ಕುಶಾಲನಗರ, ಫೆ. ೨೨: ಕುಶಾಲನಗರ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಸ್ಥಾನ ಗ್ರಾಮದೇವತೆಯ ೧೭ನೇ ವರ್ಷದ ವಾರ್ಷಿಕೋತ್ಸವ ಜರುಗಿತು. ವಾರ್ಷಿ ಕೋತ್ಸವ ಅಂಗವಾಗಿ ದೇವಿಯ ಸನ್ನಿಧಿಯಲ್ಲಿ ಅರ್ಚಕ ಉಮೇಶ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.
ಗಣಪತಿ ಹೋಮ, ಸಂಕಲ್ಪ ಪೂಜೆ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲದೊAದಿಗೆ ತೆರಳಿ ಸಾಮೂಹಿಕ ಪೂಜೆ ಸಲ್ಲಿಸಿದರು.
ಪೂಜಾ ಕಾರ್ಯಕ್ರಮದ ಅಂಗವಾಗಿ ಹೂವಿನ ಅಲಂಕಾರ ಮತ್ತು ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕುಶಾಲನಗರ ಗಂಧದಕೋಟೆಯ ಉದ್ಯಮಿ ಬಿ.ಟಿ. ಸುಬ್ರಮಣ್ಯ ಮಾಡಿದ್ದರು. ಶ್ರೀ ಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ರಾಮದಾಸ್, ಕಾರ್ಯದರ್ಶಿ ಎಂ.ಎA. ಚರಣ್, ಖಜಾಂಚಿ ಮುತ್ತಣ್ಣ, ಕೆ.ಎನ್. ಅಶೋಕ್, ಜಗದೀಶ್, ಹೆಚ್.ಎನ್. ರಾಮಚಂದ್ರ ಮತ್ತಿತರರು ಇದ್ದರು.