ಕೂಡಿಗೆ, ಫೆ.೧೭: ನಾಡಿಗೆ ಸ್ವಾತಂತ್ರö್ಯ ಬಂದು ೭೭ ವರ್ಷಗಳೂ ಸಂದರೂ ಇನ್ನೂ ಕೂಡ ಅದೆಷ್ಟೋ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ನೀರು, ರಸ್ತೆ, ನಿವೇಶನ, ಹಕ್ಕುಪತ್ರ., ಹೀಗೇ...! ಇದಕ್ಕೊಂದು ನಿದರ್ಶನ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಡಗಿನ ಬುಡಕಟ್ಟು ಜನಾಂಗವಾದ ಯರವ ಜನಾಂಗದವರು ನೆಲೆಸಿರುವ ಸೀತಾ ಕಾಲೋನಿ..!

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದ ಕಾಳಿದೇವನ ಹೊಸೂರು ಗ್ರಾಮದ ಕಕ್ಕೆಹೊಳೆ ನದಿ ದಂಡೆಯ ಸಮೀಪದಲ್ಲಿರುವ ಸೀತಾ ಕಾಲೋನಿಯಲ್ಲಿ ಬುಡಕಟ್ಟು ಯರವ ಜನಾಂಗದ ೧೫ ಕುಟುಂಬದವರು ನೆಲೆಸಿದ್ದಾರೆ.

ಸ್ವಲ್ಪಮಟ್ಟಿಗೆ ಕೃಷಿ ಭೂಮಿ ಇದ್ದರೂ, ಮೂರು ತಲೆಮಾರು ಕಳೆದರೂ ಇದುವರೆಗೂ ಇವರುಗಳಿಗೆ ಹಕ್ಕುಪತ್ರ ಮಾತ್ರ ಸಿಕ್ಕಿಲ್ಲ..! ೧೯೫೦ರ ದಶಕದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಹೆಂಚು ಮನೆ ನಿರ್ಮಾಣದ ಯೋಜನೆ ಅಡಿ ಮತ್ತು ರಾಜ್ಯ ಸರ್ಕಾರದ ಐಕ್ಯತೆ ಯೋಜನೆ ಅಡಿಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾ ಕಾಲೋನಿ ಗ್ರಾಮದ ಸ.ನಂ. ೮/೨ ರಲ್ಲಿ ೧೫ ಎಕರೆ ಪ್ರದೇಶದಲ್ಲಿ ೧೫ ಯರವ ಕುಟುಂಬದವರಿಗೆ ಹೆಂಚಿನ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಜೊತೆಯಲ್ಲಿ ೧೫ ಕುಟುಂಬದವರು ಸಮೀಪದಲ್ಲಿದ್ದ ಕಾಡನ್ನು ಕಡಿದು ತಮ್ಮ ಜೀವನ ಸಾಗಿಸಲು ಭೂಮಿ ಸಿದ್ಧ ಮಾಡಿಕೊಂಡು ಬೇಸಾಯ ಮಾಡಲು ಆರಂಬಿಸಿದರು. ಅಂದಿನಿAದಲೂ ಇಂದಿನವರೆಗೂ ಸೀತಾ ಕಾಲೋನಿಯ ಭೂಮಿ ನೀರಾವರಿ ಕೃಷಿ ಭೂಮಿಯಾಗಿ ಉಳಿದುಕೊಂಡಿದೆ. ಸಮೀಪದಲ್ಲೇ ಕಕ್ಕೆ ಹೊಳೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ಆಗಿನ ಯರವ ಕುಟುಂಬದವರಿಗೆ ಸರಕಾರದ ಗಿರಿಜನರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬೇಸಾಯ ಮಾಡಲು ಕಕ್ಕೆ ಹೊಳೆಯಿಂದ ನೀರನ್ನು ಎತ್ತಿ ಬೇಸಾಯ ಅನುಕೂಲ ಕಲ್ಪಿಸುತ್ತಿದ್ದ ಪಂಪ್ ಹೌಸ್ ಮನೆ ಇಂದಿಗೂ ಹಾಗೆಯೇ ಪಳೆಯುಳಿಕೆಯಂತೆ ಉಳಿದುಕೊಂಡಿದೆ. ಆದರೆ, ಸೀತಾ ಕಾಲೋನಿಯ ಕುಟುಂಬದವರು ಹಾರಂಗಿ ನಾಲೆಯ ನೀರು ಬಳಕೆ ಮಾಡಿಕೊಂಡು ಬೇಸಾಯ ಮಾಡುತ್ತಿದ್ದಾರೆ.

ಹಕ್ಕು ಪತ್ರ ಇಲ್ಲ..!

ಮೂರು ತಲೆಮಾರುಗಳಿಂದ ಈ ವ್ಯಾಪ್ತಿಯಲ್ಲಿ ವಾಸಿರುತ್ತಿರುವ ಕುಟುಂಬದವರು ಸರಕಾರದ ನಿಯಮಾನುಸಾರ ಸಂಬAಧಿಸಿದ ಇಲಾಖೆಗೆ ಅರ್ಜಿ ಸಲ್ಲಿಸುತ್ತಲೇ ಬರುತ್ತಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದುವರೆಗೆ ತಾವು ವಾಸಿಸುತ್ತಿರುವ ಮನೆ ಹಾಗೂ ಬೇಸಾಯ ಮಾಡುತ್ತಿರುವ ಜಾಗಕ್ಕೆ ಯಾವದೇ ಹಕ್ಕು ಪತ್ರಗಳನ್ನು ನೀಡಿಲ್ಲ. ಇದರಿಂದಾಗಿ ಸರಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ೧೯೮೩ ರಲ್ಲಿ ಭೂಮಿಗೆ ನೇರ ಮಂಜೂರಾತಿಯಡಿ ಗಿರಿಜನರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಎರಡು ಬಾರಿ ಸರ್ವೆ ನಡೆಸಿದರೂ ಅಂದಿನಿAದ ಇಂದಿನವರೆಗೂ ಕಾರ್ಯಗತವಾಗದೆ ನೆನೆಗುದ್ದಿಗೆ ಬಿದ್ದಿದೆ.

ಈ ಬಗ್ಗೆ ಸೀತಾ ಕಾಲೋನಿ ಕುಟುಂಬದವರು ಅನುಭವಿಸುತ್ತಿರುವ ಬಗ್ಗೆ ಹಾಡಿ ಮುಖ್ಯಸ್ಥರಾದ ಪಿ. ಎ. ಮಣಿ, ಹರೀಶ್, ಪೂವಮ್ಮ, ವೀಣಾ, ಲೀಲಾ, ಮಾಚಯ್ಯ, ಗೀತಾ ಸೇರಿದಂತೆ ಹಲವಾರು ಮಂದಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

ಕೃಷಿ ಸಾಲದ ಸೌಲಭ್ಯವಿಲ್ಲ...!

ಇಲ್ಲಿ ನೆಲೆಸಿರುವ ೧೫ ಕುಟುಂಬದವರು ಕೂಡ ಸ್ಥಳೀಯ ಸಹಕಾರ ಸಂಘದ ಸದಸ್ಯರಾಗಿದ್ದಾರೆ. ಅದರೆ ಇವರುಗಳಿಗೆ ಯಾವದೇ ಕೃಷಿ ಸಾಲದ ಸೌಲಭ್ಯವಿಲ್ಲ. ಸರಕಾರದ ಸಹಕಾರ ಕಾಯ್ದೆ ಅಡಿಯಲ್ಲಿ ಉಚಿತವಾಗಿ ಗಿರಿಜನರು ಆಯಾ ಜಿಲ್ಲೆಯ ಸಹಕಾರ ಸಂಘಗಳಿಗೆ ಸದಸ್ಯರುಗಳು ಅಗಲು ಅವಕಾಶ ಇರುವ ಹಿನ್ನೆಲೆಯಲ್ಲಿ ಸೀತಾ ಕಾಲೋನಿಯ ೧೫ ಕುಟುಂಬದವರು ಸ್ಥಳೀಯ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದರೂ ಸಹ ಸರಕಾರದ ಕೃಷಿ ನೀತಿಯ ಸಾಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕಾರಣ ಹಕ್ಕು ಪತ್ರವನ್ನು ಕಡ್ಡಾಯವಾಗಿ ನೀಡಬೇಕಾಗಿರುವದರಿಂದ ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಸಹಕಾರ ಸಂಘ ಚುನಾವಣೆಯಲ್ಲಿ ಮತದಾನದ ಮಾಡುವ ಹಕ್ಕು ಇದೆ, ಆದರೆ ಸೌಕರ್ಯಗಳು ಇಲ್ಲ. ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಅಭ್ಯರ್ಥಿಗಳಿಗೆ ಮತದಾನ ಮಾಡುವ ಹಕ್ಕುನ್ನು ನೀಡಿದೆ. ಆದರೆ, ಸಾಲ ಸೌಲಭ್ಯ ಹೊಂದುವ ಅವಕಾಶ ಮಾತ್ರ ಇಲ್ಲದಂತಾಗಿದೆ.

೨೫ ವರ್ಷಗಳಿಂದ ಅರ್ಜಿ..!

ಸೀತಾ ಕಾಲೋನಿ ಯರವ ಜನಾಂಗದ ಕುಟುಂಬದ ಸದಸ್ಯರು ಜಿಲ್ಲಾಡಳಿತ, ಸಂಬAಧಿಸಿದ ಇಲಾಖೆ, ಮೈಸೂರು ವಿಭಾಗದ ಗ್ರಾಮ ಪಂಚಾಯತ್ ಪ್ರಾದೇಶಿಕ ಆಯುಕ್ತರು ಸೇರಿದಂತೆ ಜಿಲ್ಲೆಯ ಉಸ್ತುವಾರಿ ಸಚಿವರುಗಳು, ಜಿಲ್ಲೆಯ ಜನಪ್ರತಿನಿಧಿಗಳಿಗೆ ಕಳೆದ ೨೫ ವರ್ಷಗಳಿಂದ ಅರ್ಜಿ ಸಲ್ಲಿಸುತ್ತಲೇ ಬರುತ್ತಿದ್ದರೂ ಇದುವರೆಗೂ ಯಾರೂ ಕೂಡ ಇವರತ್ತ ಕಣ್ಣೆತ್ತಿಯೂ ನೋಡದಿರುವದು ದುರಂತವೇ ಸರಿ..! ಮಾಜಿ, ಹಾಲಿ ಶಾಸಕರುಗಳು ಬಂದು ಭರವಸೆ ನೀಡಿದರೂ ಅವುಗಳು ಗಾಳಿಯಲ್ಲಿ ತೇಲಿಹೋಗಿವೆ ವಿನಃ ಕಾಲೋನಿಯತ್ತ ಸುಳಿದಿಲ್ಲ..! ಮೂರು ತಲೆಮಾರುಗಳಿಂದ ಭರವಸೆಗಳನ್ನೇ ನಂಬಿಕೊAಡು ಕತ್ತಲಲ್ಲಿ ಜೀವನ ಸಾಗಿಸುತ್ತಿರುವ ಈ ಕಾಲೋನಿ ನಿವಾಸಿಗಳ ಬಾಳಿಗೆ ಆಡಳಿತ, ಸರಕಾರ ಬೆಳಕಾಗಬೇಕಿದೆ..! ಕೆ.ಕೆ. ನಾಗರಾಜಶೆಟ್ಟಿ