ಕುಶಾಲನಗರ, ಮಾ. ೨: ಗಾಯನ ಮೂಲಕ ನೆಮ್ಮದಿ ಸಂತೋಷ ಲಭಿಸಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮ ಬಳಿ ಎನ್ಟಿಸಿ ಪ್ರವಾಸಿ ಕೇಂದ್ರದ ಆವರಣದಲ್ಲಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಆಶ್ರಯದಲ್ಲಿ ರಾಷ್ಟçಕವಿ ಜಿಎಸ್ ಶಿವರುದ್ರಪ್ಪ ಅವರ ಜನ್ಮದಿನದ ಪ್ರಯುಕ್ತ ನಡೆದ ಗೀತ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಮಾನಸಿಕ ಆರೋಗ್ಯವನ್ನು ಸರಿಪಡಿಸುತ್ತದೆ, ಜನರ ನಡುವೆ ಬಾಂಧವ್ಯ ಬೆಳೆಸಲು ಸಂಗೀತದ ಮೂಲಕ ಸಾಧ್ಯ ಎಂದ ಅವರು ರಾಷ್ಟçಕವಿ ಜಿ.ಎಸ್. ಶಿವರುದ್ರಪ್ಪ ಅವರು ಕೃತಿ, ಕವನ ವಿಮರ್ಶೆಗಳ ಮೂಲಕ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ‘ಶಕ್ತಿ’ ಸಂಪಾದಕರಾದ ಜಿ. ಚಿದ್ವಿಲಾಸ್ ಮಾತನಾಡಿ ಭಾವಗೀತೆಗಳು ಇಂದಿಗೂ ಜೀವಂತವಾಗಿದ್ದು, ಅವುಗಳ ಮೂಲಕ ಬದುಕಿನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ ಎಂದರು. ಸಂಗೀತ ಭಜನೆ ಮೂಲಕ ವಿಶಿಷ್ಟ ಅನುಭವ ಪಡೆಯಲು ಸಾಧ್ಯ ಎಂದ ಅವರು ಭಾವಗೀತೆ, ಸುಗಮ ಸಂಗೀತಗಳಲ್ಲಿ ಕರೋಕೆ ಬಳಕೆಗಿಂತಾ ಪಕ್ಕವಾದ್ಯಗಳನ್ನು ಬಳಸುವಂತಾಗಬೇಕು ಎಂದರು.
ದೇಶದಲ್ಲಿ ಸುಗಮ ಸಂಗೀತ ಎನ್ನುವ ಕ್ಷೇತ್ರ ಕರ್ನಾಟಕದಲ್ಲಿ ಅತ್ಯಂತ ಪ್ರಚಲಿತವಾಗಿದ್ದು, ಅದು ಇಲ್ಲಿನ ಕವಿಗಳ ಕೊಡುಗೆ ಎಂದು ಹರ್ಷ ವ್ಯಕ್ತಪಡಿಸಿದರು.
ಪೋಷಕರು ಮಕ್ಕಳಿಗೆ ತಬಲ ಹಾರ್ಮೋನಿಯಂ ಮತ್ತಿತರ ವಾದ್ಯಗಳನ್ನು ಕಲಿಸುವ ಬಗ್ಗೆ ಆಸಕ್ತಿ ತೋರಿಸಬೇಕು. ಶಾಸ್ತಿçÃಯ ಸಂಗೀತದಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ಸಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕನ್ನಡ ಮಣ್ಣಿನ ಶ್ರೀಮಂತಿಕೆಯನ್ನು ನಮ್ಮ ಕವಿಗಳು ಹೆಚ್ಚಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಅವರು ಆಶಿಸಿದರು. ಕಾರ್ಯಕ್ರಮದಲ್ಲಿ ಗಾಯಕರಾದ ಜಿ. ಚಿದ್ವಿಲಾಸ್, ಸಂಧ್ಯಾ ಚಿದ್ವಿಲಾಸ್, ಗಣೇಶ್ ಭಟ್, ವೈಭವಿ ಭಟ್ ರವಿ ಅಥರ್ವ, ಸಂಧ್ಯಾ ರಾಜೀವ್ ಮತ್ತು ಶೇಖರ್ ಪಾಲ್ಗೊಂಡಿದ್ದರು. ಪರಿಷತ್ ವತಿಯಿಂದ ಗಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯೋಜಕರಾದ ಅಬ್ದುಲ್ ಸಲಾಂ, ಆಶಾ ಸಲಾಂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ ಚಂದ್ರಕಲಾ, ಪರಿಷತ್ ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜ್ ಇದ್ದರು. ಬಿ.ಎಸ್. ಪರಮೇಶ್ ಪ್ರಾರ್ಥಿಸಿ, ಟಿ.ವಿ. ಶೈಲಾ ಸ್ವಾಗತಿಸಿ, ಹೇಮಲತಾ ನಿರೂಪಿಸಿದರು. ದೇವಿ ಪ್ರಸಾದ್ ವಂದಿಸಿದರು.