ಭಾಗಮಂಡಲ ವ್ಯಾಪ್ತಿಯ ಚೇರಂಗಾಲದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದ ಹೈಕೋರ್ಟ್ ವಕೀಲ ಮೊಟ್ಟನ ರವಿಕುಮಾರ್ (೭೪) ತಾ. ೨೮ ರಂದು ಅನಾರೋಗ್ಯದಿಂದ ನಿಧನರಾದರು.
ಭಾಗಮಂಡಲದಲ್ಲಿ ಕಾವೇರಿ ಜನ್ಮಭೂಮಿ ಟ್ರಸ್ಟ್ ಸ್ಥಾಪಿಸಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ, ಗ್ರಾಮೀಣ ಕ್ರೀಡಾಪಟುಗಳನ್ನು ಉತ್ತೇಜಿಸಿದ್ದ ಇವರು, ಬಿ.ಎಸ್.ಎನ್.ಎಲ್. ಮತ್ತು ಭಾರತೀಯ ಭೂಸೇನೆಗೆ ಕಾನೂನು ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಾರೆ. ಅನಾಥಾಶ್ರಮ ಸ್ಥಾಪಿಸಿದ್ದಾರೆ. ಭಾಗಮಂಡಲ-ಕೋರAಗಾಲ-ಚೇರAಗಾಲ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದ ಇವರು, ಕಾವೇರಿ ನದಿ ಹೂಳೆತ್ತುವ ಬಗ್ಗೆ ಸ್ವಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾವೇರಿ ನದಿ ಶುದ್ಧೀಕರಣಕ್ಕೆ ಶ್ರಮಿಸಿದ್ದರು. ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯವಾದಿ ಆಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವಾರು ಪ್ರಕರಣಗಳ್ಲಿ ವಾದಿಸಿ ಸೈ ಎನ್ನಿಸಿಕೊಂಡಿದ್ದರು.ಚೇರAಗಾಲ ಗ್ರಾಮದ ಮೊಟ್ಟನ ತಳಾರಬಾಣೆ ಎಂಬಲ್ಲಿ ಭಾಗಮಂಡಲ ವ್ಯಾಪ್ತಿಯಿಂದ ತೆರಳಿ ದೇಶ ಸೇವೆ ಮಾಡಿರುವ ಸೈನಿಕರ ಸ್ಮಾರಕವನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ರವಿಕುಮಾರ್ ಹೃದಯ ಸಂಬAಧಿ ಕಾಯಿಲೆಗೆ ಭಾಗಮಂಡಲ ನಾಡಿನ ಜನ ಮೈಸೂರು, ಮಂಗಳೂರಿಗೆ ಹೋಗುವುದನ್ನು ತಪ್ಪಿಸಲು ಮೊಟ್ಟನ ತಳಾರಬಾಣೆ ಎಂಬಲ್ಲಿ ವಿಶ್ವದರ್ಜೆಯ ಹೃದಯ ಸಂಬAಧಿ ಆಸ್ಪತ್ರೆಯನ್ನು ಪ್ರಾರಂಭಿಸಲು ಪತ್ರ ವ್ಯವಹಾರ ಮಾಡಿದ್ದರು. ಮೃತರು ಕಣ್ಣುಗಳನ್ನು ದಾನ ಮಾಡಿದ್ದು, ಪತ್ನಿ, ಈರ್ವರು ಪುತ್ರರನ್ನು ಅಗಲಿದ್ದಾರೆ.