಯವಸ್ಥೆ ಯಾಕೆ ಬೇಕು? ಎಂದು ಪ್ರಶ್ನಿಸಿದರು. ಇಂತಹ ಧೋರಣೆಗಳ ಮೂಲಕ ಹೋರಾಟಗಾರರನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ೨೦ ಲಕ್ಷ ಬಾಂಗ್ಲಾ ವಲಸಿಗರಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಸಿಕ್ಕಿದೆ. ಶಾಸಕ ಡಾ. ಮಂತರ್ ಗೌಡ ಅವರೂ ಸಹ ಸದನದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂಬುದೂ ತಿಳಿಯಬೇಕು ಎಂದರು.

ಸಭೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡ ಹೆಚ್.ಎಂ. ಸೋಮಪ್ಪ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಕರವೇ ಯುವ ಘಟಕದ ಅಧ್ಯಕ್ಷ ವಸಂತ್ ಆಚಾರ್ಯ, ತಾಲೂಕು ಅಧ್ಯಕ್ಷ ರೋಹಿತ್ ಗೌಡ, ಕುಶಾಲನಗರ ಅಧ್ಯಕ್ಷ ಆಶಿಕ್, ಮಡಿಕೇರಿಯ ವಿನೋದ್ ಎಂ.ಜೆ., ಹಾಸನ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಸೋಮವಾರಪೇಟೆ ನಗರ ಘಟಕದ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಯುವ ಘಟಕದ ಅಧ್ಯಕ್ಷ ದಿನೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕೊಡ್ಲಿಪೇಟೆಯ ರಾಜೇಶ್, ಕಾರ್ಮಿಕ ಘಟಕದ ಅಧ್ಯಕ್ಷ ದುರ್ಗೇಶ್, ಕೆ.ಪಿ. ರವೀಶ್, ಅಬ್ಬಾಸ್ ಬಜೆಗುಂಡಿ, ಮಹಿಳಾ ಘಟಕದ ವೇದಾವತಿ, ಶೃತಿ, ಲತಾ, ಸೇರಿದಂತೆ ಇತರರು ಇದ್ದರು.