ಬೆಂಗಳೂರು, ಫೆ ೧೭: ಮಾನವ - ಹುಲಿ ಸಂಘರ್ಷ ತಾರಕಕ್ಕೇರಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ನವೆಂಬರ್ ೭ ರಂದು ಜನಪ್ರಿಯ ರಾಷ್ಟಿçÃಯ ಉದ್ಯಾನವನಗಳಾಗಿರುವ ಬಂಡೀಪುರ ಮತ್ತು ನಾಗರಹೊಳೆ ಯಲ್ಲಿ ಪ್ರವಾಸಿಗರ ಸಫಾರಿಗೆ ನಿಷೇಧ ಹೇರಿದೆ. ಸಫಾರಿ ಬಂದ್ ಮಾಡಿರುವುದರಿಂದ ಅದನ್ನೇ ನಂಬಿಕೊAಡು ಜೀವನ ಸಾಗಿಸುತ್ತಿದ್ದ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸಫಾರಿಗೆ (Sಚಿಜಿಚಿಡಿi) ತಾತ್ಕಾಲಿಕ ನಿಷೇಧ ಹೇರಿರುವ ಸರ್ಕಾರದ ಕ್ರಮ ಇದೀಗ ಚರ್ಚೆಗೆ ಕಾರಣವಾಗಿದೆ
ದೊಡ್ಡ ಬೆಕ್ಕು ಜಾತಿಯ ಪ್ರಾಣಿಗಳ ಧಾಳಿಯಿಂದ ಮೈಸೂರು ಜಿಲ್ಲೆಯಲ್ಲಿಯೇ ಅಕ್ಟೋಬರ್ - ನವೆಂಬರ್‌ನಲ್ಲಿ ನಾಲ್ವರು ಗ್ರಾಮಸ್ಥರು ಪ್ರಾಣ ಕಳೆದುಕೊಂಡಿದ್ದರು ಅಲ್ಲದೆ ಇತರ ಮೂವರು ಗಾಯಗೊಂಡಿದ್ದರು. ಗ್ರಾಮಸ್ಥರ ಆಕ್ರೋಶ ಹಾಗೂ ಒತ್ತಡದಿಂದ ಸರ್ಕಾರ ಸಫಾರಿಗೆ ನಿಷೇಧ ಹೇರಿತು. ನಂತರ ಅರಣ್ಯ ಇಲಾಖೆ ಮನುಷ್ಯರ ಮೇಲೆ ಧಾಳಿ ಮಾಡುತ್ತಿದ್ದ ಹುಲಿ ಮತ್ತು ಚಿರತೆಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಮೊದಲಿಗೆ ಸರ್ಕಾರದ ಹಿರಿಯ ಅರಣ್ಯಾಧಿಕಾರಿಗಳು ಈ ನಿಷೇಧವನ್ನು ತತ್ಕಾಲಿಕ ಎಂದು ಹೇಳಿದ್ದರು. ಡಿಸೆಂಬರ್‌ನಿAದ ಹಂತ ಹಂತವಾಗಿ ಸಫಾರಿ ಆರಂಭಿಸಲಾಗುವುದೆAದು ಹೇಳಲಾಗಿತ್ತು. ಆದರೆ ಫೆಬ್ರವರಿ ಮುಗಿಯುತ್ತಾ ಬಂದರೂ ಸಫಾರಿ ಆರಂಭಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಈ ನಡುವೆ ಮೇಲಿನ ಎರಡು ಅಭಯಾರಣ್ಯಗಳ ಪಕ್ಕದಲ್ಲಿರುವ ತಮಿಳುನಾಡಿನ ಮುದುಮಲೈ ಮತ್ತು ಕೇರಳದ ವೈನಾಡ್ ಅರಣ್ಯ ಗಳ ಸಫಾರಿಗೆ ಬೇಡಿಕೆ ಹೆಚ್ಚಾಗಿರುವುದು ತಿಳಿದು ಬಂದಿದೆ. ಸಫಾರಿ ಹಾಗೂ ವನ್ಯ ಜೀವಿ ಪ್ರಿಯರು ಅಲ್ಲಿನ ಹೊಟೇಲ್, ರೆಸಾರ್ಟ್ಗಳಲ್ಲಿ ತಂಗಿ ಸಫಾರಿಯನ್ನು ಆನಂದಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ. ಕರ್ನಾಟಕ ಇಕೋ-ಟೂರಿಸಂ ರಿಸಾರ್ಟ್ಸ್ ಅಸೋಸಿಯೇಷನ್ ಏಚಿಡಿಟಿಚಿಣಚಿಞಚಿ ಇಛಿo-ಖಿouಡಿism ಖesoಡಿಣs ಂssoಛಿiಚಿಣioಟಿ (ಏಇಖಿಖಂ) ಸದಸ್ಯರ ಪ್ರಕಾರ, ರಾಜ್ಯದಲ್ಲಿ ಸಫಾರಿ ಸ್ಥಗಿತದಿಂದ ಪಕ್ಕದ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಲಾಭವಾಗುತ್ತಿದೆ.
