ಮಡಿಕೇರಿ, ಫೆ. ೧೬; ಪರಶಿವನ ಆರಾಧನೆಯ ದಿನವಾದ ಮಹಾಶಿವರಾತ್ರಿಯನ್ನು ವಿಶೇಷ ಪೂಜೆ, ಭಜನೆ, ಜಾಗರಣೆಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶಿವನ ದೇವಾಲಯ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಅರ್ಚನೆಗಳು ನೆರವೇರಿದವು. ದೇವಾಲಯಗಳು ಮಾತ್ರವಲ್ಲದೆ ಕೆಲವೆಡೆ ಸಂಘ ಸಂಸ್ಥೆಗಳು ಕೂಡ ಶಿವರಾತ್ರಿ ಅಂಗವಾಗಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.
ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ, ಹೊರವಲಯದಲ್ಲಿರುವ ಶ್ರೀ ರಾಜ ರಾಜೇಶ್ವರಿ ದೇವಾಲಯ, ವೀರಭದ್ರ ಮುನೇಶ್ವರ ದೇವಾಲಯ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ, ಮಾಲಂಬಿ ಮಳೆ ಮಲ್ಲೇಶ್ವರ, ಇರ್ಪು ಶ್ರೀ ರಾಮೇಶ್ವರ ದೇವಾಲಯ, ಇಗ್ಗುತ್ತಪ್ಪ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ಓಂಕಾರೇಶ್ವರ ದೇವಾಲಯ
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಮಹಾಪೂಜೆ, ನಿತ್ಯ ಸೇವೆಗಳು, ಸಾಮೂಹಿಕ ರುದ್ರ ಹೋಮ ಸಂಕಲ್ಪ, ಏಕಾದಶ ರುದ್ರಾಭಿಷೇಕ, ಸಾಮೂಹಿಕ ರುದ್ರ ಹೋಮ, ಸಾಮೂಹಿಕ ರುದ್ರಹೋಮ ಪೂರ್ಣಾಹುತಿ, ಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆಯೊಂದಿಗೆ ರಾತ್ರಿ ಮಹಾಪೂಜೆ ನೆರವೇರಿತು. ಮಹಾಶಿವರಾತ್ರಿ ಹಬ್ಬದ ಜಾಗರಣೆ ಪ್ರಯುಕ್ತ ೧೬ ರ ಬೆಳಗ್ಗಿನ ಜಾವ ೪.೩೦ ಗಂಟೆವರೆಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ರುದ್ರ ಹೋಮ ಮತ್ತು ಏಕಾದಶ ಸಾಮೂಹಿಕ ರುದ್ರಾಭಿಷೇಕ ಸೇವೆಯು ನೆರವೇರಿತು. ರಾತ್ರಿ ಮಹಾಪೂಜೆ ಬಳಿಕ ಮಡಿಕೇರಿಯ ವೈಭವ ತಂಡದಿAದ ರುದ್ರಪಠನ ಕಾರ್ಯಕ್ರಮ ನಡೆಯಿತು.
ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟ
ಮುಳ್ಳೂರು: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸಮಿಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ೧೯೯೯ರಿಂದ ಬೆಟ್ಟದ ತುದಿಯಲ್ಲಿ ನಿರ್ಮಿಸಿರುವ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿಕೊಂಡು ಬರುತ್ತಿದ್ದು, ನಿನ್ನೆ ಮುಂಜಾನೆಯಿAದ ಸಂಜೆವರೆಗೂ ಸ್ಥಳೀಯ ಭಕ್ತಾದಿಗಳು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಿಂದ ಆಗಮಿಸುತ್ತಿದ್ದ ಸಾವಿರಾರು ಭಕ್ತರು ಬೆಟ್ಟ ಹತ್ತುತ್ತಿದ್ದರು. ಹಾಸನ ಜಿಲ್ಲೆಯಿಂದ ಬರುತ್ತಿದ್ದ ಭಕ್ತರು ಶನಿವಾರಸಂತೆ-ಬೀಟಿಕಟ್ಟೆ ಮಾರ್ಗವಾಗಿ, ಮೈಸೂರು-ಕುಶಾಲನಗರ ಕಡೆಯಿಂದ ಆಗಮಿಸುತ್ತಿದ್ದ ಭಕ್ತರು ಬಾಣವಾರ-ಶನಿವಾರಸಂತೆ ಮಾರ್ಗವಾಗಿ ಮಾಲಂಬಿ ಗ್ರಾಮದ ಮೂಲಕ ಬೆಟ್ಟ ಹತ್ತುತ್ತಿದ್ದರು. ತುಮಕೂರಿನ ಸುಕ್ಷೇತ್ರ ದೇವರಹೊಸಹಳ್ಳಿ ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಅಭಿಲಾಷ್ ಶಾಸ್ತಿç ಅವರ ನೇತೃತ್ವದಲ್ಲಿ ಶ್ರೀ ಸ್ವಾಮಿಗೆ ಪುಷ್ಪಾಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಮಹಾ ಮಂಗಳಾರತಿ ಸಲ್ಲಿಸಿದ ನಂತರ ಅರ್ಚಕರು ಭಕ್ತಾದಿಗಳಿಗೆ ಶ್ರೀ ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಬೆಟ್ಟದ ತದಿಯಲ್ಲಿ ಭಕ್ತಾದಿಗಳು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಸಾವಿರಾರು ಭಕ್ತರು ಬೆಟ್ಟವನ್ನೇರಿ ಮಳೆ ಮಲ್ಲೇಶ್ವರ ಸ್ವಾಮಿಯ ದರ್ಶನ ಪಡೆದರು. ಯುವಕರು, ಯುವತಿಯರು, ವಯಸ್ಕರು, ಕಿರಿಯರು, ಮಕ್ಕಳು ಉತ್ಸಾಹದಿಂದ ಬೆಟ್ಟವನ್ನೇರಿ ಸಂಭ್ರಮಪಟ್ಟರು. ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಟ್ಟದ ಕೆಳ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಪುಟ್ಟ ಜಾತ್ರೆ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಮಹೋತ್ಸವದಲ್ಲಿ ಸುಮಾರು ೭ ರಿಂದ ೮ ಸಾವಿರ ಭಕ್ತಾದಿಗಳು ಶ್ರೀ ಸ್ವಾಮಿಯ ದರ್ಶನ ಪಡೆದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಹೇಳಿದರು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ದಾನಿಗಳು, ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು. ಯುವಕರ ತಂಡ ದಾರಿಯುದ್ದಕ್ಕೂ ಭಕ್ತಾದಿಗಳಿಗೆ ಮಜ್ಜಿಗೆ ಮತ್ತು ಕುಡಿಯುವ ನೀರು ವಿತರಣೆ ಮಾಡಿದರು. ೪ಐದನೇ ಪುಟಕ್ಕೆ
ಪೊನ್ನಂಪೇಟೆ: ದಕ್ಷಿಣ ಕೊಡಗಿನ ಪ್ರಸಿದ್ಧ ಇರ್ಪು ಶ್ರೀ ರಾಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನ ಏರ್ಪಡಿಸಲಾಗಿತ್ತು. ಸಂಜೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಾ. ೧೬ ರಂದು ಬೆಳಿಗ್ಗೆ ಶಿವರಾತ್ರಿ ಪ್ರಯುಕ್ತ ಜಾತ್ರಾ ಮಹೋತ್ಸವ, ದೇವರ ಅವಭೃತ ಸ್ನಾನ ಮತ್ತು ಇನ್ನಿತರ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಇರ್ಪು ಲಕ್ಷ್ಮಣತೀರ್ಥ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ದೇವರ ದರ್ಶನ ಪಡೆದರು. ಭಕ್ತಾದಿಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಕಂದಾಯ ಅಧಿಕಾರಿ ಪೂಣಚ್ಚ ಮತ್ತು ಸಿಬ್ಬಂದಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ಮದ್ರಿರ ವಿಷ್ಣು ಮತ್ತು ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಮಡಿಕೇರಿಯ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕೈಂಕರ್ಯಗಳು ಮತ್ತು ಮೆರವಣಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ಕ್ಷೇತ್ರದಲ್ಲಿರುವ ಕಾಶಿಲಿಂಗಕ್ಕೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ನಡೆಯಿತು. ಇದೇ ಸಂದರ್ಭ ೫೨ ಅಡಿ ಎತ್ತರದ ಶಿವನ ಮೂರ್ತಿ ಹಾಗೂ ಸುತ್ತವಿರುವ ಪಂಚಲಿAಗಗಳು, ೧೦೯ ಲಿಂಗಗಳಿಗೆೆ ವಿಶೇಷ ಅಭಿಷೇಕ, ಅಲಂಕಾರ ಮತ್ತು ಪೂಜೆ ನೆರವೇರಿತು. ದೇವಾಲಯದ ಮುಖ್ಯದ್ವಾರದಿಂದ ದೇವಾಲಯದವರೆಗೆ ಸ್ತಬ್ಧಚಿತ್ರ, ಪೂರ್ಣ ಕುಂಭ ಕಳಸ, ಚಂಡೆವಾದ್ಯ, ವೀರಗಾಸೆ, ಡೊಳ್ಳು ಕುಣಿತದೊಂದಿಗೆ ಭಕ್ತಾದಿಗಳ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.
