ಗುಡ್ಡೆಹೊಸೂರು: ಸಮೀಪದ ಬೊಳ್ಳೂರು ಗ್ರಾಮದ ಮುನೇಶ್ವರ ದೇವಸ್ಥಾನಲ್ಲಿ ಶಿವರಾತ್ರಿ ಮಹಾಪೂಜೆ ನಡೆಸಲಾಯಿತು. ಪ್ರತಿ ವರ್ಷ ಶಿವರಾತ್ರಿಯ ಮರುದಿನ ಇಲ್ಲಿ ಪೂಜೆ ನಡೆಸಲಾಗುತ್ತಿದೆ. ೨೫ನೇ ವರ್ಷದ ಮಹಾಪೂಜೆ ನೆರವೇರಿತು.
ಈ ಸಂದರ್ಭ ಗಣಪತಿ ಹೋಮ ಮತ್ತು ಸತ್ಯನಾರಾಯಣ ಪೂಜೆ ನಡೆಯಿತು.
ಪೂಜಾ ಕಾರ್ಯವನ್ನು ಸೋಮಶೇಖರ್ ಭಟ್ ತಂಡದವರು ನೆರವೇರಿಸಿದರು. ದೇವಸ್ಥಾನಕ್ಕೆ ಸ್ಥಳ ದಾನ ಮಾಡಿದ ಸ್ಥಳೀಯ ದಾನಿಗಳಾದ ಸರೋಜ ನಾರಾಯಣ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಶಶಿಕುಮಾರ್ ಮತ್ತು ಕಾರ್ಯದರ್ಶಿ ಕುಡೆಕಲ್ ಗುರುಪ್ರಸಾದ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂಧರ್ಭ ಅಲ್ಲಿನ ಶ್ರೀ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಸಿ. ಮಲ್ಲಿಕಾರ್ಜುನ ಮತ್ತು ಗ್ರಾಮದ ಹಿರಿಯರಾದ ಕೆ.ಎಲ್. ರಾಮಣ್ಣ ಮತ್ತು ಸಮಿತಿಯ ಸದಸ್ಯರು ಹಾಜರಿದ್ದರು.
ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮಡಿಕೇರಿ: ಶಿವರಾತ್ರಿ ಅಂಗವಾಗಿ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.
ತಾ. ೭ ರಿಂದ ಆರಂಭಗೊAಡಿದ್ದ ಶಿವರಾತ್ರಿ ಉತ್ಸವ ೧೬ರ ತನಕ ನಡೆಯಿತು. ಪ್ರತಿ ದಿನ ವಿವಿಧ ತಂಡಗಳಿAದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಿತು. ತಾ. ೧೫ ರಂದು ಗ್ರಾಮದ ನಿವಾಸಿಗಳು ಹೊರೆಕಾಣಿಕೆ ಮೆರವಣಿಗೆ ನಡೆಸಿ ದೇವಾಲಯಕ್ಕೆ ಅರ್ಪಿಸಿದರು. ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ರುದ್ರಾಭಿಷೇಕ, ರಂಗಪೂಜೆ ಕಾಸರಗೋಡಿನ ದುರ್ಗಾ ಪರಮೇಶ್ವರಿ ಮಂಡಳಿಯಿAದ ಕೊಲ್ಲೂರು ಮೂಕಾಂಬಿಕ ಕಥಾ ಪ್ರಸಂಗ ಯಕ್ಷಗಾನ ಆಯೋಜಿಸಲಾಗಿತ್ತು.ಮುಳ್ಳೂರು: ಮುಳ್ಳೂರು ಹಾಗೂ ಜಾಗೇನಹಳ್ಳಿ ಗ್ರಾಮಸ್ಥರ ಆಶ್ರಯದಲ್ಲಿ ಶ್ರೀ ಕಾರ್ಗೋಡು ಬಸವೇಶ್ವರ ಸೇವಾ ಸಮಿತಿ ವತಿಯಿಂದ ೪ನೇ ವರ್ಷದ ಮಹಾಶಿವರಾತ್ರಿ ಉತ್ಸವ ನಡೆಯಿತು,
ಉತ್ಸವದ ಅಂಗವಾಗಿ ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿತು. ಮುಳ್ಳೂರು ಶಾಲಾ ಮಕ್ಕಳಿಂದ ಪ್ರದರ್ಶಿಸಲಾದ ಯೋಗ ಹಾಗೂ ಕರಾಟೆ ಪ್ರದರ್ಶನವು ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಯಿತು. ಶಿಸ್ತು, ಧೈರ್ಯ ಮತ್ತು ಏಕಾಗ್ರತೆಯ ಸಂಯೋಜನೆಯಾದ ಈ ಪ್ರದರ್ಶನವು ಎಲ್ಲರ ಮನ ಸೆಳೆಯಿತು.
