ಕಣಿವೆ, ಫೆ. ೨೩: ಹಾರಂಗಿ ನದಿ ದಂಡೆಯAಚಿನಲ್ಲಿರುವ ಕೂಡಿಗೆಯ ನಿವಾಸಿಗಳ ಮನೆಯಂಗಳದಲ್ಲಿ ಕೋತಿಗಳ ಹಾವಳಿ ಮಿತಿಮೀರಿದ್ದು ಮನೆ ಗಳ ಗೃಹಿಣಿಯರು ಬೇಸತ್ತಿದ್ದಾರೆ.
ನದಿ ದಂಡೆಯ ಬಿದಿರು ಮೆಳೆಗಳಲ್ಲಿ ಹಾಗೂ ಹಾರಂಗಿ ನದಿಗೆ ಅಳವಡಿಸಿರುವ ಕಬ್ಬಿಣದ ಹಳೆಯ ಸೇತುವೆಯ ಕೆಳಭಾಗದಲ್ಲಿ ಬೀಡು ಬಿಟ್ಟಿರುವ ಕೋತಿಗಳು, ಗುಂಪು ಗುಂಪಾಗಿ ಮನೆಯಂಗಳಕ್ಕೆ ಬರುತ್ತಿವೆ. ಮನೆಗಳ ಹಿಂಬದಿಯ ಅಂಗಳದಲ್ಲಿ, ಆರ್ಸಿಸಿ ಮೇಲೆ ಬಟ್ಟೆಗಳನ್ನು ತೊಳೆದು ಒಣಗಲು ಹಾಕಿದ್ದರೆ ಅವುಗಳನ್ನು ಕಿತ್ತೊಯ್ಯುತ್ತಿವೆ.
ಜೊತೆಗೆ ಮಕ್ಕಳ ಬಟ್ಟೆಗಳನ್ನು ಹರಿದು ಹಾಕುತ್ತಿವೆ. ಮನೆಯ ಅಂಗಳಗಳಲ್ಲಿ ಬೆಳೆದ ತರಕಾರಿ, ಕಾಯಿ ಪಲ್ಯೆಗಳನ್ನು ಕಿತ್ತು ತಿಂದು ನಾಶಮಾ ಡುತ್ತಿವೆ. ಅಡುಗೆ ಮನೆಯ ಆಹಾರ ತ್ಯಾಜ್ಯಗಳನ್ನು ಜಾನುವಾರುಗಳಿಗೆ ನೀಡಲೆಂದು ಬಕೆಟ್ಗಳಲ್ಲಿ ಹಾಕಿಟ್ಟರೆ ಅಲ್ಲಿಗೂ ಬಂದು ತ್ಯಾಜ್ಯ ನೀರನ್ನು ಕೆಳಕ್ಕೆ ಚೆಲ್ಲಿ ಆಹಾರ ತ್ಯಾಜ್ಯಗಳನ್ನು ಹರಡಿ ತಿಂದು ಗಲೀಜು ಮಾಡಿ ತೆರಳುತ್ತಿವೆ. ಓಡಿಸಲು ಹೋದರೆ ಕಚ್ಚಲು ಮುಂದಾಗುತ್ತವೆ.
ಮAಗಗಳಿAದಾಗಿ ಸಣ್ಣ ಮಕ್ಕಳನ್ನು ಮನೆಯಿಂದ ಹೊರಗೆ ಬಿಡುವುದಕ್ಕೂ ಕಷ್ಟವಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳಾದ ರುಕ್ಮಿಣಿ ನಾರಾಯಣ, ಚೈತ್ರ ಮಂಜುನಾಥ, ಶೃತಿ ಯಶವಂತ್, ನಳಿನಿ, ಆಶಾ ಮೊದಲಾದವರು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಧಾವಿಸಿ ಇಲ್ಲಿನ ನಿವಾಸಿಗಳಿಗೆ ತೊಂದರೆ ನೀಡುತ್ತಿರುವ ಕೋತಿಗಳನ್ನು ಬೇರೆಡೆಗೆ ಅಟ್ಟಬೇಕು ಎಂದು ಆಗ್ರಹಿಸಿದ್ದಾರೆ.