ವೀರಾಜಪೇಟೆ, ಫೆ. ೧೯: ದೇಶದ ಸಂಸ್ಕöÈತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತರಾಗಬೇಕು ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ವಿದ್ಯಾರ್ಥಿ ಪ್ರಮುಖ್ ರೋಹಿತ್ ಕರೆ ನೀಡಿದರು.
ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರಿನ ಹಿಂದೂ ಸಂಗಮ ಆಯೋಜನಾ ಸಮಿತಿ ಹಾಗೂ ಚೆಂಬೆಬೆಳ್ಳೂರು ಮಂಡಲ ವತಿಯಿಂದ ಚೆಂಬೆಬೆಳ್ಳೂರು ಮಹಿಳಾ ಸಮಾಜದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಆಹಾರ ಸೇರಿದಂತೆ ಜೀವನ ಶೈಲಿ ಬದಲಾಗಿದೆ. ಯುವ ಜನತೆ ನಮ್ಮ ಸಂಸ್ಕöÈತಿಯನ್ನು ಮರೆಯುತ್ತಿದ್ದು, ನಮ್ಮ ಸಂಸ್ಕöÈತಿ, ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಸ್ವದೇಶಿ ಚಿಂತನೆ ಬೆಳೆಸಿಕೊಂಡು, ಸ್ವದೇಶಿ ವಸ್ತುಗಳನ್ನು ಬಳಸುವಂತಾಗಬೇಕೆAದರು.
ಸಂಘದ ಪ್ರಮುಖರಾದ ಟಿ.ಸಿ. ಚಂದ್ರನ್ ಮಾತನಾಡಿ, ನಾಗರಿಕ ಶಿಷ್ಠಾಚಾರ ಪಾಲನೆ ಮಾಡಬೇಕು. ಕಾನೂನು ಪಾಲನೆ ಮಾಡಬೇಕು. ನಮ್ಮ ಸಂಸ್ಕöÈತಿ, ಸಮಾಜ ಮುಂದುವರೆಯಬೇಕು. ಸಂಸ್ಕöÈತಿ ನಾಶವಾದರೆ ಜಗತ್ತಿಗೆ ತೊಂದರೆ ಆಗುತ್ತದೆ. ಪರಿಸರ ಕಾಳಜಿಯೊಂದಿಗೆ ಕೊಡಗನ್ನು ರಕ್ಷಿಸಬೇಕು. ಸ್ವದೇಶಿ ವಸ್ತುಗಳ ಬಳಕೆ ಮಾಡಬೇಕು ಎಂದು ಕರೆ ನೀಡಿದರು.
ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಶಿಕಲಾ ಭಾಸ್ಕರ್ ಮಾತನಾಡಿ, ದೇಶ ಸುಭಿಕ್ಷವಾಗಬೇಕು. ಜಾತಿ ಬೇಧ ಮರೆತು ಹಿಂದೂಗಳಾಗಿ, ನಮ್ಮತನವನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಮೂಕೊಂಡ ಶಶಿ ಸುಬ್ರಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೆಂಬೆಬೆಳ್ಳೂರು ಮಹಿಳಾ ಸಮಾಜದಿಂದ ಮೂಲೆಯಂಗಡಿ ಜಂಕ್ಷನ್ವರೆಗೆ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಗೆ ಕೊಡವ ಸಾಂಪ್ರದಾಯಿಕ ದುಡ್ಡಿಕೊಟ್ಟ್ ಪಾಟ್, ವಾಲಗ ಮೆರುಗು ನೀಡಿತ್ತು.
ವೀರಾಜಪೇಟೆಯ ಗಾಯಕಿಯರಾದ ಅನಿತಾ ರಾಜೇಶ್ ಹಾಗೂ ಸಂಧ್ಯಾ ಗೋಪಾಲ್ ದೇಶಭಕ್ತಿ ಗೀತೆಗಳನ್ನು ಹಾಡಿದರು. ಸ್ಥಳೀಯ ಮಕ್ಕಳಿಂದ ಭಾರತದ ಸಂಸ್ಕöÈತಿ ಬಿಂಬಿಸುವ ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಪ್ರಮುಖರಾದ ಮಚ್ಚಾರಂಡ ಮಣಿ ಕಾರ್ಯಪ್ಪ, ಈಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚಾರಿಮಂಡ ಪ್ರಕಾಶ್ ಇದ್ದರು.
ಕಾರ್ಯಕ್ರಮದಲ್ಲಿ ಚಂಬAಡ ಮುದ್ದಪ್ಪ, ಪೊರ್ಕೊಂಡ ಬನ್ಸಿ ಪೂಣಚ್ಚ, ಚಾರಿಮಂಡ ಭಾನು ಬೋಪಣ್ಣ, ಸೇರಿದಂತೆ ಸ್ಥಳೀಯ ಪ್ರಮುಖರು, ಮತ್ತಿತ್ತರರು ಹಾಜರಿದ್ದರು.