ಪಾಲಿಬೆಟ್ಟ, ಫೆ. ೧೮: ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್ ವಲಿಯವರ ಉರೂಸ್‌ನ ಸಮಾರೋಪ ಸಮಾರಂಭ, ಸರ್ವ ಧರ್ಮ ಸಮ್ಮೇಳನ ದರ್ಗಾ ಆವರಣದಲ್ಲಿ ನಡೆಯಿತು.
ಸಮಸ್ತ ಕೇಂದ್ರ ಮುಶಾವರ ಸದಸ್ಯರು, ಜಿಲ್ಲಾ ಉಪ ಖಾಝಿ ಎಂ.ಎA. ಅಬ್ದುಲ್ಲ ಫೈಜಿ ಸರ್ವ ಧರ್ಮ ಸಮ್ಮೇಳನವನ್ನು ಉದ್ಘಾಟನೆ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಉರೂಸ್ ಆಚರಣೆಗಳು ಎಲ್ಲಾ ಬಾಂಧವರ ಪಾಲ್ಗೊಳ್ಳುವಿಕೆ ಹಾಗೂ ಸಹಕಾರದಿಂದ ನಡೆಯುತ್ತಿದ್ದು, ಇಂತಹ ಆಚರಣೆಗಳಿಂದ ಸೌಹಾರ್ದ ಸಮಾಜ ನಿರ್ಮಾಣವಾಗಲಿದೆ ಎಂದರು.
ಮನೆಹಳ್ಳಿಮಠದ ಶ್ರೀ ತಪೋಕ್ಷೇತ್ರ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಸರ್ವ ಧರ್ಮದ ಸಮನ್ವಯ ಕೇಂದ್ರಗಳಿAದ ಶಾಂತಿ, ಸಹಬಾಳ್ವೆ, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ.
ಕೆಡುಕಿನಿಂದ ದೂರವಿದ್ದು, ಒಳಿತನ್ನು ಬಯಸಿ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.
ಪಾಲಿಬೆಟ್ಟ ಸಿಎಸ್‌ಐ ಕ್ರೆöÊಸ್ತ ಚರ್ಚ್ ರೆ. ಫಾ. ಶಶಿಕುಮಾರ್ ಮಾತನಾಡಿ, ಎಲ್ಲಾ ಧರ್ಮಗಳ ಬೋಧನೆಯನ್ನು ಅನುಸರಿಸಿದರೆ ನಾವು ಯಾರನ್ನೂ ದ್ವೇಷಿಸುವುದಿಲ್ಲ. ಇಂತಹ ಸರ್ವ ಧರ್ಮ ಸಮ್ಮೇಳನಗಳ ಮೂಲಕ ಗುರು - ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಆಚರಣೆಗಳ ಮೂಲಕ ಪರಸ್ಪರ ಪಾಲ್ಗೊಳ್ಳುವಿಕೆಯೊಂದಿಗೆ ಶಾಂತಿ, ಸಹಬಾಳ್ವೆಯ ಜೀವನ ನಡೆಸುವಂತಾಗಲು ಯುವ ಸಮೂಹ ಮುಂದೆ ಬರಬೇಕೆಂದರು.
ಧಾರ್ಮಿಕ ಪಂಡಿತ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಭಾವೈಕ್ಯತೆಯಿಂದ ಬಾಳಿದರೆ ಯಾವುದೇ ಕಾರಣಕ್ಕೂ ನಮ್ಮನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ.
ನಾವೆಲ್ಲರೂ ಒಗ್ಗಟ್ಟಿನ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು. ಜುಮಾ ಮಸೀದಿಯ ಅಧ್ಯಕ್ಷ ಪಿ.ಕೆ. ಇಸ್ಮಾಯಿಲ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜುಮಾ ಮಸೀದಿ ಕಮಿಟಿ ಉಪಾಧ್ಯಕ್ಷ ಸೈನುದ್ದೀನ್, ಪ್ರಧಾನ ಕಾರ್ಯದರ್ಶಿ ಸಮೀರ್ ಮುನ್ನ, ಸಹ ಕಾರ್ಯದರ್ಶಿ ಎ.ಎಚ್. ಸಮೀರ್, ಫಜಲ್ ರೆಹಮಾನ್, ಸೇರಿದಂತೆ ಮತ್ತಿತರರು ಹಾಜರಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
- ಪುತ್ತಂ ಪ್ರದೀಪ್