ನಾಪೋಕ್ಲು: ಕಣ್ಣಂಗಾಲ ಗ್ರಾಮದ ಶ್ರೀ ಮಹಾದೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ಹಾಗೂ ಶಿವರಾತ್ರಿಯ ವಿಶೇಷ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ರುದ್ರಾಭಿಷೇಕ ಸೇರಿದಂತೆ ಇನ್ನಿತರ, ಪೂಜಾ ಕೈಂಕರ್ಯ ಮಧ್ಯಾಹ್ನ ಮಹಾಪೂಜೆ ಬಳಿಕ ತೀರ್ಥ ಪ್ರಸಾದ ವಿತರಣೆ, ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಮಹಾದೇಶ್ವರ ದೇವರ ಉತ್ಸವ ಅಂಗವಾಗಿ ನೃತ್ಯ ಬಲಿ ಹಾಗೂ ವಸಂತ ಪೂಜೆ ಜರುಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರಿಗೆ ತಮ್ಮ ಹರಕೆ ಕಾಣಿಕೆಗಳನ್ನು ಸಮರ್ಪಿಸಿ ದೇವರ ನೃತ್ಯ ಬಲಿ ವೀಕ್ಷಿಸಿದರು.
ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ನೇತೃತ್ವದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ ಸೇರಿದಂತೆ ಪೂಜಾ ವಿಧಿ ವಿಧಾನ ಜರುಗಿದವು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಚ್ಚಾರಂಡ ರಾಬಿನ್ ಚಿಣ್ಣಪ್ಪ, ಕಾರ್ಯದರ್ಶಿ ಬೆಳ್ಳಿಯಪ್ಪ, ಖಜಾಂಚಿ ವಿ.ಎಲ್. ಆನಂದ್, ತಕ್ಕ ಮುಖ್ಯಸ್ಥರು, ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.ಕಣಿವೆ: ಕುಶಾಲನಗರ ತಾಲೂಕಿನ ಹಾರಂಗಿ ಬಳಿಯ ಅತ್ತೂರು ಗ್ರಾಮದಲ್ಲಿರುವ ಐತಿಹಾಸಿಕ ಪಂಚಲಿAಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಹೋಮ - ಹವನಗಳು ನೆರವೇರಿದವು. ವಿಶ್ವವಸು ಸಂವತ್ಸರದ ಮಾಘ ಬಹುಳ ತ್ರಯೋದಶಿಯ ಭಾನುವಾರದಂದು ಹತ್ತು ಊರಿಗೆ ಒಡೆಯನಾದ ಅತ್ತೂರು ಪಂಚಲಿAಗೇಶ್ವರನಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಶ್ರೀ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ವೇದಮೂರ್ತಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದವು. ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಾ. ೧೪ ರಂದು ಚಾಲನೆ ನೀಡಲಾಯಿತು. ಸಂಜೆ ಗ್ರಾಮದ ತಕ್ಕರಾದ ಉಗ್ರಾಣಿ ಮನೋಜ್ ಕುಮಾರ್ ಅವರ ಮನೆಯಿಂದ ಶ್ರೀ ಕ್ಷೇತ್ರಕ್ಕೆ ಭಂಡಾರವನ್ನು ತರಲಾಯಿತು. ದೇವಾಲಯದ ಅರ್ಚಕ ಅನಂತ ಪದ್ಮನಾಭ ಪೂಜಾ ವಿಧಿಗಳು ನಡೆಸಿಕೊಟ್ಟರು. ಈ ಸಂದರ್ಭ ಮಹಿಳಾ ಭಕ್ತರು ಪೂರ್ಣ ಕುಂಭಗಳನ್ನು ಹೊತ್ತು ಮಂಗಳವಾದ್ಯಗಳೊAದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ತಂದು ವಿಶೇಷವಾಗಿ ಪೂಜಿಸಲಾಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.
