ಮಡಿಕೇರಿ, ಫೆ. ೧೯: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್, ಪತ್ತಿನ, ಗ್ರಾಹಕರ, ಮಾರಾಟ ಸಹಕಾರ ಸಂಘ ಹಾಗೂ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯನಿರ್ವಾಹಕರಿಗೆ ಇತ್ತೀಚಿನ ಸಹಕಾರ ಕಾಯ್ದೆ ತಿದ್ದುಪಡಿ ಹಾಗೂ ಜಿ.ಎಸ್.ಟಿ., ಆದಾಯ ತೆರಿಗೆ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹಾಗೂ ಈಚೂರು ಸಹಕಾರ ದವಸ ಭಂಡಾರದ ಅಧ್ಯಕ್ಷ ಗುಮ್ಮಟಿರ ಕಿಲನ್ ಗಣಪತಿ, ಬದಲಾವಣೆ ಜಗದ ನಿಯಮ, ಯಾವಾಗ ಬದಲಾವಣೆ ಅನಿವಾರ್ಯವೋ ಅದನ್ನು ಅಳವಡಿಸಿಕೊಳ್ಳಬೇಕಾಗಿದೆ. ಅಂತೆಯೇ ಸಹಕಾರ ಸಂಘಗಳ ಕಾಯ್ದೆಯಲ್ಲಿಯೂ ಹಲವಾರು ಬದಲಾವಣೆಗಳಿದ್ದು ಅದನ್ನು ನಮ್ಮ ಸಂಘಗಳಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯಾಗಿದೆ. ಅದಕ್ಕೂ ಮೊದಲು ನಮಗೆ ಅದರ ತಿಳುವಳಿಕೆ ಅವಶ್ಯಕ. ಈ ತರಬೇತಿ ಕಾರ್ಯಕ್ರಮಗಳಲ್ಲಿ ಇತ್ತೀಚಿನ ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿಯ ಅರಿವನ್ನು ಮೂಡಿಸಲಾಗುತ್ತಿದ್ದು ಸಂಘಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನಿಡಿದರು.

ಸುಮಾರು ೧೨೫ ದವಸ ಭಂಡಾರಗಳು ಹಿಂದೆ ಕಾರ್ಯನಿರ್ವಹಿಸಿದ್ದು ದಿನ ಕಳೆದಂತೆ ಇವುಗಳ ಸಂಖ್ಯೆ ೭೭ಕ್ಕೆ ಇಳಿದಿದೆ. ಸಹಕಾರ ಸಂಘಗಳಲ್ಲಿ ಭ್ರಷ್ಟಾಚಾರ ಆಗದಂತೆ, ಅಭಿವೃದ್ಧಿ ಸೂಚ್ಯಂಕವನ್ನು ತಿಳಿಯಲು ಏಕರೂಪದ ತಂತ್ರಾAಶವನ್ನು ಅಳವಡಿಸಲಾಗಿದೆ. ಅದಾಗ್ಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ವರ್ಷಂಪ್ರತಿ ಬದಲಾವಣೆ ಆಗುವ ಆದಾಯ ತೆರಿಗೆ, ಜಿ.ಎಸ್.ಟಿ. ಇತ್ಯಾದಿಗಳ ಬಗ್ಗೆ ನಾವು ಪರಿಣಿತರಿಂದ ತಿಳಿದುಕೊಳ್ಳಬೇಕಾಗಿರುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹೆಚ್.ಕೆ. ಮಾದಪ್ಪ ಮಾತನಾಡಿ, ಕೇಂದ್ರ ಸರ್ಕಾರದಿಂದ ಆಹಾರ ಭದ್ರತೆ ಕಾಯ್ದೆ ಬರುವ ಬಹಳ ಪೂರ್ವದಲ್ಲೇ ವಿಶೇಷವೆಂದರೆ ಸ್ವಾತಂತ್ರö್ಯ ಪೂರ್ವದಲ್ಲೇ ಹಿರಿಯರ ದೂರ ಚಿಂತನೆಯಿAದ ಸಹಕಾರ ದವಸ ಭಂಡಾರಗಳು ಪ್ರಾರಂಭವಾಗಿದ್ದು ಇಂದು ಅನೇಕ ಸಂಸ್ಥೆಗಳು ಬೆಳೆದು ಹೆಮ್ಮರವಾಗಲು ಅದೇ ಪ್ರೇರಣೆಯಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕೆ.ಟಿ. ಪರಮೇಶ್, ಪಿ.ಎನ್. ಚಂದ್ರಪ್ರಕಾಶ್ ಉಪಸ್ಥಿತರಿದ್ದರು. ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲರು ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಎಂ.ಎA. ಶ್ಯಾಮಲರವರು ಸಹಕಾರ ಕಾಯ್ದೆಯ ಇತ್ತಿಚಿನ ತಿದ್ದುಪಡಿ ಕುರಿತು ಹಾಗೂ ಆದಾಯ ತೆರಿಗೆ, ಜಿ.ಎಸ್.ಟಿ. ಬಗ್ಗೆ ಸನ್ನದು ಲೆಕ್ಕಿಗರಾದ ರುದ್ರೇಶ್ ಪಟೇಲ್‌ರವರು ಉಪನ್ಯಾಸ ನೀಡಿದರು.

ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿ, ಸ್ವಾಗತಿಸಿದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು.