ಮಡಿಕೇರಿ, ಫೆ. ೧೭: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಪದವಿ ಪ್ರದಾನ ಸಮಾರಂಭವನ್ನು ಇತ್ತೀಚೆಗೆ ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಮುಖರಾದ ಪ್ರೇಮಲತಾ ಹಾಗೂ ರೀನಾ ಕುಶಾಲಪ್ಪ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಿದರು.

ಪ್ರೇಮಲತಾ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸತ್ಯ, ಪ್ರಾಮಾಣಿಕತೆ, ಧೈರ್ಯದಿಂದಿ ಜೀವನ ಎದುರಿಸಬೇಕು ಹಾಗೆ ಪೋಷಕರು ಮಕ್ಕಳಿಗೆ ಉತ್ತಮ ವಾತಾವರಣ, ಮುಕ್ತವಾಗಿ ಯೋಚಿಸಲು ಅವಕಾಶವನ್ನು ನೀಡಬೇಕು ಎಂದರು. ಮಕ್ಕಳ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನು ಗೌರವಿಸಬೇಕೆಂದು ಹೇಳಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ, ಮೊಬೈಲ್‌ಗಳನ್ನು ಹೆಚ್ಚಾಗಿ ಉಪಯೋಗಿಸದಂತೆ ನೋಡಿಕೊಳ್ಳಬೇಕೆಂದು ಪೋಷಕರಿಗೆ ಸಲಹೆ ಇತ್ತರು. ಪ್ರಾಂಶುಪಾಲರಾದ ಸವಿತಾ ಪೂವಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾದ ಮೌಲ್ಯವನ್ನು ಹೊಂದಿರುವವರು, ಆದ್ದರಿಂದ ನಾವು ಅದರ ಬಗ್ಗೆ ಕಾಳಜಿಯನ್ನು ವಹಿಸಬೇಕು, ಆಗ ಮಾತ್ರ ಅವರು ಉತ್ತಮ ನಾಯಕರಾಗಿ ಸಮಾಜದಲ್ಲಿ ಬೆಳೆಯುತ್ತಾರೆ ಎಂದರು.

ಶಾಲಾ ಆಡಳಿತಾಧಿಕಾರಿ ಪೊನ್ನಮ್ಮ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿ, ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮವಾದ ತರಬೇತಿಯನ್ನು ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪುಟಾಣಿಗಳು ಶಿಕ್ಷಕರಿಗೆ ವಂದನೆಯನ್ನು ಸಲ್ಲಿಸಿದರು ಹಾಗೂ ಪೋಷಕರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊAಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿತಾ ಬೊಳ್ಳಪ್ಪ ಅವರು ವಹಿಸಿದ್ದರು. ಪ್ರೇಮಲತಾ ಹಾಗೂ ರೀನಾ ಕುಶಾಲಪ್ಪ ಮುಖ್ಯ ಅತಿಥಿಗಳಾಗಿದ್ದು, ಮಡಿಕೇರಿ ಕೊಡವ ಸಮಾಜದ ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರಾವತಿ ಸ್ವಾಗತಿಸಿ, ಮಿಥಿಲಾ ವಾರ್ಷಿಕ ವರದಿಯನ್ನು ವಾಚಿಸಿ, ವಿನ್ಯಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ಎಲ್ಲರ ಮನರಂಜಿಸಿದರು. ಸಹ ಶಿಕ್ಷಕಿ ಹರ್ಷಿತಾ ವಂದನಾರ್ಪಣೆ ಗೈದರು.