ನಿನ್ನೆ ಬೆಳಿಗ್ಗೆ ಆರು ಗಂಟೆಯಿAದ ಪುಣ್ಯಾಹ, ನವಕ ಕಲಶಾಭಿಷೇಕ, ಶ್ರೀ ದೇವರ ಪೂಜೆ, ದೇವರ ಪೂಜೆ, ಮಹಾಪೂಜೆ, ದೇವರ ಬಲಿ, ಪ್ರಸಾದ ವಿತರಣೆ ಮಹಾಮಂಗಳಾರತಿ ನೆರವೇರಿತು. ಸಂಜೆ ದೀಪಾರಾಧನೆ ಹಾಗು ವೀರಾಜಪೇಟೆ ಮತ್ತು ಸಿದ್ದಾಪುರದ ಜಗನ್ಮೋಹನ ನಾಟ್ಯಾಲಯ ಸಂಗೀತ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಭಾರತೀಯ ಶಾಸ್ತಿçÃಯ ನೃತ್ಯ ಕಲೆಗಳ ಶಿವ ಮಹಿಮೆ ನೃತ್ಯ ಪ್ರದರ್ಶನ ಮತ್ತು ಭಕ್ತಿಗೀತೆಗಳ ಗಾಯನ ನೆರವೇರಿತು. ಹಾಗೂ ರಾತ್ರಿ ನೆರೆದ ಭಕ್ತಾದಿಗಳಿಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ಸಾಮೂಹಿಕವಾಗಿ ನೆರವೇರಿಸಲಾಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಉಗ್ರಾಣಿ ಮನೋಜ್ ಕುಮಾರ್, ಕಾರ್ಯದರ್ಶಿ ಬಿ.ಎ. ರಮೇಶ್ ಸೇರಿದಂತೆ ದೇವಾಲಯ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಸೋಮವಾರಪೇಟೆ: ತಾಲೂಕಿನ ವಿವಿಧೆಡೆ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಹಾಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಜಾಗರಣೆ ನಡೆದವು.
ಸಮೀಪದ ಸಿದ್ಧಲಿಂಗಪುರದ ಅರಸಿನಕುಪ್ಪೆ ಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಲಾಯಿತು. ಬೆಳಿಗ್ಗೆ ೫ ಗಂಟೆಯಿAದ ಕ್ಷೇತ್ರದ ಗುರುಗಳಾದ ರಾಜೇಶ್ನಾಥ್ ಗುರೂಜಿ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕರಾದ ಜಗದೀಶ್ ಉಡುಪರ ಪೌರೋಹಿತ್ಯದಲ್ಲಿ ಗಣಪತಿ ಹೋಮದೊಂದಿಗೆ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಸಂಜೆÀ ಶ್ರೀ ಮಂಜುನಾಥಸ್ವಾಮಿಗೆ ಹಾಲಿನ ಅಭಿಷೇಕದೊಂದಿಗೆ ಪ್ರಥಮಯಾಮದ ಪೂಜೆ ನಡೆಯಲಿದೆ. ಪ್ರತಿ ಮೂರು ಗಂಟೆಗೆ ಅಭಿಷೇಕಾದಿಗಳು ನಡೆದವು. ೧೧೦೮ ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಜಲಾಭಿಷೇಕಗಳು ನಡೆದವು. ಪ್ರತಿಯಾಮದ ಪೂಜೆಯಲ್ಲೂ ಏಕದಶಾವರ ರುದ್ರಾಭಿಷೇಕ ಮತ್ತು ರುದ್ರಾಭಿಷೇಕ ಮಾಡಲಾಯಿತು.
