ವೀರಾಜಪೇಟೆ, ಫೆ. ೧೯: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಅಬ್ಬಕ್ಕ ೫೦೦ ಪ್ರೇರಣಾದಾಯಿ ೧೦೦ ಉಪನ್ಯಾಸ ಸರಣಿಯ ೧೦೦ರ ಸಂಭ್ರಮ ರಾಷ್ಟಿçÃಯ ವಿಚಾರ ಸಂಕಿರಣವು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಇತ್ತೀಚಿಗೆ ನಡೆಯಿತು. ಈ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ ನೀಡಲಾಗಿದ್ದು ಅದರಲ್ಲಿ ವೀರಾಜಪೇಟೆ ತಾಲೂಕಿನ ತೋರ ಗ್ರಾಮ ನಿವಾಸಿ ಕೆ.ಬಿ. ಅಮ್ಮಣ್ಣಿ ವೀರರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸೂಲಗಿತ್ತಿ ನಾಟಿವೈದ್ಯ, ಬಾಣಂತಿ ಆರೈಕೆ, ಜಾನಪದ ಕ್ಷೇತ್ರದಲ್ಲಿನ ಸೇವೆಯನ್ನು ಗಮನಿಸಿ ಈ ಪುರಸ್ಕಾರ ನೀಡಲಾಗಿದ್ದು, ಸೂಕ್ಷ÷್ಮ, ಸಣ್ಣ, ಮಧ್ಯಮ ಉದ್ಯಮಗಳ ರಾಜ್ಯ ಸಚಿವಾಲಯ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಈ ಪುರಸ್ಕಾರ ಪಡೆದಿರುತ್ತಾರೆ. ಅಮ್ಮಣ್ಣಿ ಅವರು ಕೆದಮುಳ್ಳೂರು ಪಂಚಾಯಿತಿಯ ತೋರ ಗ್ರಾಮದ ನಿವಾಸಿ ಭೀಮಯ್ಯ ಅವರ ಪತ್ನಿ.