ಮಡಿಕೇರಿ, ಫೆ. ೧೮: ಅಂತರ ರಾಷ್ಟಿçÃಯ ಹಾಕಿ ಫೆಡರೇಷನ್ ವತಿಯಿಂದ ನಡೆಯುತ್ತಿರುವ ಎಫ್.ಐ.ಎಚ್ ಪ್ರೋ ಲೀಗ್ ಪುರುಷರ ಹಾಕಿಯ ‘ಆಸ್ಟೆçÃಲಿಯಾ ಲೆಗ್’ನಲ್ಲಿ ಭಾಗವಹಿಸಲು ಕೊಡಗಿನವರಾದ ಚಂದುರ ಬಿ ಪೂವಣ್ಣ ಅವರು ಆಯ್ಕೆಯಾಗಿದ್ದಾರೆ. ೨೦೨೫ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿ ೨೦೨೬ ಜೂನ್‌ವರೆಗೆ ಪ್ರೋ ಲೀಗ್ ಟೂರ್ನಿ ನಡೆಯಲಿದೆ. ವಿವಿಧ ರಾಷ್ಟ್ರಗಳಲ್ಲಿ ಟೂರ್ನಿಯ ವಿವಿಧ ಹಂತಗಳು ನಡೆಯುತ್ತಿದ್ದು, ಇದರ ಅಂಗವಾಗಿ ಆಸ್ಟ್ರೇಲಿಯಾ ಲೆಗ್ ತಾ.೨೦ ರಿಂದ ೨೫ರವರೆಗೆ ಜರುಗಲಿದೆ. ೯ ತಂಡಗಳಿರುವ ಟೂರ್ನಿಯಲ್ಲಿ ಭಾರತವು ಪ್ರಸ್ತುತ ೮ ನೇ ಸ್ಥಾನದಲ್ಲಿದೆ.

ಭಾರತವು ತಾ.೨೧ ರಂದು ಸ್ಪೇನ್ ವಿರುದ್ಧ, ತಾ.೨೨ ರಂದು ಆಸ್ಟ್ರೇಲಿಯಾ, ೨೪ ರಂದು ಮತ್ತೇ ಸ್ಪೇನ್ ಹಾಗೂ ೨೫ ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಸ್ಟಾರ್ ಸ್ಪೋರ್ಟ್ಸ್ ಹಾಗೂ ಹಾಟ್ ಸ್ಟಾರ್ ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ.

೨೦೨೪ರಲ್ಲಿಯೇ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಪೂವಣ್ಣ ಇದೀಗ ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಕಂಡAಗಾಲದ ನಿವಾಸಿ ಚಂದುರ ಎಸ್‌ಬಾಬಿ(ಪ್ರಭು) ಹಾಗೂ ಅನಿಲ (ತಾಮನೆ ಮಲ್ಲೇಂಗಡ) ದಂಪತಿಯ ಪುತ್ರ.