ದೇವಾಲಯದಲ್ಲಿ ರುದ್ರಹೋಮ, ಕಲಶಾಭಿಷೇಕದ ನಂತರ ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀರಾಜೇಶ್ನಾಥ್ಜೀ ಅವರ ನೇತೃತ್ವದಲ್ಲಿ ಭಕ್ತಾದಿಗಳಿಗೆ ತೀರ್ಥಸ್ನಾನ ನಡೆಯಿತು. ನಂತರ ಶ್ರೀ ಮಂಜುನಾಥಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ಮಹಾ ನೈವೇದ್ಯ ಮತ್ತು ಮಹಾಪೂಜೆಯ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು. ರಾತ್ರಿ ಅರಸಿನಕುಪ್ಪೆ ಗ್ರಾಮದ ಮಹಿಳಾ ಭಜನಾ ತಂಡ, ಕುಶಾಲನಗರದ ಮಧುಸೂದನ್ ಮತ್ತು ತಂಡದವರಿAದ ಭಜನಾ ಕಾರ್ಯಕ್ರಮ ನಡೆಯಿತು. ಶನಿವಾರಸಂತೆಯ ಪ್ರದೀಪ್ ದೇವಾಲಯಕ್ಕೆ ಎರಡು ಗೋವುಗಳನ್ನು ದಾನವಾಗಿ ನೀಡಿದರು. ಕಾರ್ಯಕ್ರಮದ ಸಂದರ್ಭ ಸೋಮವಾರಪೇಟೆ ವಿರಕ್ತ ಮಠಾಧೀಶರಾದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವ ಅಧ್ಯಕ್ಷ ನಾಪಂಡ ಮುದ್ದಪ್ಪ, ಕಾರ್ಯದರ್ಶಿ ಪ್ರಕಾಶ್, ರಮೇಶ್, ನವಚಂಡಿಕಾ ಸಮಿತಿ ಅಧ್ಯಕ್ಷ ಹೊಸೊಕ್ಲು ಸತೀಶ್, ಕಾರ್ಯದರ್ಶಿ ಹರೀಶ್ ಇದ್ದರು.
ಪೂಜಾ ಕಾರ್ಯದಲ್ಲಿ ಅರ್ಚಕರುಗಳಾದ ಹರಿಭಟ್, ವಾದಿರಾಜ್ ಭಟ್, ರಮೇಶ್ ಭಟ್, ವೆಂಕಟೇಶ್ ಹೊಳ್ಳ, ಸೋಮನಾಥ ಹೊಳ್ಳ, ಜಯರಾಮ ಹೊಳ್ಳ, ಬಜೆಗುಂಡಿ ಮಣಿ ಇದ್ದರು. ಅರಸಿನಕುಪ್ಪೆ ಗ್ರಾಮದ ಹಿರಿಯ ಕಲಾವಿದ ಶಾಂತಪ್ಪ ಅವರಿಂದ ಏಕಪಾತ್ರಾಭಿನಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
* ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಏಕವಾರು ರುದ್ರಾಭಿಷೇಕ, ಕಳಶ ಪೂರಕ ಏಕಾದಶವಾರ ರುದ್ರ ಪಾರಾಯಣ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಶ್ರೀ ಗಣಪತಿ, ಸೋಮೇಶ್ವರ ಹಾಗೂ ಪಾರ್ವತಿ ಸನ್ನಿಧಿಯಲ್ಲಿ ರಂಗಪೂಜೆ ಜರುಗಿತು. ರುದ್ರಾಕ್ಷೇಶ್ವರ ಸನ್ನಿಧಿಯಲ್ಲಿ ಬೆಂಗಳೂರಿನ ರಾಮಕೃಷ್ಣ ಆಶ್ರಮದ ಚೇತನ್ ಮತ್ತು ತಂಡದವರಿAದ ಭಜನೆ ಹಾಗೂ ಸಂಗೀತ ಕಾರ್ಯಕ್ರಮ, ದೇವಿಬಳಗ ಮತ್ತು ಶ್ರೀ ಮಾತಾ ಬಳಗದಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು. ನಂತರ ದೇವಾಲಯದಲ್ಲಿ ರುದ್ರಹೋಮ ಸಂಕಲ್ಪ, ಕಳಶಾರಾಧನೆ, ರುದ್ರಹೋಮ ಹಾಗೂ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ನಡೆಯಿತು.