ಪಂಚಲಿAಗಕ್ಕೆ ಪವಿತ್ರ ಗಂಗಾಜಲ ಅಭಿಷೇಕ ಮತ್ತು ಶಿವನ ಮೂರ್ತಿಗೆ ಭಕ್ತರು ಪುಷ್ಪಾರ್ಚನೆ ಮಾಡಿ ಪುನೀತರಾದರು. ಇದೇ ಸಂದರ್ಭ ಅನ್ನಸಂತರ್ಪಣೆ ನೆರವೇರಿತು. ನಗರದ ದಶಮಂಟಪಗಳ ದೇವಾಲಯಗಳಿಂದ ಕಳಸ ತೀರ್ಥ ತಂದು ಶಿವಲಿಂಗಕ್ಕೆ ಅಭಿಷೇಕವೂ ನಡೆಯಿತು. ಸಂಜೆ ದೀಪೋತ್ಸವ ನಡೆದು ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಭಕ್ತಿ ಪ್ರಧಾನ ಮನೋರಂಜನಾ ಕಾರ್ಯಕ್ರಮಗಳು ಮೂಡಿಬಂದವು.ಮಡಿಕೇರಿಯ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕೈಂಕರ್ಯಗಳು ಮತ್ತು ಮೆರವಣಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ಕ್ಷೇತ್ರದಲ್ಲಿರುವ ಕಾಶಿಲಿಂಗಕ್ಕೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ನಡೆಯಿತು. ಇದೇ ಸಂದರ್ಭ ೫೨ ಅಡಿ ಎತ್ತರದ ಶಿವನ ಮೂರ್ತಿ ಹಾಗೂ ಸುತ್ತವಿರುವ ಪಂಚಲಿAಗಗಳು, ೧೦೯ ಲಿಂಗಗಳಿಗೆÉ ವಿಶೇಷ ಅಭಿಷೇಕ, ಅಲಂಕಾರ ಮತ್ತು ಪೂಜೆ ನೆರವೇರಿತು. ದೇವಾಲಯದ ಮುಖ್ಯದ್ವಾರದಿಂದ ದೇವಾಲಯದವರೆಗೆ ಸ್ತಬ್ಧಚಿತ್ರ, ಪೂರ್ಣ ಕುಂಭ ಕಳಸ, ಚಂಡೆವಾದ್ಯ, ವೀರಗಾಸೆ, ಡೊಳ್ಳು ಕುಣಿತದೊಂದಿಗೆ ಭಕ್ತಾದಿಗಳ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.
