ಶ್ರೀಮಂಗಲ, ಫೆ. ೧೭: ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪರಕಟ ಗೇರಿಯಲ್ಲಿರುವ ಶ್ರೀ ಧಾರಮಹೇಶ್ವರ ದೇವಾಲಯಕ್ಕೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿ ಶಾಸಕರ ಅನುದಾನ ರೂ.೫ ಲಕ್ಷದ ನೂತನವಾಗಿ ನಿರ್ಮಾಣವಾಗಿರುವ, ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ವಲಯ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಬುಟ್ಟಿಯಂಡ ತಂಬಿ ನಾಣಯ್ಯ, ಗಪ್ಪಣ್ಣ, ಗಣಪತಿ, ಬೊಳ್ಳೇರ ಅಪ್ಪುಟು ಪೊನ್ನಪ್ಪ,, ಕಳಕಂಡ ಜೀತು ಕುಶಾಲಪ್ಪ, ಚೇತನ್, ಅಣ್ಣಳಮಾಡ ಸನ್ನಿ,ಕಾಳಿಮಾಡ ರಶಿಕ, ಕರ್ತಮಾಡ ಸುನಂದ, ನೆಲ್ಲೀರ ಸೋಮಣ್ಣ, ಬೊಟ್ಟಂಗಡ ಜಗದೀಶ್, ಅಣ್ಣಳಮಾಡ ಅಮನ್, ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.