ಸೋಮವಾರಪೇಟೆ, ಫೆ. ೧೮: ಕಾಫಿ ತೋಟದಲ್ಲಿ ಕಾಫಿ ಹಣ್ಣನ್ನು ಕಳವು ಮಾಡುತ್ತಿದ್ದ ಆರೋಪಿಯೋರ್ವನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬೇಳೂರು ಎಸ್ಜೆಎಂ ಮಠದ ಕಾಫಿ ಎಸ್ಟೇಟ್ನಲ್ಲಿ ಅಕ್ರಮವಾಗಿ ಕಾಫಿ ಹಣ್ಣನ್ನು ಕಳವು ಮಾಡು ತ್ತಿರುವ ಬಗ್ಗೆ ತೋಟದ ವ್ಯವಸ್ಥಾಪಕ ಹೆಚ್.ಎಂ. ಶಶಿಧರ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾರ್ಯಾ ಚರಣೆ ನಡೆಸಿದ ಪೊಲೀಸರು ಕಾಫಿ ತೋಟದಲ್ಲಿ ಕಾಫಿ ಹಣ್ಣನ್ನು ಕಳವು ಮಾಡುತ್ತಿದ್ದ ಕರ್ಕಳ್ಳಿ ವಲ್ಲಭಬಾಯಿ ರಸ್ತೆ ನಿವಾಸಿ ಪುಟ್ಟಸ್ವಾಮಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೋರ್ವ ಆರೋಪಿ ಕರ್ಕಳ್ಳಿ ಬಾಣೆಯ ಮಂಜುನಾಥ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಸ್ಥಳದಲ್ಲಿದ್ದ ೩ ಚೀಲ ಕಾಫಿ ಹಣ್ಣಿನ ಸಹಿತ ಆರೋಪಿಯನ್ನು ಬಂಧಿಸಿರುವ ಪೊಲೀಸರು, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತಲೆಮರೆಸಿಕೊಂಡಿರುವ ಮಂಜುನಾಥ್ನ ಬಂಧನಕ್ಕೆ ಬಲೆ ಬೀಸಿದ್ದಾರೆ.
ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ, ಕಾಫಿ ಕೊಯ್ಲು ಮಾಡಿ ಈವರೆಗೆ ೩ ಚೀಲ ಮಾರಾಟ ಮಾಡಿದ್ದು, ಇದೀಗ ಮತ್ತೊಮ್ಮೆ ೩ ಚೀಲ ಕಾಫಿಯನ್ನು ಕಳವು ಮಾಡುವ ಸಂದರ್ಭ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.