ಪಂಚಲಿAಗಕ್ಕೆ ಪವಿತ್ರ ಗಂಗಾಜಲ ಅಭಿಷೇಕ ಮತ್ತು ಶಿವನ ಮೂರ್ತಿಗೆ ಭಕ್ತರು ಪುಷ್ಪಾರ್ಚನೆ ಮಾಡಿ ಪುನೀತರಾದರು. ಇದೇ ಸಂದರ್ಭ ಅನ್ನಸಂತರ್ಪಣೆ ನೆರವೇರಿತು. ನಗರದ ದಶಮಂಟಪಗಳ ದೇವಾಲಯಗಳಿಂದ ಕಳಸ ತೀರ್ಥ ತಂದು ಶಿವಲಿಂಗಕ್ಕೆ ಅಭಿಷೇಕವೂ ನಡೆಯಿತು. ಸಂಜೆ ದೀಪೋತ್ಸವ ನಡೆದು ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಭಕ್ತಿ ಪ್ರಧಾನ ಮನೋರಂಜನಾ ಕಾರ್ಯಕ್ರಮಗಳು ಮೂಡಿಬಂದವು.ಮಡಿಕೇರಿಯ ರಾಮಾಂಜನೇಯ ಭಜನಾ ಮಂಡಳಿಯ ನೇತೃತ್ವದಲ್ಲಿ ೨೫ ಭಜನಾ ತಂಡಗಳಿAದ ನಡೆದ ನಗರ ಸಂಕೀರ್ತನೆ ಶಿವರಾತ್ರಿ ಹಬ್ಬಕ್ಕೆ ಮೆರುಗು ನೀಡಿತು. ೨ನೇ ವರ್ಷದ ಸಂಕೀರ್ತನೆಯಲ್ಲಿ ಮಡಿಕೇರಿ ನಗರ ಸೇರಿದಂತೆ ಗ್ರಾಮಾಂತರ ಭಾಗದ ೨೫ ವಿವಿಧ ಭಜನಾ ತಂಡಗಳು ಭಾಗವಹಿಸಿ ಶಿವಜಪ ಮಾಡಿದವು. ಮಲ್ಲಿಕಾರ್ಜುನ ನಗರದಲ್ಲಿರುವ ಕೋದಂಡರಾಮ ದೇವಾಲಯದಿಂದ ಆರಂಭಗೊAಡ ನಗರ ಸಂಕೀರ್ತನೆಗೆ ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ಹಾಗೂ ನಗರಸಭಾ ಅಧ್ಯಕ್ಷೆ ಕಲಾವತಿ ಚಾಲನೆ ನೀಡಿದರು. ೨೫ ತಂಡಗಳು ಭಜನೆಯನ್ನು ಮಾಡುತ್ತ ಕೋದಂಡರಾಮ ದೇವಾಲಯದಿಂದ, ಮುತ್ತಪ್ಪ ದೇವಾಲಯ, ಬನ್ನಿ ಮಂಟಪ, ಮಹದೇವಪೇಟೆ, ಚೌಕಿ, ಹಳೆ ಖಾಸಗಿ ಬಸ್ ನಿಲ್ದಾಣ, ಪೊಲೀಸ್ ಠಾಣೆ, ಜನರಲ್ ತಿಮ್ಮಯ್ಯ ವೃತ್ತ ಬಳಿಕ ಅಲ್ಲಿಂದ ಆಂಜನೇಯ ದೇವಸ್ಥಾನದವರೆಗೆ ಸಾಗಿ ಅಲ್ಲಿಂದ ಓಂಕಾರೇಶ್ವರ ದೇವಾಲಯದಲ್ಲಿ ಭಜನಾ ಮೆರವಣಿಗೆ ಮುಕ್ತಾಯ ಕಂಡಿತು. ಅಲ್ಲಿ ಭಕ್ತಿಗೀತೆ ಗಾಯನ, ಭಕ್ತಿನೃತ್ಯ ಸಹಿತ ನೆರವೇರಿತು. ಓಂಕಾರೇಶ್ವರ ದೇವಾಲಯದಲ್ಲಿ ಕೊನೆಯ ಭಜನೆಯೊಂದಿಗೆ ಮಂಗಳ ಕಾರ್ಯಕ್ರಮ ನೆರವೇರಿತು. ಸಿದ್ದಾಪುರ: ಬಾಡಗ -ಬಾಣಂಗಾಲ ಗ್ರಾಮದ ಮೈಲಾಪುರದ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವವನ್ನು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಸಂಭ್ರಮದಿAದ ಆಚರಿಸಲಾಯಿತು. ಗಣಪತಿ ಹೋಮ, ಗಂಗಾ ಪೂಜೆ, ಹಾಗೂ ಮುತ್ತೂರಿನ ವೆಂಕಟಯ್ಯ ಚೆಲುವಯ್ಯ ಅವರಿಂದ ಕೊಂಬು ನಗರಿ ತಮಟೆ ಹಾಗೂ ನಾಗ ಸ್ವರ ನಡೆಯಿತು. ಹುಣಸೂರಿನ ಆರ್ .ಎಕ್ಸ್ ಬಾಷ್ ತಂಡದಿAದ ಡೊಳ್ಳು ನಗರಿ ಕುಣಿತ ಹಾಗೂ ಚೆನ್ನಯ್ಯನಕೋಟೆ ತಂಡದಿAದ ಕೊಡಗಿನ ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು. ಶ್ರೀ ಸಿದ್ದಪ್ಪಾಜಿ ದೇವರ ಕಂಡಾಯ ಮೆರವಣಿಗೆ ನಡೆಯಿತು. ಇದರೊಂದಿಗೆ ಶ್ರೀ ದೊಡ್ಡಮ್ಮ ತಾಯಿಯ ಮೆರವಣಿಗೆ ಮತ್ತು ಪೂಜಾ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ಸಭಾ ಕಾರ್ಯಕ್ರಮದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಭಾಗವಹಿಸಿ ಶಿವರಾತ್ರಿಯ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹಿಂದೆ ತಾನು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದು, ಅದೇ ರೀತಿ ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಬಾಡಗ ಬಾಣಂಗಾಲ ಸುತ್ತಮುತ್ತಲಿನಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಸದಸ್ಯರುಗಳಾದ ಹನೀಫ್, ಇಸ್ಮಾಯಿಲ್, ಮೊಹಮ್ಮದ್ ಅಲಿ,ಪುಷ್ಪಾ ಮಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಚಿನ್ನಮ್ಮ, ಅತಿಥಿಗಳಾದ ಡಾ. ಸೆಲ್ವ ಕುಮಾರ್, ಪೂವಣ್ಣ, ಶ್ರೀ ಸಿದ್ದಪ್ಪಾಜಿ ದೇವಾಲಯದ ಪ್ರಮುಖರಾದ ಬಾಲು ಸ್ವಾಮಿ, ಗಣೇಶ ಇನ್ನಿತರರು ಹಾಜರಿದ್ದರು. ರಾತ್ರಿ ಕುಶಾಲನಗರದ ಝೇಂಕಾರ್ ಮೆಲೋಡಿಸ್ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಲಾವಿದ ಬಾವ ಮಾಲ್ದಾರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪೊನ್ನಂಪೇಟೆ: ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನ ಮುಂಭಾಗ ಬಸ್ ನಿಲ್ದಾಣದಲ್ಲಿ ಕಾಟ್ರಕೊಲ್ಲಿ ಮಾತಾಯಿ ಪುರುಷ ಸ್ವ ಸಹಾಯ ಸಂಘದ ವತಿಯಿಂದ ೨೦ ನೇ ವರ್ಷದ ಮಹಾಶಿವರಾತ್ರಿ ಕಾರ್ಯಕ್ರಮವನ್ನು ವಿಜೃಂಭಣೆಯಿAದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾನಂದ ಮಹಾರಾಜ್ ಅವರು ದೀಪಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನ್ಮ ಜನ್ಮಾಂತರದ ಪಾಪ ಕಳೆಯಲು ಶಿವರಾತ್ರಿ ದಿನದಂದು ಜಾಗರಣೆ ಮಾಡಲಾಗುತ್ತದೆ. ಅಪರೂಪವಾಗಿ ಸಿಕ್ಕಿರುವ ಮಾನವ ಜನ್ಮ ದೊಡ್ಡದು. ಈ ಜನ್ಮದಲ್ಲಿ ಸಕಲ ಜೀವಿಗಳಿಗೂ ಮನುಷ್ಯತ್ವದಿಂದ ಒಳ್ಳೆಯದನ್ನೇ ಬಯಸುತ್ತಾ ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ. ಸರ್ವ ವ್ಯಾಪಿಯಾದ ಶಿವನು ಸರ್ವರಿಗೂ ಒಳಿತು ಮಾಡಲಿ ಎಂದು ಹಾರೈಸಿದರು.
ಮತ್ತೊಬ್ಬಅತಿಥಿ ಪೊನ್ನಂಪೇಟೆ ಸಂತ ಅಂಥೋಣಿ ಶಾಲೆಯ ಫಾದರ್ ಮನೋಜ್ ಇಮಾನ್ಯುವೆಲ್ ಮಾತನಾಡಿ ಕಳೆದ ೨೦ ವರ್ಷಗಳಿಂದ ಶಿವರಾತ್ರಿ ಉತ್ಸವವನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವಂತಹ ಮಹಾತಾಯಿ ಪುರುಷ ಸ್ವಸಹಾಯ ಸಂಘ ಬಹಳ ಉತ್ಸುಕತೆಯಿಂದ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ತುಂಬಾ ಸಂತೋಷಪಡುವAತ ವಿಷಯ. ಎಲ್ಲಾ ಧರ್ಮದ ಉದ್ದೇಶವೂ ಸರ್ವರಿಗೂ ಒಳಿತನ್ನು ಬಯಸುವುದೇ ಆಗಿದೆ ಎಂದರು.
ಪೆರುAಬಾಡಿಯ ