ಮಡಿಕೇರಿ, ಫೇ. ೧೯: ವೀರಾಜಪೇಟೆಯ ಚಿಕ್ಕಪೇಟೆಯಲ್ಲಿರುವ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ನಾಗದೇವರ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ತಾ. ೨೧ ರಿಂದ (ಇಂದಿನಿAದ) ಆರಂಭವಾಗಲಿದೆ.

ತಾ. ೨೦ ರಂದು ಬೆಳಿಗ್ಗೆ ೮ ಗಂಟೆಗೆ ಸರ್ಪ ಸಂಸ್ಕಾರ ಹೋಮ, ೧೦ ಗಂಟೆಗೆ ಅಶ್ಲೇಷ ಬಲಿ, ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ತಾ. ೨೧ ರಂದು ಬೆಳಿಗ್ಗೆ ೮ ಗಂಟೆಯಿAದ ಮಹಾವಿಷ್ಣು ದೇವಾಲಯದಲ್ಲಿ ಪುಣ್ಯಾಹ ತತ್ವ ಹೋಮ, ಕಲಶ ಅಭಿಷೇಕ, ಪಂಚಾಮೃತ ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೫ ಗಂಟೆಗೆ ನಾಗ ಸನ್ನಿಧಿಯಲ್ಲಿ ವಾಸ್ತು ರಕ್ಷೆÆÃಘ್ನ ಹೋಮ, ಬಿಂಬ ಶುದ್ಧಿ, ಪ್ರಸಾದ ಶುದ್ಧಿ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ತಾ. ೨೨ ರಂದು ಬೆಳಿಗ್ಗೆ ೮ಕ್ಕೆ ಪ್ರತಿಷ್ಠಾ ಪ್ರಧಾನ ಹೋಮ, ಕಲಶಾದಿವಾಸ ಹೋಮ, ಕಲಶ ಪ್ರತಿಷ್ಠಾ ಅಭಿಷೇಕ, ಅಶ್ಲೇಷ ಬಲಿ ನಡೆಯಲಿದೆ.