ಮಡಿಕೇರಿ ಫೆ. ೨೭ : ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಆಯೋಜಿತ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ನಾರ್ಡಿಕ್ ಮಹಿಳಾ ಸ್ಪಿçಂಟ್ ೧.೦೫ ಕಿ.ಮೀ. ವಿಭಾಗದಲ್ಲಿ ದಕ್ಷಿಣ ಕಾಶ್ಮೀರ ಕೊಡಗು ಮೂಲದ ತೆಕ್ಕಡ ಭವಾನಿ ನಂಜುAಡ ಸ್ವರ್ಣ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಈ ಕೂಟದಲ್ಲಿ ಭವಾನಿ ನಂಜುAಡ ಅವರಿಗೆ ಸಂದಿರುವ ಐದನೇ ಸ್ವರ್ಣ ಪದಕ ಇದಾಗಿದೆ.
ಸಾಧನೆಯನ್ನು, ಈ ಸ್ವರ್ಣ ಪದಕವನ್ನು ತಂದೆ ಮತ್ತು ತಾಯಿಗೆ ಸಮರ್ಪಿಸುವೆ. ಚಳಿಗಾಲದ ಕ್ರೀಡಾಕೂಟ ಸೇರಿದಂತೆ ಜಗತ್ತಿನಾದ್ಯಂತಲಿನ ಕ್ರೀಡಾಸ್ಪರ್ಧೆಗಳಲ್ಲಿ ನಾನು ಪಾಲ್ಗೊಂಡು ಸಾಧನೆ ತೋರಬೇಕಾದರೆ ಅದರ ಹಿಂದಿನ ಸ್ಪೂರ್ತಿಯೇ ಕಾರಣ ಎಂದು ಚಿನ್ನ ಗೆದ್ದ ಹುಡುಗಿ ಭವಾನಿ ಭಾವಪರವಶರಾಗಿ ನುಡಿದರು.
ಕಳೆದ ಬಾರಿಯ ಚಳಿಗಾಲದ ಖೇಲೋ ಇಂಡಿಯಾದಲ್ಲಿ ಮೂರು ಸ್ವರ್ಣ ಪದಕ ಗೆದ್ದಿದ್ದ ಭವಾನಿ ಈ ಬಾರಿ ಐದು ಸ್ವರ್ಣ ಪದಕ ಗೆಲ್ಲುವ ಮೂಲಕ ಸಾಧನೆ ಹೆಚ್ಚಿಸಿಕೊಂಡಿದ್ದಾರೆ. ಕ್ರಾಸ್ಕಂಟ್ರಿ ಸ್ಕೀಯಿಂಗ್ ವಿಶ್ವಕಪ್ನಲ್ಲಿ ಪಾಲ್ಗೊಂಡ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಯೂ ತೆಕ್ಕಡ ಭವಾನಿ ಅವರದ್ದಾಗಿದೆ.
ಭವಾನಿ ಸಾಧನೆ ಗಮನಿಸುವುದಾದಲ್ಲಿ : ತೆಕ್ಕಡ ನಂಜುAಡ ಮತ್ತು ಪಾರ್ವತಿ ದಂಪತಿ ಪುತ್ರಿಯಾದ ಭವಾನಿ ಈವರೆಗೆ ಸಾಧಿಸಿದ್ದು ಬಹಳಷ್ಟು ನಿಜವಾದ ಅರ್ಥದಲ್ಲಿಯೂ ಭವಾನಿ ಹಿಮಾಲಯ ತಲುಪಿ ಸಾಧನೆ ತೋರಿದ್ದಾರೆ. ಭವಾನಿ ದೆಹಲಿಯ ರಾಜ್ಫಥ್ನಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಕರ್ನಾಟಕ-ಗೋವಾ ಎನ್ಸಿಸಿಯ ಕೆಡೆಟ್ ಆಗಿ ಪಾಲ್ಗೊಂಡು ಹೆಜ್ಜೆಯೂರಿದ್ದರು.