* ಮಸಗೋಡು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ರುದ್ರಾಭಿಷೇಕದ ನಂತರ ಪ್ರಸಾದ ವಿನಿಯೋಗ, ಗಂಗಾಪೂಜೆ, ಬಸವಣ್ಣನ ಅಡ್ಡೆ, ವೀರಗಾಸೆ ಮೆರವಣಿಗೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ರುದ್ರಹೋಮ, ಶ್ರೀ ಸ್ವಾಮಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ದೇವಾಲಯದ ಆವರಣದಲ್ಲಿ ಕೇರಳದ ಸಿಹಿ ಕುಮಾರ್ ನೇತೃತ್ವದ ತಂಡದವರು ನೆರವೇರಿಸಿದರು. ಸಂಜೆ ಉಮಾಮಹೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಹುದುಗೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ಮಹಿಳೆಯರು ಮಣ್ಣಿನ ದೀಪ ಹಿಡಿದು ಮೆರವಣಿಗೆ ಸಾಗಿ ನಂತರ ಸ್ವ ಸ್ಥಾನಕ್ಕೆ ಬರಲಾಯಿತು.
ಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯ, ಗ್ರಾಮದ ಪ್ರಮುಖ ಬೀದಿಗಳು ವಿದ್ಯುತ್ ತಳಿರು ತೋರಣಗಳಿಂದ ಸಿಂಗಾರಗೊAಡಿದ್ದವು. ಅಗಮಿಸಿದ್ದ ಸಾವಿರಾರು ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ಕಾರ್ಯ ನೆರವೇರಿತು. ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು ಹುದುಗೂರು ಕುಶಾಲನಗರ ಹಾರಂಗಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಉಪಾಧ್ಯಕ್ಷ ಎನ್. ಎಸ್. ಮುತ್ತಪ್ಪ, ಕಾರ್ಯದರ್ಶಿ ಬಿ.ಎಲ್. ಸುರೇಶ್ ಸೇರಿದಂತೆ ಸಮಿತಿಯ ನಿರ್ದೇಶಕರುಗಳು, ಗ್ರಾಮಸ್ಥರು, ಪ್ರಧಾನ ಅರ್ಚಕರುಗಳಾದ ಸಜಿ, ಸಿಹಿ ಕುಮಾರ್ ತಂಡದವರು ಇದ್ದರು.ಐಗೂರು: ಕಿರಗಂದೂರು ಗ್ರಾಮದ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪೂಜೆ ಭಕ್ತಿಪೂರ್ವಕವಾಗಿ ಸಂಪನ್ನಗೊAಡಿತು. ದೇವಾಲಯವನ್ನು ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಅರ್ಚಕರಾದ ಪ್ರದೀಪ್ ಕಶ್ಯಪ್ ಅವರ ನೇತೃತ್ವದಲ್ಲಿ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಡೆದವು. ಕಿರಗಂದೂರು, ಐಗೂರು ಮತ್ತು ತಾಕೇರಿ ಗ್ರಾಮದ ಭಕ್ತಾದಿಗಳು ಪೂಜೆಯಲ್ಲಿ ಭಾಗವಹಿಸಿ ಶಿವನಿಗೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಮತ್ತು ಪೂಜೆಯನ್ನು ಸಲ್ಲಿಸಿದರು.