“ಶಿವನಿಗಾಗಿ ಒಂದು ರಾತ್ರಿ” ಕಾರ್ಯಕ್ರಮದ ಮೂಲಕ ಭಕ್ತಿಗೀತೆಗಳು, ಚಿತ್ರಗೀತೆಗಳು, ಭರತನಾಟ್ಯ ಹಾಗೂ ವಿವಿಧ ನೃತ್ಯ ಪ್ರದರ್ಶನಗಳು ನಡೆದವು. ಭಕ್ತಾದಿಗಳು ರಾತ್ರಿ ಜಾಗರಣೆ ಕುಳಿತರು.
ಸಮೀಪದ ಹೊಸೂರಿನಿಂದ ಆಗಮಿಸಿದ ಕಲಾವಿದರು ಚಂಡೆ - ಮದ್ದಳೆ ನಾದದ ಮೂಲಕ ಭಕ್ತಿ ಸುಧೆ ಹರಿಸಿದರು.
ಜಾಗೇನಹಳ್ಳಿ, ಹಿತ್ತಲಕೇರಿ, ನಿಡ್ತ ಹಾಗೂ ಮಾಲಂಬಿ ಗ್ರಾಮಗಳಿಂದ ಭಕ್ತಾದಿಗಳು ಉತ್ಸವದಲ್ಲಿ ಭಾಗಿಯಾಗಿದ್ದರು.ಕೊಡ್ಲಿಪೇಟೆ: ಕೊಡ್ಲಿಪೇಟೆ ಸಮೀಪದ ಖ್ಯಾತೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸೇವಾ ಸಮಿತಿ ವತಿಯಿಂದ ೩೪ನೇ ವರ್ಷದ ಅದ್ದೂರಿ ಶಿವರಾತ್ರಿ ಪೂಜಾ ಕಾರ್ಯಕ್ರಮ ನೆರವೇರಿತು. ಮಹಾ ಚಂಡಿಕಾಯಾಗ ಮತ್ತು ರುದ್ರಾಭಿಷೇಕ, ಅಲಂಕಾರ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ಶ್ರೀ ಶ್ರೀನಿವಾಸಮಯ್ಯ ಅವರ ನೇತೃತ್ವದಲ್ಲಿ ನಡೆಯಿತು.
ಪೂಜಾ ಮಹೋತ್ಸವದಲ್ಲಿ ಕಲ್ಲಳ್ಳಿ ಮಠದ ಶ್ರೀ ರುದ್ರಮನಿ ಸ್ವಾಮೀಜಿ, ಕಿರಿಕೊಡ್ಲಿ ಮಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ದೇವಸ್ಥಾನ ಸಮಿತಿ ಅಧ್ಯಕ್ಷ ಕೆ. ಎಸ್. ಯತೀಶ್, ಮಾಜಿ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಪ್ರಮುಖರಾದ ಕೆ.ಎಂ ಗಣೇಶ್, ಯೋಗೇಶ್, ಪ್ರವೀಣ್, ಕಾಳೇಗೌಡ, ಜಯಪ್ಪ, ಬ್ಯಾಡಗೊಟ್ಟ ಪಂಚಾಯಿತಿ ಉಪಾಧ್ಯಕ್ಷೆ ದಾಕ್ಷಾಯಿಣಿ ಕಾಂತರಾಜ್, ಪ್ರಶಾಂತ್, ಅರ್ಚಕರಾದ ಕುಮಾರ್ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.ವೀರಾಜಪೇಟೆ: ವೀರಾಜಪೇಟೆ ಸಮೀಪದ ಕೊಟ್ಟೋಳಿಯ ಶ್ರೀ ಧಾರಾ ಮಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಹಬ್ಬದ ಸಲುವಾಗಿ ದೇವಾಲಯದಲ್ಲಿ ಧಾರಾ ಮಹೇಶ್ವರನಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ದೇವರ ಜಳಕ, ನೃತ್ಯಬಲಿ, ಎತ್ತ್ ಪೋರಾಟ್ ನಡೆಯಿತು.