ನಂತರ ಭವಾನಿಯ ಸಾಧನೆಗಳ ಸಂಖ್ಯೆ ಏರುಗತಿಯಲ್ಲಿಯೇ ಸಾಗಿತ್ತು. ಸ್ಕೀಯಿಂಗ್ನಲ್ಲಿ ಬಾಲ್ಯದಲ್ಲಿಯೇ ಆಸಕ್ತಿ ಹೊಂದಿದ್ದ ಭವಾನಿ, ಚಾರಣದಲ್ಲಿಯೂ ಸಾಕಷ್ಟು ಕುತೂಹಲ ಮತ್ತು ಒಲವು ಹೊಂದಿದ್ದರು. ಈ ಆಸಕ್ತಿಯೇ ಭವಾನಿಯನ್ನು ಆ ಕ್ಷೇತ್ರದಲ್ಲಿ ವಿಶ್ವಮಟ್ಟದ ಸಾಧನೆಗೆ ಕಾರಣವಾಗುವಂತೆ ಮಾಡಿದೆ.
ಹಿಮಾಲಯನ್ ಮೌಂಟನೇಯರಿAಗ್ ಸಂಸ್ಥೆಯಿAದ ವಿಶೇಷ ಮಾನ್ಯತೆ ಪಡೆದಿರುವ ಭವಾನಿ, ಇದೇ ಸಂಸ್ಥೆಯಿAದ ತರಬೇತುದಾರರಾಗಿ ಅರ್ಹತೆ ಪಡೆದಿದ್ದಾರೆ. ಈ ಸಂಸ್ಥೆಯಲ್ಲಿ ಹಿಮಾಲಯ ಚಾರಣಿಗರಿಗೆ ೧ ವರ್ಷಗಳ ಕಾಲ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದ್ದರು.
ಜವಹರಲಾಲ್ ಮೌಂಟೇನಿಯರಿAಗ್ ಇನ್ಸ್ಟಿಟ್ಯೂಟ್ನಲ್ಲಿ ಸ್ಕೀಯಿಂಗ್ ತರಬೇತಿ ಪಡೆದಿರುವ ಭವಾನಿ ನ್ಯೂಜಿಲ್ಯಾಂಡ್ ನಿಂದ ೨೦೧೯ ರಿಂದಲೇ ಅಂತರರಾಷ್ಟ್ರೀಯ ಸ್ಕೀಯಿಂಗ್ ಮಾನ್ಯತೆ ಪಡೆದಿರುವ ಸಾಧನೆಗೆ ಕಾರಣರಾಗಿದ್ದಾರೆ.
ರಷ್ಯಾದಲ್ಲಿರುವ ಯುರೋಪಿನ ಅತೀ ಎತ್ತರದ ಶಿಖರ ಖ್ಯಾತಿಯ ಮೌಂಟ್ ಎಲ್ಬ್ರಸ್ ಶಿಖರವನ್ನು (೫,೬೪೨ ಮೀಟರ್ ಎತ್ತರ) ಏರಿರುವ ಸಾಧನೆ ಮಾಡಿರುವ ಭವಾನಿ, ನ್ಯೂಜಿಲ್ಯಾಂಡ್ ನಲ್ಲಿರುವ ಮೌಂಟ್ ರೌಪೇಹು ಗಿರಿಯನ್ನೂ ೨,೭೯೭ ಮೀಟರ್ ಎತ್ತರಕ್ಕೇರಿ ದಾಖಲೆ ಮಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿಯೂ ಭವಾನಿ ಸಾಧನೆ ಗಮನಾರ್ಹ ಕ್ರಾಸ್ ಕಂಟ್ರಿ ಸ್ಕೀಯಿಂಗ್, ನಾರ್ಡಿಕ್ ವರ್ಲ್ಡ್ ಸ್ಕೀ ಚಾಂಪಿಯನ್ ಶಿಪ್, ಏಷ್ಯನ್ ಸಮ್ಮರ್ ಬಿಯಾಟಿನ್ ಚಾಂಪಿಯನ್ ಶಿಪ್ನಲ್ಲಿಯೂ ಪಾಲ್ಗೊಂಡ ಭಾರತೀಯ ಸ್ಪರ್ಧಿ ಎಂಬ ಹಿರಿಮೆಯೂ ಭವಾನಿಯವರದ್ದು.
