ವೀರಾಜಪೇಟೆ, ಫೆ. ೨೨: ವೀರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಶ್ರೀ ಮಹಾದೇವರ ದೇವಾಲಯಕ್ಕೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿದರು.

ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತಿತೀರ ಧರ್ಮಜಾ ಉತ್ತಪ್ಪ, ವಲಯ ಅಧ್ಯಕ್ಷ ಮಚ್ಚಾರಂಡ ಕಿರಣ್, ದೇವಸ್ಥಾನ ಸಮಿತಿ ಅಧ್ಯಕ್ಷ ರಾಬಿನ್ ಚಿನ್ನಪ್ಪ, ಹಿರಿಯರಾದ ಮಚ್ಚಾರಂಡ ಸುಬ್ಬಯ್ಯ, ಮಣಿ ಕಾರ್ಯಪ್ಪ, ಪೋರಂಡ ಶಿವಾನಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.