ಮಡಿಕೇರಿ, ಫೆ. ೧೬: ಸನಾತನ ಹಿಂದೂ ಧರ್ಮವು ಜಾತಿ ಮತ್ತು ವರ್ಗವನ್ನು ಮೀರಿ ಸರ್ವ ಸಮಾನತೆಯ ತತ್ವವನ್ನು ಪ್ರತಿಪಾದಿಸುವ ಧರ್ಮವಾಗಿದೆ ಎಂದು ಮಡಿಕೇರಿಯಲ್ಲಿ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಶ್ಲೇಷಿಸಿದರು. ಮಡಿಕೇರಿಯ ಉಕ್ಕುಡದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಾನುವಾರ ನಡೆದ ಮಹಾಶಿವರಾತ್ರಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಇದೇ ವಿಷಯವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದಲ್ಲಿಯೂ ಬರೆದಿದ್ದಾರೆ. ಹಿಂದೂ ಧರ್ಮವು “ಎಲ್ಲ ವ್ಯಕ್ತಿಗಳನ್ನು ಸಹೋದರ ಮನೋಭಾವದಿಂದ ನೋಡಿಕೊಳ್ಳಿ” ಎಂದು ಬೋಧಿಸುತ್ತದೆ. ಸನಾತನ ಹಿಂದೂ ಧರ್ಮವು ಕಳೆೆದ ೫ ಸಾವಿರ ವರ್ಷಗಳಿಗಿಂತಲೂ ಪುರಾತನವಾದುದು. ಶಿವನ ಪ್ರಭಾವ ಇದಕ್ಕಿಂತಲೂ ಪುರಾತನವಾದುದು. ಮೂಲ ತತ್ವದ ಅಡಿಯಲ್ಲಿಯೇ ಎಲ್ಲರೂ ಇರಬೇಕಾಗುತ್ತದೆ. ಆದರೆ, ಮೂಲ ತಿರುಳಾದ ಸರ್ವ ಸಮಾನತೆ ಹೋಗಿ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ವರ್ಗೀಕರಣವಾಗುತ್ತಿರುವುದು ದುರ್ದೈವಕರ ಎಂದು ವಿಷಾದಿಸಿದ ಅವರು ನಾವೆಲ್ಲ ಒಂದು ಎನ್ನುವ ಮನೋಭಾವದಿಂದ ಸಾಗಬೇಕು ಎಂದು ಕರೆಯಿತ್ತರು. ನಾನು ಶಿವನÀ ಆರಾಧಕನಾಗಿದ್ದೇನೆ. ನನ್ನ ಕುಟುಂಬದ ದೇವರು ಶಿವ, ಅವನು ಶಿವಗಂಗೆಯಲ್ಲಿ ಗಂಗಾಧರೇಶ್ವರನಾಗಿ ಅಸ್ತಿತ್ವದಲ್ಲಿದ್ದಾನೆÉ ಮತ್ತು ಪೌರಾಣಿಕ ಕಾಲದಿಂದಲೂ ಆ ಶಿವಲಿಂಗದ ಮೇಲೆ ತುಪ್ಪವನ್ನು ಇಡುವಾಗ ಅದು ೫ ನಿಮಿಷದಲ್ಲಿ ಬೆಣ್ಣೆಯಾಗಿ ಬದಲಾಗುತ್ತದೆ. ಈಗಲೂ ಆ ಶಕ್ತಿ ಮುಂದುವರಿಯುತ್ತಿರುವುದು ವಿಶೇಷವಾಗಿದೆ ಎಂದು ವಿಶ್ಲೇಷಿಸಿದರು. ಪಾರ್ವತಿ- ಪರಮೇಶ್ವರರ ವಿವಾಹ ದಿನವೂ ಕೂಡ ಶಿವರಾತ್ರಿಯ ದಿನ ಎನ್ನುತ್ತಾರೆ. ಅಮೃತ ಮಥನ ಕಾಲದಲ್ಲಿ ಹಾಲಾಹಲ ವಿಷವನ್ನು ಸೇವಿಸಿ ಜಗತ್ತನ್ನು ಶಿವನು ರಕ್ಷಿಸಿದ ದಿ£ ಇದಾಗಿದೆ ಎಂದೂ ಹೇಳುತ್ತ್ತಾರೆ. ಶಿವ ಒಲಿದರೆ ಭಯವಿರುವುದಿಲ್ಲ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳ ಪಾತ್ರ ಮಹತ್ತರವಾದುದು. ಬ್ರಹ್ಮ ಸೃಷ್ಟಿಕರ್ತ, ವಿಷ್ಣು ಸ್ಥಿತಿಕಾರಕ ಹಾಗೂ ಶಿವನು ಕೆಟ್ಟದ್ದನ್ನು ಮಾಡುವವರನ್ನು ಶಿಕ್ಷಿಸುತ್ತಾನೆ. ನಮ್ಮ ನಡೆ ನುಡಿಗಳನ್ನು ಅವನು ವೀಕ್ಷಿಸುತ್ತಿರುತ್ತಾನೆ. ಶಿವನು ಸಾಮಾನ್ಯವಾಗಿ ಭಕ್ತರನ್ನು ರಕ್ಷಿಸುತ್ತಾನೆ ಮತ್ತು ದುಷ್ಟಶಕ್ತಿಗಳನ್ನು ನಾಶಮಾಡುತ್ತಾನೆ ಎಂದು ಅವರು ಅಭಿಪ್ರಾಯಪಟ್ಟರು. ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಮಂತರ್Àಗೌಡ ಹಾಗೂ “ಶಕ್ತಿ” ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿದರು.
ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ನಗರಸಭಾ ಅಧ್ಯಕ್ಷೆ ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯರುಗಳಾದ ಎಸ್.ಸಿ. ಸತೀಶ್, ಅನಿತಾ ಪೂವಯ್ಯ, ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಮಂಜು, ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.