ವೀರಾಜಪೇಟೆ, ಫೆ.೨೫: ವೀರಾಜಪೇಟೆ ತಾಲೂಕಿನ ಕರ್ನಾಟಕ ಕೇರಳ ಗಡಿಭಾಗದ ಮಾಕುಟ್ಟದಲ್ಲಿರುವ ಶ್ರೀ ಕಾಕತೋಡು ದೇವಿ ಕ್ಷೇತ್ರದ ಮಹೋತ್ಸವ ಮಾರ್ಚ್ ೧೫ ಮತ್ತು ೧೬ ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ಮಾರ್ಚ್ ೧೫ ರಂದು ಬೆಳಿಗ್ಗೆ ೬:೩೦ ಗಂಟೆಗೆ ಗರ್ಭಗುಡಿಯ ಬಾಗಿಲು ತೆಗೆಯುವುದು, ದೇವಿಗೆ ಅಭಿಷೇಕ, ಗಣಪತಿ ಹೋಮ, ಮಧ್ಯಾಹ್ನದ ಪೂಜೆ, ಸಂಜೆ ೫ ಗಂಟೆಗೆ ಗರ್ಭಗುಡಿಯ ಬಾಗಿಲು ತೆಗೆಯುವುದು ನಂತರ ಭಗವತಿ ಸೇವೆ, ೬ ಗಂಟೆಗೆ ಸಹಸ್ರ ದೀಪ ಅಲಂಕಾರ ಪೂಜೆ, ೬:೩೦ಕ್ಕೆ ದೇವಿ ಪೂಜೆ, ೭:೩೦ಕ್ಕೆ ಪುಷ್ಪಲಂಕಾರ, ರಾತ್ರಿ ೮:೩೦ಕ್ಕೆ ಮಕ್ಕಳ ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಲಿದೆ.

ಮಾ.೧೬ ರಂದು ಬೆಳಿಗ್ಗೆ ೬:೩೦ ಗಂಟೆಗೆ ಗರ್ಭಗುಡಿಯ ಬಾಗಿಲು ತೆಗೆಯುವುದು, ಅಭಿಷೇಕ, ಗಣಪತಿ ಹೋಮ, ಉಷಾ ಪೂಜೆ, ನವಕ ಪೂಜೆ, ಕಲಶಾಭಿಷೇಕ, ಮಧ್ಯಾಹ್ನದ ಪೂಜೆ ನಡೆಯಲಿದೆ. ಸಂಜೆ ೫ ಗಂಟೆಗೆ ಗರ್ಭಗುಡಿಯ ಬಾಗಿಲು ತೆಗೆಯುವುದು, ಭಗವತಿ ಸೇವೆ, ೬ ಗಂಟೆಗೆ ಸರ್ಪ ಬಲಿ, ರಾತ್ರಿ ೮ ಗಂಟೆಗೆ ರಾತ್ರಿ ಪೂಜೆ, ೮:೩೦ಕ್ಕೆ ತಾಲ ಪೋಲಿ ಮೆರವಣಿಗೆಯ ಸ್ವೀಕಾರ ಮತ್ತು ಗುರುತಿ ಪೂಜೆ ನಡೆಯಲಿದೆ. ಎರಡು ದಿನಗಳ ಕಾಲ ಉತ್ಸವ ನಡೆಯಲಿದ್ದು ಎರಡು ದಿನವೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ಪರವಾಗಿ ಅಧ್ಯಕ್ಷ ರಾಧಕೃಷ್ಣ, ಉಪಾಧ್ಯಕ್ಷರಾದ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.