ಮಡಿಕೇರಿ, ಫೆ. ೨೬: ವೀರಾಜಪೇಟೆ ತಾಲೂಕಿನ ಪುಲಿಯೇರಿ ಶ್ರೀ ಮಂಗುಯಿಲ್ ಭಗವತಿ ಕ್ಷೇತ್ರದ ೫ನೇ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ಐದು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ವಿಜೃಂಭಣೆಯಿAದ ನಡೆಯಿತು.
ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಪೂಜೋತ್ಸವದಲ್ಲಿ ಪಾಲ್ಗೊಂಡರು. ಉತ್ಸವದ ದಿನದಂದು ಪೂಜಾ ಕಾರ್ಯಕ್ರಮ, ಮಹಾಗಣಪತಿ ಹೋಮ, ಉಷಾಪೂಜೆ, ಕಲಶÀ ಪೂಜೆ, ಮಹಾಪೂಜೆ, ಭಗವತಿ ಪೂಜೆ, ನಂತರ ಚಂಡೆ ವಾದ್ಯದೊಂದಿಗೆ ಅಲಂಕೃತ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಇರಿಸಿ ಗುಹ್ಯ ಅಗಸ್ತೆö್ಯÃಶ್ವರ ದೇವಾಲಯದ ಸಮೀಪದ ಕಾವೇರಿ ನದಿಯಲ್ಲಿ ದೇವಿ ಆರಾಟ್ ನಡೆದು ಪೂಜಾ ಕಾರ್ಯಗಳ ನಂತರ ಮಂಗುಯಿಲ್ ಭಗವತಿ ಕ್ಷೇತ್ರದವರೆಗೆ ಶೋಭಾಯಾತ್ರೆ ನಡೆಯಿತು.
ಭಕ್ತಾದಿಗಳು ದೀಪಗಳನ್ನು ಹಿಡಿದು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ನಂತರ ಮಹಾಪೂಜೆ ಮತ್ತು ದೇವಿಗೆ ಮಹಾ ಮಂಗಳಾರತಿಯೊAದಿಗೆ ವಾರ್ಷಿಕೋತ್ಸವ ತೆರೆಕಂಡಿತು.
ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣಾ ಕಾರ್ಯವು ನಡೆಯಿತು. ಕ್ಷೇತ್ರದ ತಂತ್ರಿಗಳಾದ ಎಳಮನ ಶ್ರೀಧರನ್ ನಂಬೂದರಿಪಾಡ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.
ವಾರ್ಷಿಕೋತ್ಸವದ ಅಂಗವಾಗಿ ಕ್ಷೇತ್ರ ತಳಿರು ತೋರಣ ದೀಪ ಹಾಗೂ ಹೂವಿನ ಅಲಂಕಾರಗಳಿAದ ಕಂಗೊಳಿಸುತ್ತಿತ್ತು. ಕಣ್ಣೂರಿನ ಹರೀಶ್ರೀ ಘೋಕ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಂಗುಯಿಲ್ ಭಗವತಿ ಕ್ಷೇತ್ರದ ಅಧ್ಯಕ್ಷ ಎಂ.ಟಿ ಶಶಿ, ಉಪಾಧ್ಯಕ್ಷ ಸೂರಜ್ ಮನು, ಕಾರ್ಯದರ್ಶಿ ಶೀಲಾ, ಖಜಾಂಚಿ ಪ್ರದೀಪ್, ಪ್ರಮುಖರಾದ ರೆಜಿಲ್, ಮಿನಿ, ಸುರೇಶ, ಸತೀಶ್ ಶೀಲಾ, ನಿತೀಶ್ ಹಾಗೂ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.