ಭಕ್ತಾದಿಗಳಿಗೆ ತೀರ್ಥ ಪ್ರಸಾದ ಮತ್ತು ಅನ್ನಸಂತರ್ಪಣೆ ನಡೆದವು. ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷ ಚಿದಾನಂದ, ಕಾರ್ಯದರ್ಶಿ ರಿಷಿನ್ ಕುಮಾರ್, ಆಡಳಿತ ಮಂಡಳಿಯ ಸದಸ್ಯರು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.ಮಡಿಕೇರಿ: ಶಿಥಿಲಗೊಂಡಿರುವ ಟಿ. ಶೆಟ್ಟಿಗೇರಿಯ ಸಿದ್ಧಾರೂಢ ಆಶ್ರಮದ ಕಟ್ಟಡ ಕಾಯಕಲ್ಪಕ್ಕೆ ಸಹಕಾರ ನೀಡುವುದಾಗಿ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ತಾ. ೧೫ ರಂದು ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ನಡೆದ ಶಿವರಾತ್ರಿ ಆಚರಣೆ ಸಂದರ್ಭ ಶಾಸಕರು ಮಾತನಾಡಿದರು. ಸಿದ್ಧು ಸ್ವಾಮೀಜಿ ಅವರು ನಡೆಸುತ್ತಿರುವ ಆಶ್ರಮಕ್ಕೆ ಭಕ್ತವೃಂದ ಸಹಕಾರ ನೀಡುತ್ತಿದ್ದು, ವಾರಿಸುದಾರರ ಕೊರತೆಯಿಂದ ಪರರ ಪಾಲಾಗುತ್ತಿರುವ ಇತರ ಕೆಲವು ಆಶ್ರಮಗಳಂತೆ ಸಿದ್ಧಾರೂಢ ಆಶ್ರಮವೂ ಆಗದಿರಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತ ಶಯನ ಅವರು, ಮಾನವನು ತನ್ನ ಮೂಲವಾದ ದೈವತ್ವವನ್ನು ಮರೆತಿದ್ದಾನೆ. ಮರೆವು ಅಳಿಯಲು ಉತ್ತಮ ಗುರುವಿನ ಮೂಲಕ ಅರಿವು ದೊರೆಯಬೇಕು. ಅರಿವು ದೊರೆತಲ್ಲಿ ಅಧ್ಯಾತ್ಮಿಕ ಸಾಧನೆಯತ್ತ ಮರಳುವ ತಿರುವು ದೊರೆತು, ಆತ ಮತ್ತೆ ಮೂಲದಲ್ಲಿ ನೆಲೆಸಲು ಸಾಧ್ಯ ಎಂದರು.
ಆರ್.ಎಸ್.ಎಸ್. ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ ಮಾತನಾಡಿ, ಮಾನವ ಜನ್ಮದ ಉದ್ದೇಶ ಮಾನವ ಸಮಷ್ಠಿಯಲ್ಲಿ ಒಂದಾಗುವುದು ಎಂದು ಹೇಳಿದರು. ಮನೆ ಮನೆಯಲ್ಲಿ ಅಧ್ಯಾತ್ಮಿಕ ಮೌಲ್ಯದ ಅರಿವು ಮೂಡಿಸುವ, ಸಂಸ್ಕಾರ ಬೆಳೆಸುವ ಕಾರ್ಯ ಆಗಬೇಕೆಂದು ನುಡಿದರು.
ಮಾತಂಡ ಕಂಬ ಉತ್ತಯ್ಯ ಮಾತನಾಡಿ, ಭಾರತದ ಪುಣ್ಯ ಭೂಮಿಯಲ್ಲಿ ಜನಿಸುವುದೇ ಒಂದು ಭಾಗ್ಯ ಎಂದು ಉದಾಹರಣೆ ಸಹಿತ ವಿವರಿಸಿದರು. ಸನಾತನ ಧರ್ಮಕ್ಕಿಂತ ಶ್ರೇಷ್ಠವಾದುದು ಮತ್ತೊಂದಿಲ್ಲ ಎಂದು ನುಡಿದರು.
ಕಳ್ಳಿಚಂಡ ನಟರಾಜ್ ಅವರು ಮಾತನಾಡಿ, ಶಿಥಿಲಗೊಳ್ಳುತ್ತಿರುವ ಆಶ್ರಮ ಕಟ್ಟಡ ಕಾಮಗಾರಿಗೆ ಶಾಸಕರು ಸಹಕಾರ ನೀಡಲು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಹರೀಶ್ ಮಾದಪ್ಪ ಅವರು ಭಗವಂತನಿಲ್ಲದ ಜಾಗವಿಲ್ಲ ಎಂದು ನುಡಿದು ಕನಕದಾಸರ ಉದಾಹರಣೆ ನೀಡಿದರು.