ದೇವತಕ್ಕರಾಗಿ ಕೋದಂಡ ಕುಟುಂಬದವರು ಹಾಗೂ ಭಂಡಾರ ತಕ್ಕರಾಗಿ ಚಂಗಚAಡ ಕುಟುಂಬ ಕಾರ್ಯನಿರ್ವಹಿಸಿದರು. ಶಿವರಾತ್ರಿ ಉತ್ಸವದ ಅಂಗವಾಗಿ ಕದನೂರು ಕೊಟ್ಟೋಳಿ ಕೊಡವ ಸಂಘ ಹಾಗೂ ಇತರ ಸಂಘ-ಸAಸ್ಥೆಗಳ ವತಿಯಿಂದ ಅನ್ನಸಂತರ್ಪಣೆಗೆ ನೆರವು ನೀಡಲಾಯಿತು. ಜೈ ಭಾರತ್ ಆಟೋ ಚಾಲಕರ ಸಂಘದ ವತಿಯಿಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು. ಜೈ ಭಾರತ್ ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವು, ಗೌರವಾÀಧ್ಯಕ್ಷ ಪ್ರವೀಣ್ ಶೇಟ್ ಮಜ್ಜಿಗೆ ವಿತರಣೆ ಕಾರ್ಯ ನಿರ್ವಹಿಸಿದರು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂಗಚAಡ ಚೇತನ್ ಬೆಳ್ಯಪ್ಪ, ಸಹ ಕಾರ್ಯದರ್ಶಿ ವಿಶ್ವನಾಥ್ ಬಬ್ಬಿ, ದೀಪಾ ವಿಶ್ವನಾಥ್, ಅಧ್ಯಕ್ಷ ಕೋದಂಡ ಅಜಯ್ ಹಾಗೂ ಕುಟುಂಬಸ್ಥರು ಹಾಗೂ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.
ಕಣಿವೆ: ಕೂಡ್ಲೂರು ಗ್ರಾಮದ ಕಾವೇರಿ ನದಿ ದಂಡೆಯಲ್ಲಿ ಪೂರ್ವಾಭಿಮುಖವಾಗಿ ಇರುವ (ಹೊಳೆ ಮಲ್ಲಪ್ಪ) ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ದೇವಾಲಯದಲ್ಲಿ ಅಭಿಷೇಕ ಅರ್ಚನೆ ಪೂಜಾದಿಗಳು ಜರುಗಿದವು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು. ಅರ್ಚಕ ಯೋಗೇಶ್ ಪೂಜಾ ವಿಧಿ ನಡೆಸಿದರು. ದೇವಾಲಯ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ಕೆ.ಎನ್. ಪವನ್ ಕುಮಾರ್, ಈರಪ್ಪ, ರಾಜಾಚಾರಿ, ಕೃಷ್ಣ, ರಾಜು ಸೇರಿದಂತೆ ಭಕ್ತಾದಿಗಳು ಇದ್ದರು.ಕುಶಾಲನಗರ: ಕುಶಾಲನಗರ ಬಸವೇಶ್ವರ ಬಡಾವಣೆಯ ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ ಮಹಾಸಭೆ ಮತ್ತು ೧೭ನೇ ವರ್ಷದ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮಗಳು ನಡೆದವು.
