ಮಡಿಕೇರಿ, ಮಾ. ೨: ಇಬ್ಬರ ನಡುವಿನ ಜಗಳವನ್ನು ಧರ್ಮಧರ್ಮಗಳ ನಡುವೆ ತಂದುಹಾಕಿ ಕೆಲವು ವ್ಯಕ್ತಿಗಳು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಾಪೋಕ್ಲು ಜಮಾಅತ್‌ನ ಅಧ್ಯಕ್ಷ ಅಬ್ದುಲ್ ರೆಹಮಾನ್ ಆರೋಪಿಸಿದರು.

ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಹನ ಬದಿಗೆ ಸರಿಸುವ ವಿಚಾರದಲ್ಲಿ ಸುಹೇಲ್ ಮತ್ತು ಗೌತಮ್ ನಡುವೆ ಜಗಳ ಉಂಟಾಗಿದ್ದು, ಹೊಡೆದಾಡಿಕೊಂಡಿದ್ದಾರೆ. ಆದರೆ, ಉದ್ದೇಶಪೂರ್ವಕವಾಗಿ ಹಿಂದುಗಳ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂದು ಕೆಲವು ವ್ಯಕ್ತಿಗಳು ಬಿಂಬಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ದೂರಿದ ಅವರು, ನಾಪೋಕ್ಲು ವ್ಯಾಪ್ತಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರು ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಗೌರಿ ಗಣೇಶ, ರಂಜಾನ್, ಕ್ರಿಸ್ಮಸ್ ಹಬ್ಬವನ್ನು ಎಲ್ಲರು ಒಗ್ಗಟ್ಟಾಗಿ ಆಚರಿಸುತ್ತಿದ್ದೇವೆ. ಆದರೆ, ಕೆಲವÀರು ಹಿಂದು ಮುಸ್ಲಿಂ ಎಂದು ಧರ್ಮಧರ್ಮಗಳ ನಡುವೆ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಅವರಿಗೂ ಈ ಗಲಭೆಗೂ ಸಂಬAಧವಿಲ್ಲ. ಆದರೂ, ಇಸ್ಮಾಯಿಲ್ ಅವರು ರಾಜೀನಾಮೆ ನೀಡಬೇಕು ಎಂದು ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಇಸ್ಮಾಯಿಲ್ ಅವರ ರಾಜೀನಾಮೆ ಕೇಳಲು ಇವರು ಯಾರು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಇದ್ದು, ಅವರಿಗೆ ತಿಳಿದಿದೆ ಎಂದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ತನ್ನ ಪುತ್ರ ಸಿದ್ಧಿಕ್, ಗೌತಮ್‌ಗೆ ಹಲ್ಲೆ ಮಾಡಿದ್ದಾನೆ ಎಂದು ಕೆಲವು ವ್ಯಕ್ತಿಗಳು ಆರೋಪ ಮಾಡಿದ್ದಾರೆ. ಆ ವ್ಯಕ್ತಿಗಳು ಮಕ್ಕಿಶಾಸ್ತಾವು ದೇವಸ್ಥಾನದಲ್ಲಿ ಪ್ರಮಾಣ ಮಾಡಿ ನನ್ನ ಪುತ್ರ ಹಲ್ಲೆ ಮಾಡಿದ್ದಾನೆ ಎಂದು ಹೇಳಿದರೆ, ನನ್ನ ಮಗನಿಗೆ ಶಿಕ್ಷೆಯನ್ನು ನಾನೇ ಕೊಡಿಸುತ್ತೇನೆ ಎಂದು ಸವಾಲೆಸೆದರು.

ಗಲಭೆ ವಿಚಾರವನ್ನು ಖಂಡಿಸಿ ನಾಪೋಕ್ಲುವಿನಲ್ಲಿ ಪ್ರತಿಭಟನೆ ನಡೆಸುವ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್‌ಗೆ ಧಿಕ್ಕಾರ ಎಂದು ಕೂಗಿದ್ದಾರೆ. ಗಲಭೆಗೂ ನನಗೆ ಧಿಕ್ಕಾರ ಕೂಗುವುದಕ್ಕೂ ಏನು ಸಂಬAಧ ಎಂದು ಪ್ರಶ್ನಿಸಿದ ಅವರು, ರಾಜಕೀಯ ಲಾಭಕ್ಕಾಗಿ ಗಲಭೆಯನ್ನು ಬಳಸುತ್ತಿರುವುದು ತಪ್ಪು ಎಂದರು. ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಜಮಾಅತ್‌ನ ಮಾಜಿ ಅಧ್ಯಕ್ಷ ಅಜೀಜ್, ಜಮಾಅತ್‌ನ ಉಪಾಧ್ಯಕ್ಷ ಜಿ.ಎಂ. ಬದ್ರುದ್ದೀನ್ ಇದ್ದರು.