ವೀರಾಜಪೇಟೆ, ಫೆ. ೨೦: ಕೇರಳ-ಕರ್ನಾಟಕ ಗಡಿಯ ಕಣ್ಣೂರು ಜಿಲ್ಲೆಯ ಪಯ್ಯವೂರು ಶಿವ ದೇವಾಲಯದಲ್ಲಿ ವಾರ್ಷಿಕ ಉತ್ಸವ ಅಂಗವಾಗಿ ಕೊಡಗಿನವರ ಊಟ್ ಉತ್ಸವದ ೮ ಊಟ್ ಹಬ್ಬಕ್ಕೆ ಅಕ್ಕಿ ಅಳೆಯುವ ಶಾಸ್ತçದ ಮೂಲಕ ಚಾಲನೆ ನೀಡಲಾಯಿತು.
ಹಬ್ಬದ ಪ್ರಮುಖ ಭಾಗವಾದ ಕೊಡಗಿನ ಕಡಿಯತ್ತ್ನಾಡಿನ ಚೆಯ್ಯಂಡಾಣೆಯ ಮುಂಡ್ಯೋಳAಡ ಹಾಗೂ ಬೊವ್ವೇರಿಯಂಡ ಕುಟುಂಬಗಳ ತಕ್ಕ ಮುಖ್ಯಸ್ಥರ ಹಾಗೂ ವಿವಿಧ ಕೊಡವ ಕುಟುಂಬಗಳ ಸದಸ್ಯರು ಪಯ್ಯವೂರ್ ಶಿವನಿಗೆ ಅರ್ಪಿಸಲು ಎತ್ತುಗಳ ಬೆನ್ನಿನ ಮೇಲೆ ಅಕ್ಕಿಯನ್ನು ದೇವಸ್ಥಾನಕ್ಕೆ ಸಾಗಿಸಿದ್ದರು. ದೇವಸ್ಥಾನದಲ್ಲಿ ಅದನ್ನು ಅಳೆಯುವ ಶಾಸ್ತç ಮಾಡುವ ಮೂಲಕ ನೈವೇದ್ಯಕ್ಕೆ ಹಾಗೂ ಊಟ್ ಕಜ್ಜಾಕ್ಕೆ ಅರ್ಪಿಸಲಾಯಿತು.
ಇಲ್ಲಿ ಕೊಡಗಿನವರಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಕೊಡಗಿನಿಂದ ಕಾಡುದಾರಿಯಲ್ಲಿ ಎತ್ತುಗಳ ಮೂಲಕ ಅಕ್ಕಿ ಸಾಗಿಸಿದವರನ್ನು ದೇವಾಲಯ ಸಮಿತಿ ಹಾಗೂ ಕೋಮರತಚ್ಚನ್ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ತಾ. ೨೧ ರಂದು (ಇಂದು) ೯ ಊಟ್ ಹಾಗೂ ತಾ. ೨೨ ರಂದು ೧೦ ಊಟ್ ಹಬ್ಬ ನಡೆಯಲಿದ್ದು, ತಾ. ೨೪ ರಂದು ದೇವರ ಆರಾಟ್ ಉತ್ಸವ ನಡೆಯಲಿದೆ. ವಿಶೇಷವಾಗಿ ತಾ. ೨೨ರವರೆಗೆ ಕೊಡಗಿನವರ ಹಬ್ಬ ನಡೆಯಲಿದೆ. ಬಳಿಕ ಕುಂಡಕ್ಕೆ ಅಗ್ನಿ ಇಡುವುದರೊಂದಿಗೆ ಕೊಡಗಿನ ಹಬ್ಬಕ್ಕೆ ಚಾಲನೆ ನೀಡಲಾಯಿತು. ಸಂಜೆ ದೇವರ ನೃತ್ಯಬಲಿ ಪ್ರದರ್ಶನ, ವಿವಿಧ ಪೂಜೆಗಳು ನೈವೇದ್ಯ ಸಮರ್ಪಣೆ ನಡೆಯಿತು. ಈ ಸಂದರ್ಭ ಮುಂಡ್ಯೋಳAಡ, ಬೊವ್ವೇರಿಯಂಡ ಕುಟುಂಬದ ತಕ್ಕ ಮುಖ್ಯಸ್ಥರು, ಕಡಿಯತ್ ನಾಡಿನ ಪ್ರಮುಖ ಕುಟುಂಬದವರು, ದೇವಾಲಯ ಸಮಿತಿಯವರು, ಆಡಳಿತ ಮಂಡಳಿ ಪ್ರಮುಖರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.