ಮಡಿಕೇರಿ, ಫೆ. ೧೭: ಹಿಂದಿನ ಬಿಜೆಪಿ ಸರಕಾರ ಜಾರಿ ಮಾಡಿದ ಪೌತಿ ಖಾತೆ ಆಂದೋಲನ ಇದೀಗ ಸ್ಥಗಿತಗೊಂಡಿದ್ದು, ಅದನ್ನು ಪುನರಾರಂಭಗೊಳಿಸುವAತೆ ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿತು. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭ ವಿಶೇಷವಾಗಿ ಕೊಡಗಿನ ಜನತೆಯ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಅದರಂತೆ ರೈತಾಪಿ ವರ್ಗದವರ ಸಮಸೆ ಗಳನ್ನು ಪರಿಹರಿಸಿ ಪೌತಿ/ವಾರಸ ಸ್ವರೂಪದ ಮ್ಯೂಟೇಶನ್ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಲಾಗಿತ್ತು. ಆಂದೋಲನದ ಮೂಲಕ ಕೊಡಗಿನ ರೈತರು ಪ್ರಯೋಜನ ಪಡೆದುಕೊಂಡು ದಾಖಲೆ ಪಡೆದುಕೊಂಡಿದ್ದರು. ಆದರೆ, ಇದೀಗ ಈ ಆಂದೋಲನವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಶೂನ್ಯ ಬಡ್ಡಿ ದರದಲ್ಲಿ ರೈತರು ಸಾಲ ಪಡೆಯಲು, ಸರಕಾರದ ಯೋಜನೆ ಪಡೆದುಕೊಳ್ಳಲು ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ತಕ್ಷಣ ಆಂದೋಲನವನ್ನು ಪುನರ್ ಆರಂಭಗೊಳಿಸಬೇಕೆAದು ಪ್ರಮುಖರು ಒತ್ತಾಯಿಸಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರ ಓಬಿಸಿ ಮೋರ್ಚಾ ಅಧ್ಯಕ್ಷ ಗಜೇಂದ್ರ, ಸಚಿನ್ ಮತ್ತಿತರರು ಹಾಜರಿದ್ದರು