ಅಂತರರಾಷ್ಟ್ರೀಯ ಸ್ಕೀಯಿಂಗ್ ಫೆಡರೇಷನ್ನಲ್ಲಿ ಭಾರತೀಯ ಸದಸ್ಯೆಯಾಗಿ ಭವಾನಿ ಆಯ್ಕೆಯಾಗಿದ್ದು, ಸ್ಕೀಯಿಂಗ್ನಲ್ಲಿ ಜಾಗತಿಕ ಮಾನ್ಯತೆ ಪಡೆದ ದಕ್ಷಿಣ ಭಾರತದ ಪ್ರಥಮ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆ ಭವಾನಿಯವರದ್ದು. ಅಂತೆಯೇ ಅಂತರರಾಷ್ಟ್ರೀಯ ಸ್ಕೀಯಿಂಗ್ ತರಬೇತುದಾರರು ಎಂಬ ಮಾನ್ಯತೆ ಪಡೆದ ಪ್ರಥಮ ಭಾರತೀಯ ಸ್ಕೀಯಿಂಗ್ ಪಟು ಎಂಬ ದಾಖಲೆಗೂ ಕಾರಣರಾಗಿದ್ದಾರೆ.
೨೦೨೫ ರಲ್ಲಿ ಏಷ್ಯನ್ ವಿಂಟರ್ ಗೇಮ್ಸ್ನಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ಭಾರತೀಯ ಕ್ರೀಡಾಳುಗಳನ್ನು ಪ್ರತಿನಿಧಿಸಿದ್ದ ಹಿರಿಮೆಯೂ ಭವಾನಿಯವರದ್ದು. ವಿಶ್ವ ಕ್ರಾಸ್ ಕಂಟ್ರಿ ಸ್ಕೀಯಿಂಗ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಸಾಧನೆಗೆ ಕಾರಣಳಾದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಯನ್ನು ಹೊಂದಿರುವ ತೆಕ್ಕಡ ಭವಾನಿ ೫ ಕಿ.ಮೀ. ರೇಸ್ನ್ನು ಕೇವಲ ೧೮ ನಿಮಿಷ ೧೦ ಸೆಕೆಂಡ್ನಲ್ಲಿ ಕ್ರಮಿಸಿ ರಾಷ್ಟಿçÃಯ ದಾಖಲೆ ಬರೆದಿದ್ದಾರೆ. ನಾರ್ಡಿಕ್ ವರ್ಲ್ಡ್ ಸ್ಕೀ ಚಾಂಪಿಯನ್ ಶಿಪ್ ೨೦೨೫ ರಲ್ಲಿ ಭಾರತದ ಏಕೈಕ ಮಹಿಳಾ ಪ್ರತಿನಿಧಿ ಎಂಬ ಹಿರಿಮೆ ಪಾತ್ರರಾಗಿದ್ದಾರೆ.
೫ನೇ ಖೇಲೋ ಇಂಡಿಯಾ ಪಂದ್ಯಾಟದ ೫ ಕಿ. ಮೀ. ರೇಸ್ ನಲ್ಲಿ ಚಿನ್ನದ ಪದಕ ಮತ್ತ ೧.೦೪ ಕಿ.ಮೀ. ಸ್ಪಿçಂಟ್ನಲ್ಲಿ ಬೆಳ್ಳಿ ಪದಕ ಧರಿಸಿದ ಕೊಡಗಿನ ಹೆಮ್ಮೆಯ ಕುವರಿಯಾಗಿಯೂ ಭವಾನಿ ಕಂಗೊಳಿಸುತ್ತಾರೆ. ಇದೀಗ ೬ನೇ ಖೇಲೋ ಇಂಡಿಯಾದ ಚಳಿಗಾಲದ ಕ್ರೀಡಾಕೂಟದಲ್ಲಿಯೂ ತನ್ನ ದಾಖಲೆ ಗ್ರಾಫ್ ಹೆಚ್ಚಿಸಿಕೊಂಡಿರುವ ಭವಾನಿ ನಂಜುAಡ ೫ ಸ್ವರ್ಣ ಪದಕಗಳನ್ನು ಗಳಿಸಿ ಭಾರತದ ಹೆಮ್ಮೆಯ ಕ್ರೀಡಾತಾರೆ ಎನಿಸಿಕೊಂಡಿದ್ದಾರೆ. ಕೊಡಗಿಗೂ ಭವಾನಿಯ ಈ ಸಾಧನೆ ಕ್ರೀಡಾಕ್ಷೇತ್ರದಲ್ಲಿ ಮತ್ತೊಂದು ಹೆಮ್ಮೆಯ ಕಿರೀಟ ಮುಡಿಸಿದೆ.
-ಅನಿಲ್ ಹೆಚ್. ಟಿ.