ಗೋಣಿಕೊಪ್ಪ ವರದಿ, ಫೆ. ೨೦: ಮಾಯಮುಡಿ ಗ್ರಾಮದ ಕಂಗಳತ್‌ನಾಡ್ ಕಮಟೆ ಮಹಾದೇವರ ವಾರ್ಷಿಕೋತ್ಸವ ತಾ.೨೭ ರಿಂದ ಮಾರ್ಚ್ ೩ ರವರೆಗೆ ಜರುಗಲಿದೆ.

ಮಾ.೩ ರಂದು ದೊಡ್ಡ ಹಬ್ಬ ನಡೆಯಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಸಾಯಂಕಾಲ ೬ ಗಂಟೆಗೆ ದೇವರ ತಡಂಬು ದರ್ಶನ, ಅಭ್ಯಂಜನ ಮತ್ತು ದೇವರ ನೃತ, ವಸಂತಪೂಜೆ, ವಿಷ್ಣುಮೂರ್ತಿ ಮತ್ತು ಗುಳಿಗನಿಗೆ ಪೂಜೆ ನೆರವೇರಲಿದೆ.

ತಾ.೨೭ ರಂದು ರಾತ್ರಿ ೭ ಗಂಟೆಗೆ ಕೊಡಿಮರ ಶಾಸ್ತç ನೆರವೇರಲಿದೆ. ತಾ.೨೮ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಗಣಪತಿ ಪಂಚಕಜ್ಜಾಯ, ಈಶ್ವರನಿಗೆ ಬಿಲ್ವಪತ್ರ ಅರ್ಪಣೆ, ಮಾರ್ಚ್ ೧ ರಂದು ಬೆ. ೧೧.೩೦ ಗಂಟೆಗೆ ಈಶ್ವರನಿಗೆ ಕ್ಷೀರಾಭಿಷೇಕ, ಮಾ.೨ ರಂದು ಬೆ.೧೧.೩೦ ಗಂಟೆಗೆ ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ಸಂಜೆ ೬ ಗಂಟೆಗೆ ನೆರ್ಪು ಜರುಗಲಿದೆ.

ಮಂಗಳಾರತಿ, ಅನ್ನದಾನ, ಅಲಂಕಾರ, ಇರ್‌ಬೊಳಕ್, ತೂಚಂಬಲಿ ಬೊಳಕ್ ಸೇವೆಗೆ ಭಕ್ತಾದಿಗಳು ಧನ ಸಹಾಯ ನೀಡಬಹುದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.