ಮಡಿಕೇರಿ, ಫೆ. ೧೮: ತಾ. ೨೧ ರಂದು ಮರಗೋಡಿನಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜನಾ ಸಮಿತಿ ಪ್ರಮುಖರು ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಖಜಾಂಚಿ ಪಿ.ಬಿ. ಜನಾರ್ಧನ್, ಬೆಳಿಗ್ಗೆ ೯.೩೦ಕ್ಕೆ ಮರಗೋಡು ಪದವಿ ಪೂರ್ವ ಕಾಲೇಜು ಬಳಿಯಿಂದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದ ತನಕ ಮೆರವಣಿಗೆ ನಡೆಯಲಿದೆ. ಭಾರತಾಂಬೆಯ ಭಾವಚಿತ್ರ, ರಾಮ, ಕಾವೇರಿ ಮಾತೆ ಸೇರಿದಂತೆ ವಿವಿಧ ಕಲಾಕೃತಿ ಹೊತ್ತ ಮಂಟಪಗಳು ಸಾಗಲಿವೆ. ಬೆಳಿಗ್ಗೆ ೧೧ ಗಂಟೆಗೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಚೆರಿಯಮನೆ ಉದಯ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ದೇವಾಲಯ ಸಮಿತಿ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ. ರವಿ ಭೂತನಕಾಡು ತಂಡದಿAದ ದೇಶಭಕ್ತಿ ಗೀತೆ ಗಾಯನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿ ಬರಲಿದೆ. ಹೊಸ್ಕೇರಿ, ಮರಗೋಡು, ಕಟ್ಟೆಮಾಡು, ಅರೆಕಾಡು ಭಾಗದಿಂದ ಸುಮಾರು ೧,೫೦೦ ಜನ ಆಗಮಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಅನಂದ್ ರಘು, ಕಾರ್ಯದರ್ಶಿ ಮಗೇರನ ಬೆಳ್ಯಪ್ಪ, ಉಪಾಧ್ಯಕ್ಷ ಪಿ.ಆರ್. ಲಕ್ಷಿö್ಮÃಪತಿ, ಸದಸ್ಯರುಗಳಾದ ಮುಕ್ಕಾಟಿ ಚಿದಂಬರ, ಸನತ್ ಕುಮಾರ್ ಹಾಜರಿದ್ದರು.