ಬಂಡೀಪುರ-ನಾಗರಹೊಳೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೩೫ ರಿಸಾರ್ಟ್ಗಳು ಏಇಖಿಖಂಗೆ ನೋಂದಾಯಿತವಾಗಿದ್ದು, ದಿನಕ್ಕೆ ಸರಾಸರಿ ೩ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಸಂಘದ ಪದಾಧಿಕಾರಿ ಥಾಮಸ್ ಇಮ್ಮಾನುಯೇಲ್ ರಾಮಾಪುರಂ ತಿಳಿಸಿದ್ದಾರೆ. ಈ ವರ್ಷ ಅನೇಕ ರಿಸಾರ್ಟ್ಗಳಲ್ಲಿ ಶೇ. ೫೦ ರಿಂದ ೮೦ ರವರೆಗೆ ವಾಸ್ತವ್ಯ ಪ್ರಮಾಣ ಕುಸಿದಿದೆ ಎನ್ನಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯ ಸಮೀಪದಲ್ಲಿ ಸುಮಾರು ೮,೦೦೦ ಜನರು ಪರಿಸರ ಪ್ರವಾಸೋದ್ಯಮದ ಮೇಲೆಯೇ ಅವಲಂಬಿತರಾಗಿದ್ದು, ಸಫಾರಿ ನಿಷೇಧವಾಗಿರುವುದು ಇವರ ಜೀವನ ನಿರ್ವಹಣೆಗೆ ಮರ್ಮಾಘಾತ ಆದಂತಾಗಿದೆ.ಬAಡೀಪುರ ಮತ್ತು ನಾಗರಹೊಳೆಗಳಲ್ಲಿ ಸಫಾರಿಗಳ ಪುನರಾರಂಭಕ್ಕೆ ಒತ್ತಾಯಿಸಿ ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಷನ್ (ಏಇಖಿಖಂ) ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರವಾಸೋದ್ಯಮ ಹಾಗೂ ರಾಜ್ಯ ಅರಣ್ಯ ಸಚಿವರಿಗೆ ಪತ್ರ ಬರೆದಿತ್ತು. ಡಿಸೆಂಬರ್‌ನಿAದ ಫೆಬ್ರವರಿವರೆಗೆ ಇರುವ ಪ್ರವಾಸೋದ್ಯಮದ ಗರಿಷ್ಠ ಕಾಲಾವಧಿಯಲ್ಲಿ ಈ ಕ್ಷೇತ್ರವು ಕೋವಿಡ್-೧೯ ಸಂದರ್ಭ ಉಂಟಾಗಿದ್ದ ಸ್ಥಿತಿಯನ್ನೇ ಅನುಭವಿಸುತ್ತಿದೆ. ಪ್ರಸ್ತುತವಾಗಿ ಸಫಾರಿ ಸ್ಥಗಿತಕ್ಕೆ ನೀಡಲಾಗುತ್ತಿರುವ ಕಾರಣಗಳು ವೈಜ್ಞಾನಿಕ ಅಥವಾ ಪ್ರಾಯೋಗಿಕವಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಸಫಾರಿ ಸ್ಥಗಿತವಾಗಿರುವುದರಿಂದ ಉಂಟಾಗುತ್ತಿರುವ ಆರ್ಥಿಕ ಹಾನಿ ಮತ್ತು ಉದ್ಯೋಗ ಸಮಸ್ಯೆಗಳನ್ನು ಮನಗಂಡ ಸರ್ಕಾರ ಅಗತ್ಯವಿರುವ ಹೆಚ್ಚುವರಿ ಸುರಕ್ಷತಾ ಕ್ರಮಗಳೊಂದಿಗೆ ಸಫಾರಿಯನ್ನ ಮತ್ತೆ ಆರಂಭಿಸಬೇಕೆAದು ಆಗ್ರಹಿಸಲಾಗಿತ್ತು. ಇನ್ನೊಂದು ಮೂರು ತಿಂಗಳು ಅಂದರೆ ಮೇ ತಿಂಗಳು ಕಳೆದರೆ ಮಳೆಗಾಲದಲ್ಲಿ ಸಫಾರಿ ಚಟುವಟಿಕೆ ಸಂಪೂರ್ಣ ಕುಸಿಯುತ್ತದೆ.
ಆದರೆ ರಾಜ್ಯ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯದ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಶ್ವಜಿತ್ ಮಿಶ್ರಾ ಅವರು ರಾಜ್ಯದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಸಫಾರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಈ ಕುರಿತು ಅರಣ್ಯ ಸಚಿವರು ಸೂಚನೆ ನೀಡಿದರೆ ಹಿರಿಯ ಅರಣ್ಯಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
- ಕೋವರ್‌ಕೊಲ್ಲಿ ಇಂದ್ರೇಶ್