ವೀರಾಜಪೇಟೆ, ಫೆ. ೨೦: ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿರಾಜಪೇಟೆಯ ಸೈದ ಕಾಶ್ಮೀರ ಸಿಮ್ರಾನ್ ಅವರನ್ನು ದಖ್ಖನಿ ಮೊಹಲ್ಲಾ ನಿವಾಸಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಸೈದ ಅವರು, ವಕೀಲರಾದ ನಂತರ ನ್ಯಾಯಾಧೀಶರ ಪರೀಕ್ಷೆ ಬರೆಯಲು ಮಾರ್ಗದರ್ಶನ ನೀಡಿದ ಹಿರಿಯ ವಕೀಲರಾದ ಐ.ಆರ್. ಪ್ರಮೋದ್ ಅವರ ಮಾರ್ಗದರ್ಶನ ನನಗೆ ಸ್ಫೂರ್ತಿ ತಂದಿದೆ. ಅನ್ಯಾಯ ಮಾತ್ರ ಯಾರಿಗೂ ಆಗಬಾರದು ಎಂಬ ನಿಲುವು ಹೊಂದಿದ್ದೇನೆ ಎಂದರು.
ದಖ್ಖನ್ನಿ ಮೊಹಲ್ಲಾದ ವಿಜಯ ವಿನಾಯಕ ಆಡಳಿತ ಮಂಡಳಿಯ ಸದಸ್ಯ ರವಿಕುಮಾರ್ ಮಾತನಾಡಿ, ಸೈದಾ ಅವರ ಪರಿಶ್ರಮವನ್ನು ಶ್ಲಾಘಿಸಿದರು. ಸಂತ ಅನ್ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಬಿನ್ನಿ ಜೋಸೆಫ್, ಪುರಸಭೆ ಮಾಜಿ ಸದಸ್ಯ ಡಿ.ಪಿ. ರಾಜೇಶ್, ನಿವಾಸಿಗಳಾದ ಪೋರಂಗಡ ರಾಜ, ಸುಬ್ರಮಣಿ, ಸರಳ, ಜೋಯ್, ರಾಗಿಣಿ ಗಣೇಶ್, ಜಯಂತಿ ಅಶೋಕ, ಪೊನ್ನಪ್ಪ, ಆನಂದ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.