ಸಿದ್ಧು ಸ್ವಾಮೀಜಿ, ಕಾಂಚನ್ ಪೊನ್ನಣ್ಣ ಉಪಸ್ಥಿತರಿದ್ದರು. ಅಶ್ವಿನಿ ಸತೀಶ್ ಸ್ವಾಗತಿಸಿ, ನಿರೂಪಿಸಿದರು. ಕಳ್ಳಿಚಂಡ ಕಾಶಿ ಅವರು ಅನ್ನಪ್ರಸಾದ ಏರ್ಪಡಿಸಿದ್ದರು.ಕಣಿವೆ: ಕುಶಾಲನಗರದ ಕಾವೇರಿ ನಿಸರ್ಗಧಾಮದ ಹಿಂಬದಿಯಲ್ಲಿ ಏಳು ಸೀಳಾಗಿ ಹರಿದಿರುವ ಕಾವೇರಿ ನದಿಯೊಳಗಿನ ಐತಿಹಾಸಿಕ ಹಿನ್ನೆಲೆಯ ಶ್ರೀ ರಾಮಲಿಂಗೇಶ್ವರನಿಗೆ ಶಿವರಾತ್ರಿಯಂದು ಭಕ್ತ ಸಮೂಹ ಶಿವ ಶಿವ ಎಂದು ಸಾಮೂಹಿಕ ನಾಮಸ್ಮರಣೆ ಮಾಡುವ ಮೂಲಕ ಭಕ್ತಿ ಭಾವ ಮೆರೆಯಿತು.
ದೊಡ್ಡಹೊಸೂರು ಗ್ರಾಮದ ಶರಣೆ ಶಿವಲಿಂಗಮ್ಮ ಕುಟುಂಬಸ್ಥರು ಸಂಪ್ರದಾಯದAತೆ ಪ್ರತಿ ವರ್ಷದ ಶಿವರಾತ್ರಿ ಯಂದು ರಾತ್ರಿ ಜಾಗರಣೆ ಪೂಜೆ ಮಾಡುವ ಮೂಲಕ ಮರುದಿನ ಭಕ್ತಾದಿಗಳ ಸಮ್ಮುಖದಲ್ಲಿ ಮಹಾಪೂಜೆ, ಮಹಾಮಂಗಳಾರತಿ ನೆರವೇರಿಸಿ ಅನ್ನಸಂತರ್ಪಣೆ ನೆರವೇರಿಸಿದರು.
ಕುಶಾಲನಗರ, ಮಾದಾಪಟ್ಟಣ, ಗುಡ್ಡೆಹೊಸೂರು, ಬೈಚನಹಳ್ಳಿ, ಚಿಕ್ಕಹೊಸೂರು, ದೊಡ್ಡಹೊಸೂರು, ಮರೂರು ಸೇರಿದಂತೆ ಹತ್ತಾರು ಹಳ್ಳಿಗಳ ನೂರಾರು ಭಕ್ತರು ಏಳು ಸೀಳು ಹೊಳೆಯ ರಾಮನ ಸನ್ನಿಧಿಗೆ ಧಾವಿಸಿ ಪೂಜೆಯಲ್ಲಿ ಪಾಲ್ಗೊಂಡು ಪುನೀತರಾದರು.