ದೇವಾಲಯ ಸಮಿತಿಯ ಅಧ್ಯಕ್ಷ ಸುದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ಮಹಾಸಭೆ, ನಂತರ ಮಹಾಶಿವರಾತ್ರಿಯ ಪೂಜಾ ಕಾರ್ಯಕ್ರಮಗಳು ನಡೆದವು. ಬಡಾವಣೆ ವ್ಯಾಪ್ತಿಯ ನಿವಾಸಿಗಳಿಗೆ, ಅಂಗನವಾಡಿ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಆಟೋಟ ಸ್ಪರ್ಧೆಗಳು ನಡೆದವು.
ಚುಕ್ಕಿ ರಂಗೋಲಿ ಬಣ್ಣ ತುಂಬಿಸುವುದು, ಗಾಯನ ಮತ್ತು ನೃತ್ಯ, ಛದ್ಮವೇಷ ಕಾರ್ಯಕ್ರಮಗಳು ನಡೆದವು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕುಶಾಲನಗರ ಸಂಚಾರಿ ಠಾಣೆ ಸಬ್ ಇನ್ಸ್ಪೆಕ್ಟರ್ ಗಣೇಶ್ ಭಾಗವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ಮೊಬೈಲ್ ಫೋನ್ಗಳಲ್ಲೇ ಮುಳುಗುತ್ತಿದ್ದು ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ೧೫ ಮಂದಿ ಸಾಧಕರಿಗೆ ಸನ್ಮಾನ ಮಾಡಲಾಯಿತು.ವೀರಾಜಪೇಟೆ: ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಯಿತು.
ಉತ್ಸವದ ಕೊನೆಯ ದಿನ ರಾತ್ರಿ ಶ್ರೀ ಅಂಗಾಳ ಪರಮೇಶ್ವರಿಯ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವವನ್ನು ತೆಲುಗರ ಬೀದಿಯಿಂದ ಮೀನುಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದವರೆಗೆ ನಡೆಸಲಾಯಿತು.
ಮೆರವಣಿಗೆಗೆ ಬ್ಯಾಂಡ್ ಸೆಟ್, ಗೊಂಬೆ ಕುಣಿತ, ಕೊಟ್ಟಿಯಾರ್ ಕುಣಿತ, ಮಹಿಳೆಯರಿಂದ ನವಧಾನ್ಯಗಳ ಮೊಳಕೆಯೊಡೆದ ಕಲಶ, ವಾದ್ಯಗಳ ತಂಡ ಮೆರುಗು ನೀಡಿತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷ ಟಿ.ಜಿ. ಮಂಜುನಾಥ್, ಮಹೇಶ್ ಶೆಟ್ಟಿ, ಅಯ್ಯಪ್ಪ ಶೆಟ್ಟಿ, ಲೋಕೇಶ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಮಂಜುನಾಥ್, ಷಣ್ಮುಗ ಶೆಟ್ಟಿ. ಹರೀಶ್ ಶೆಟ್ಟಿ, ಭರತ್ ಶೆಟ್ಟಿ, ರಂಜಿತ್ ಶೆಟ್ಟಿ, ಟಿ.ಎನ್. ವೆಂಕಟೇಶ್ ಶೆಟ್ಟಿ ಸೇರಿದಂತೆ ಹತ್ತು ಕುಲಸ್ಥರು, ೨೪ ಮನೆ ಸಾಧು ಚೆಟ್ಟಿಯಾರ್ ಕುಟುಂಬದ ಸದಸ್ಯರು, ವೀರಾಜಪೇಟೆ ಹಾಗೂ ಸುತ್ತಮುತ್ತಲ ಭಕ್ತಾದಿಗಳು ಪಾಲ್ಗೊಂಡಿದ್ದರು.ಸುAಟಿಕೊಪ್ಪ: ಸಮೀಪದ ಕಂಬಿಬಾಣೆ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಾಲಯದ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು.
ದೇವಾಲಯದ ಪ್ರಧಾನ ಅರ್ಚಕ ಪ್ರಭಾಕರ್ ಕುದ್ದಣ್ಣಯ್ಯ ಅವರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರ ಪೂಜೆ, ಹೂವಿನ ಪೂಜೆ, ನೈವೇದ್ಯ ಪೂಜೆ, ಸತ್ಯನಾರಾಯಣ ಪೂಜೆ ನಡೆಯಿತು.
ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆಯ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಡಾ. ಶಶಿಕಾಂತ್ ರೈ, ಕಾರ್ಯದರ್ಶಿ ಗಣೇಶ್, ಖಜಾಂಚಿ ಅಜಿತ್ ಹಾಗೂ ಸಮಿತಿಯ ಪದಾಧಿಕಾರಿಗಳಾದ ಜಯಂತ್, ರವಿ, ಸುಬ್ರಯ, ಚಿದಾನಂದ, ಗಂಗಾಧರ, ಮಂಜುನಾಥ್ ರೈ ಸೇರಿದಂತೆ ಇತರರು ಹಾಜರಿದ್ದರು.
ಕೊಡಗರಹಳ್ಳಿ, ಶ್ರೀ ಬೈತೂರಪ್ಪ ಪೊವ್ವದಿ, ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಆರಾಧನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗÀ ನಡೆಯಿತು.
ಸಂಜೆ ಬೈತೂರಪ್ಪ ಭಜನಾ ಮಂಡಳಿಯ ವತಿಯಿಂದ ೩ ಗಂಟೆಗಳ ಕಾಲ ಭಕ್ತಿಗೀತೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿಯ ಮಹಾಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಪೂಜಾ ಧಾರ್ಮಿಕ ವಿಧಿವಿಧಾನಗಳನ್ನು ಪ್ರಧಾನ ಆರ್ಚಕ ರಾಘವೇಂದ್ರ ಭಟ್ ಮತ್ತು ಸಹಾಯಕರಾಗಿ ನರಸಿಂಹ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.
ಸಂಜೆ ೬.೩೦ ರಿಂದ ಶ್ರೀಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಾಳರಾತ್ರಿ ಕಾಲ್ಪನಿಕ ನಾಟಕ ನಡೆಯಿತು. ಶ್ರೀ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಾಲಯ ಸಮಿತಿ ಪ್ರಮುಖರು ಟ್ರಸ್ಟಿಗಳು, ಬೈತೂರಪ್ಪ ಭಜನಾ ಮಂಡಳಿಯ ಪ್ರಮುಖರು ಹಾಜರಿದ್ದರು.
ಕಂಬಿಬಾಣೆ ಮ್ಯಾಗಡೂರ್ ವಿಶ್ವನಾಥ ದೇವಾಲಯ, ನಾಕೂರು ಶಿವ ದೇವಾಲಯ, ಕೆದಕಲ್ ಭದ್ರಕಾಳಿ ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ಮಧ್ಯಾಹ್ನ ವಿಶೇಷ ಪೂಜಾ ಕಾರ್ಯಗಳು ನಡೆದವು.ವೀರಾಜಪೇಟೆ: ವೀರಾಜಪೇಟೆ ಪಟ್ಟಣದ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ವಿಶೇಷ ಪೂಜೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.
ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಬಾಚೂಡಿ ವೆಂಕಟೇಶ್ ಪೈ ಹಾಗೂ ತಂಡದಿAದ ಭಜನೆ ಹಾಗೂ ದೇವರ ಗೀತ ಗಾಯನ ನಡೆಯಿತು. ಈ ಸಂದರ್ಭ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್. ರವಿಂದ್ರನಾಥ್ ಕಾಮತ್, ಉಪಾಧ್ಯಕ್ಷ ಪುಷ್ಪರಾಜ್, ಕಾರ್ಯದರ್ಶಿ ಪುರುಷೋತ್ತಮ, ಪದಾಧಿಕಾರಿಗಳಾದ ಜೆ.ವಿ. ಪ್ರಕಾಶ್, ನರೇಂದ್ರ ಕಾಮತ್ ಮತ್ತಿತರರು ಇದ್ದರು.
