ಪೊನ್ನಂಪೇಟೆ, ಫೆ. ೧೮: ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹಾಗೂ ಅವರ ಮನೆತನದ ಬಗ್ಗೆ ಅವಹೇಳನ ಕಾರಿಯಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವುದಾಗಿ ಆರೋಪಿಸಿ, ನಂದೀಶ್ ಲಿಂಗಾಯತ್ ಎಂಬ ವ್ಯಕ್ತಿಯ ವಿರುದ್ಧ ಪೊನ್ನಂಪೇಟೆ ಠಾಣೆಯಲ್ಲಿ ಅಜ್ಜಿಕುಟ್ಟಿರ ಪಿ. ಪೊನ್ನಪ್ಪ ಅವರು ದೂರು ನೀಡಿದ್ದಾರೆ. ಶಾಸಕರು ಹಾಗೂ ಅಜ್ಜಿಕುಟ್ಟಿರ ಮನೆತನದ ಬಗ್ಗೆ ಕೀಳುಮಟ್ಟದಿಂದ ಕೂಡಿದ, ಅವಹೇಳನಕಾರಿಯಾದ ಭಾಷೆಯನ್ನು ಬಳಸಿ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ ನಂದೀಶ್ ಲಿಂಗಾಯತ್ ಎನ್ನುವ ವ್ಯಕ್ತಿಯು ಮಾಡಿದ ರಾಜಕೀಯ ಪ್ರೇರಿತ ಮತ್ತು ಸೈಧ್ದಾಂತಿಕ ತೇಜೋವಧೆಯನ್ನು ಅಜ್ಜಿಕುಟ್ಟಿರ ಸರ್ವ ಕುಟುಂಬ ಸದಸ್ಯರು ಖಂಡಿಸುತ್ತೇವೆ. ಮಾತ್ರವಲ್ಲ ಕಾನೂನು ಹೋರಾಟಕ್ಕೂ ಸಿಧ್ದರಾಗಿದ್ದೇವೆ. ಫೇಸ್‌ಬುಕ್‌ನಲ್ಲಿ ಈ ರೀತಿಯ ಪೋಸ್ಟ್ ಮಾಡಿ, ಸಾಮಾಜಿಕ ಸ್ವಾಸ್ಥö್ಯವನ್ನು ಕದಡುವ ಪ್ರಯತ್ನ ಮಾಡಿರುವ ವ್ಯಕ್ತಿಯ ಮೇಲೆ ಪೊಲೀಸ್ ಇಲಾಖೆ ಸುಮೋಟೊ ಕೇಸ್ ದಾಖಲಿಸಿ, ಇಂತಹ ಅಸಭ್ಯ ಪೋಸ್ಟ್ಅನ್ನು ಇನ್ನು ಮುಂದೆ ಹಾಕದಂತೆ ಕ್ರಮ ಕೈಗೊಳ್ಳಬೇಕಾಗಿ ಅಜ್ಜಿಕುಟ್ಟಿರ ಮನೆತನದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಒತ್ತಾಯಿಸಿದೆ.