ಪೊನ್ನಂಪೇಟೆ, ಫೆ. ೨೨: ಅತ್ತೂರು ಟಿಟಿಪಿ ಕಾಫಿ ಕ್ಯೂರಿಂಗ್ ವರ್ಕ್ಸ್ ಮಾಲೀಕರು ಹಾಗೂ ಜಮಾಅತ್ ಇಹಿಂದ್, ಚೈತನ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶಿಫಾನ ಸಮೀರ್ ಮತ್ತು ನಮೃತ ಬಿ.ಎಸ್. ಅವರ ಕಾಲೇಜು ಶುಲ್ಕ ರೂ. ೨೬,೨೨೩ ಅನ್ನು ಪಾವತಿಸುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿದರು.

ಈ ಸಂದರ್ಭ ಚೈತನ್ಯ ಚಾರಿಟೇಬಲ್ ಟ್ರಸ್ಟ್ನ ಮಹಿಳಾ ಘಟಕದ ಅಧ್ಯಕ್ಷೆ ಸಮೀರ ತನ್ವೀರ್, ಸದಸ್ಯೆ ತಾನ್ಝಿಲ್, ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಣ್ಣುವಂಡ ಮಾದಯ್ಯ ಇದ್ದರು.