ಈ ಸಂದರ್ಭ ಮಾತನಾಡಿದ ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ, ಶ್ರೀರಾಮನು ಕಾವೇರಿ ಸನ್ನಿಧಿಯಲ್ಲಿ ಮರಳಿನಿಂದ ಪ್ರತಿಷ್ಠಾಪನೆ ಮಾಡಿ ಪೂಜಿಸಿದ್ದಾಗಿ ನಂಬಿಕೆ ಇರುವ ಕಾರಣ ಪುರಾತನ ಕಾಲದಿಂದಲೂ ಶಿವರಾತ್ರಿಯಂದು ಮಹಾಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ ಎಂದರು. ದೊಡ್ಡಹೊಸೂರು ಜೈಪರಮೇಶ್, ಮಂಜುನಾಥ ಸ್ವಾಮಿ, ಕುಮಾರ್, ವಕೀಲ ಸಿ.ಎಸ್. ಮಂಜುನಾಥ್, ಶಿಕ್ಷಕಿ ಡಿ.ಎಂ.ಮಹಾದೇವಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.ಗುಡ್ಡೆಹೊಸೂರು: ಸಮೀಪದ ಬೊಳ್ಳುರು ಗ್ರಾಮದ ಮುನೇಶ್ವರ ದೇವಸ್ಥಾನಲ್ಲಿ ಶಿವರಾತ್ರಿ ಮಹಾಪೂಜೆ ನಡೆಸಲಾಯಿತು. ಪ್ರತಿ ವರ್ಷ ಶಿವರಾತ್ರಿಯ ಮರುದಿನ ಇಲ್ಲಿ ಪೂಜೆ ನಡೆಸಲಾಗುತ್ತಿದೆ. ೨೫ನೇ ವರ್ಷದ ಮಹಾಪೂಜೆ ನೆರವೇರಿತು. ಈ ಸಂದರ್ಭ ಗಣಪತಿ ಹೋಮ ಮತ್ತು ಸತ್ಯನಾರಾಯಣ ಪೂಜೆ ನಡೆಯಿತು. ಪೂಜಾ ಕಾರ್ಯವನ್ನು ಸೋಮಶೇಖರ್ ಭಟ್ ತಂಡದವರು ನೆರವೇರಿಸಿದರು. ದೇವಸ್ಥಾನಕ್ಕೆ ಸ್ಥಳ ದಾನ ಮಾಡಿದ ಸ್ಥಳೀಯ ದಾನಿಗಳಾದ ಸರೋಜ ನಾರಾಯಣ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಶಶಿಕುಮಾರ್ ಮತ್ತು ಕಾರ್ಯದರ್ಶಿ ಕುಡೆಕಲ್ ಗುರುಪ್ರಸಾದ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂಧರ್ಭ ಅಲ್ಲಿನ ಶ್ರೀ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಸಿ. ಮಲ್ಲಿಕಾರ್ಜುನ ಮತ್ತು ಗ್ರಾಮದ ಹಿರಿಯರಾದ ಕೆ.ಎಲ್. ರಾಮಣ್ಣ ಮತ್ತು ಸಮಿತಿಯ ಸದಸ್ಯರು ಹಾಜರಿದ್ದರು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಐಗೂರು: ಮಹಾಶಿವರಾತ್ರಿ ಹಬ್ಬದ ಆಚರಣೆಯ ಪ್ರಯುಕ್ತ ಐಗೂರಿನ ಈಶ್ವರ ದೇವಾಲಯದಲ್ಲಿ ಶಿವನ ಆರಾಧನೆ ನಡೆಯಿತು. ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಅರ್ಚಕರಾದ ಮನು ಭಟ್ಟರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಶಿವನಿಗೆ ರುದ್ರಾಭಿಷೇಕ, ಪಂಚಾಮೃತ, ಅಲಂಕಾರ ಪೂಜೆ ಮುಗಿದ ನಂತರ ತೀರ್ಥ ಪ್ರಸಾದ ವಿನಿಯೋಗ ಗಳು ನಡೆಯಿತು. ಸುತ್ತಮುತ್ತಲ ಗ್ರಾಮಸ್ಥರು, ಮಾತೆಯರು, ಈಶ್ವರನಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಣ್ಣು ಕಾಯಿ ಮತ್ತು ಹರಕೆಯನ್ನು ಸಲ್ಲಿಸಿದರು.
ಪೂಜಾ ಕಾರ್ಯಕ್ರಮಕ್ಕೆ ಐಗೂರಿನ ಎಂ.ಸಿ. ಸಂಜಯ್, ಎಂ.ಸಿ. ಗಣೇಶ್ ಮತ್ತು ಕುಟುಂಬಸ್ಥರು ಕೈಜೋಡಿಸಿದರು.