ಗೀತ ಗಾಯನ ನಡೆಸಿಕೊಟ್ಟ ತಂಡದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪೂಜಾ ಕಾರ್ಯಕ್ರಮದ ಬಳಿಕ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಶಿವರಾತ್ರಿ ಅಂಗವಾಗಿ ನಗರದ ಶ್ರೀ ಬಾಲಾಂಜನೇಯ ದೇವಸ್ಥಾನ, ಶ್ರೀ ಮಾರಿಯಮ್ಮ ದೇವಾಲಯ, ಆಂಜನೇಯ ದೇವಾಲಯ ಸೇರಿದಂತೆ ವಿವಿಧೆಡೆಯಲ್ಲಿ ವಿಶೇಷ ಪೂಜೆ ನಡೆಯಿತು.ಮಡಿಕೇರಿ: ಇಲ್ಲಿಗೆ ಸಮೀಪದ ಹಾಕತ್ತೂರು-ಬಿಳಿಗೇರಿಯ ಸಂತ್ರಸ್ತರ ಪುನರ್ ವಸತಿ ನಿಲಯದಲ್ಲಿ ಮಹಾಶಿವರಾತ್ರಿ ಆಚರಣಾ ಸಮಿತಿ ವತಿಯಿಂದ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಆಟೋಟ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಆಟೋಟ ಕಾರ್ಯಕ್ರಮವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತ ಉದ್ಘಾಟಿಸಿದರು. ಅತಿಥಿಗಳಾಗಿ ಗ್ರಾಮಸ್ಥರಾದ ಎಂ. ಅಕ್ಬರ್ ಆಲಿ, ಆಚರಣಾ ಸಮಿತಿ ಉಪಾಧ್ಯಕ್ಷೆ ಬೇಬಿ, ಖಜಾಂಚಿ ದೇವಕಿ ರಾಜೇಶ್ ಇದ್ದರು. ಸಂಜೆ ಎಂ.ಎಲ್. ನಾರಾಯಣ ಆಚಾರ್ಯ ಅವರಿಂದ ವಿಶೇಷ ಪೂಜೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ರಾತ್ರಿ ನಡೆದ ಸಭಾ ಕಾರ್ಯಕ್ರಮವನ್ನು ಬೆಳೆಗಾರ ಅನಿಲ್ ಉಳುವಾರನ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತುಳುವೆರ ಜನಪದ ಕೂಟದ ಅಧ್ಯಕ್ಷ ಪ್ರಸಾದ್ ಪೂಜಾರಿ, ಮೇಕೇರಿ ಗ್ರಾ.ಪಂ. ಸದಸ್ಯ ಎ.ಎ. ಅಬ್ದುಲ್ ಖಾದರ್, ಗ್ರಾಮಸ್ಥರಾದ ಎಂ.ಎ. ಶೇಖ್ ಮದಾರ್, ಸಮಿತಿ ಕಾರ್ಯದರ್ಶಿ ಟಿ.ಆರ್. ದಿಲನ್ ಇದ್ದರು. ಸಮಿತಿ ಅಧ್ಯಕ್ಷ ಎನ್.ವಿ. ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು.ಗುಡ್ಡೆಹೊಸೂರು: ಸಮೀಪದ ಅತ್ತೂರಿನ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಮೂರು ದಿನಗಳ ಕಾಲ ನಡೆಯಿತು.
ತಾ. ೧೫ ರಂದು ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ನಿರಂತರ ಅನ್ನದಾನ ಏರ್ಪಡಿಸಲಾಗಿತ್ತು.ಜಾಗರಣೆ ದಿನ ರಾತ್ರಿ ೭ ಗಂಟೆಯಿAದ ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದಿAದ ನೃತ್ಯ ಕಾರ್ಯಕ್ರಮ ನಡೆಯಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಉಗ್ರಾಣಿ ಮನೋಜ್ ಕುಮಾರ್ ಮತ್ತು ಕಾರ್ಯದರ್ಶಿ ಬಿ.ಎ. ರಮೇಶ್ ಸೇರಿದಂತೆ ಸಮಿತಿಯ ಸದಸ್ಯರು, ಭಕ್ತಾದಿಗಳು ಹಾಜರಿದ್ದರು. ಪೂಜಾ ಕಾರ್ಯವನ್ನು ವೇದಮೂರ್ತಿ ಗಣೇಶ್ ತಂತ್ರಿ ಮತ್ತು ತಂಡ ನಡೆಸಿತು.