ಸೋಮವಾರಪೇಟೆ, ಮಾ. ೨ : ಸರ್ಕಾರಗಳ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಆಹಾರ ನಿರೀಕ್ಷಕಿ ಯಶಸ್ವಿನಿ ಈಗಾಗಲೇ ೧೦೩೨ ಹಸಿರು ಪಡಿತರ ಚೀಟಿಗಳು ಎಪಿಲ್ ಪಡಿತರ ಚೀಟಿಗಳಾಗಿ ಬದಲಾಗಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸರ್ಕಾರ ಕೆಲವೊಂದು ಮಾನದಂಡಗಳನ್ನು ನಿಗದಿಗೊಳಿಸಿ, ಅದರಂತೆ ಪಡಿತರ ಚೀಟಿಗಳನ್ನು ಬದಲಿಸಲಾಗಿದೆ. ಯಾರ ಕುಟುಂಬದಲ್ಲಿ ರೂ. ಒಂದು ಲಕ್ಷ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಆದಾಯ ಇರುವವರು, ೩ ಹೆಕ್ಟೇರ್ ಕೃಷಿ ಭೂಮಿ ಇರುವವರು, ಸಾವಿರ ಘನ ಅಡಿಗಿಂತಲೂ ದೊಡ್ಡ ಮನೆಯಲ್ಲಿ ಇರುವವರು ಹಾಗೂ ಆದಾಯ ತೆರಿಗೆ ನೀಡುವವರನ್ನು ಹಸಿರು ಪಡಿತರ ಚೀಟಿಯಿಂದ ಎಪಿಲ್ ಚೀಟಿದಾರರನ್ನಾಗಿ ಬದಲಾಯಿಸಿದೆ ಎಂದು ತಿಳಿಸಿದರು.

ಈಗಾಗಲೇ ಹಸಿರು ಪಡಿತರ ಚೀಟಿ ಬದಲಾದವರಲ್ಲಿ ೨೫೬ ಜನರು ಮರುಪರಿಶೀಲನೆಗೆ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ೬೦ ಅರ್ಜಿಗಳ ಪರಿಶೀಲನೆ ಮಾಡಲಾಗಿದೆ. ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಎಲ್ಲೆಡೆ ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯಲು ಕಷ್ಟವಾಗುತ್ತಿದೆ. ಕೆಲವು ಕುಟುಂಬದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರಿದ್ದರೆ, ಅವರನ್ನು ಪಡಿತರ ಚೀಟಿಯಿಂದ ಹೊರಗಿಟ್ಟು ನೂತನ ಪಡೆಯಲು ಅವಕಾಶ ಇದ್ದು, ನೂತನ ಅರ್ಜಿ ಸಲ್ಲಿಸಬಹುದು ಎಂದರು.

ಕೆಎಸ್‌ಆರ್‌ಟಿಸಿಯಿಂದ ಬರುವ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಇಲಾಖೆಗೆ ಸಂಬAಧಿಸಿದ ಸೂಕ್ತ ಮಾಹಿತಿ ನೀಡಬೇಕು ಎಂದು ಅಧ್ಯಕ್ಷರು ಡಿಪೋ ವ್ಯವಸ್ಥಾಪಕ ಈರಸಪ್ಪ ಅವರಿಗೆ ಸೂಚಿಸಿದರು. ಕೆಲವು ಬಸ್‌ಗಳಲ್ಲಿ ಚಾಲಕರು ಮತ್ತು ನಿರ್ವಾಹಕರ ನಡುವೆ ಹೊಂದಾಣಿಕೆ ಕೊರತೆಯಿಂದ ಜಗಳವಾಡುತ್ತಿದ್ದು, ಪ್ರಯಾಣಿಕರಿಗೆ ಇರುಸು ಮುರುಸಾಗುತ್ತಿದೆ. ಮಹಿಳಾ ಪ್ರಯಾಣಿಕರ ಬಗ್ಗೆ ಅಸಡ್ಡೆ ಮಾತನಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇವರಿಗೆ ಪ್ರಯಾಣಿಕರೊಂದಿಗೆ ಸೌಜ್ಯನಿಂದ ವರ್ತಿಸುವ ಬಗ್ಗೆ ಕಾರ್ಯಾಗಾರ ನಡೆಸಬೇಕೆಂದರು.

ಹAಡ್ಲಿ ಗ್ರಾಮದಲ್ಲಿ ವೇಗದೂತ ಬಸ್‌ಗಳನ್ನು ನಿಲ್ಲಿಸಬೇಕೆಂದು ಹಲವಾರು ಸಮಯದಿಂದ ಪ್ರಯಾಣಿಕರ ಬೇಡಿಕೆಯಾಗಿದ್ದು, ಈಗಾಗಲೇ ನಿರ್ಣಯ ಮಾಡಿ ಇಲಾಖೆಗೆ ಕಳುಹಿಸಲಾಗಿದೆ. ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು. ಇಲಾಖಾಧಿಕಾರಿ ಮಾತನಾಡಿ, ಸ್ಥಳೀಯವಾಗಿ ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮೇಲಾಧಿಕಾರಿಗಳಿಗೆ ಬರೆದು ನಂತರ ಕ್ರಮ ತೆಗೆದುಕೊಳ್ಳಬೇಕಿದೆ. ಜಿಲ್ಲೆಯಲ್ಲಿ ಸಾಕಷ್ಟು ಬಸ್‌ಗಳಿಗೆ ಬೇಡಿಕೆ ಇದೆ. ಕುಶಾಲನಗರ ಡಿಪೋ ಆದ ನಂತರ ಅಲ್ಪಮಟ್ಟಿಗೆ ಸಮಸ್ಯೆ ಪರಿಹಾರವಾಗಬಹುದು. ಜಿಲ್ಲೆಯಲ್ಲಿ ಮತ್ತೊಂದು ಡಿಪೋ ಆದಲ್ಲಿ ವಿಭಾಗಿಯ ಕಚೇರಿ ಇಲ್ಲಿಯೇ ಪ್ರಾರಂಭವಾಗುವುದರಿAದ ಯಾವುದೇ ಸಮಸ್ಯೆಗಳು ಎದುರಾದರೂ, ಇಲ್ಲಿಯೇ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು. ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ಕಚೇರಿ, ಯುವನಿಧಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ಇಲಾಖೆಯ ಮಾಹಿತಿ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಪ್ರಬಾರ ಸಹಾಯಕ ನಿರ್ದೇಶಕ ಪಿ.ವಿ. ಶ್ರೀನಿವಾಸ್ ಇದ್ದರು.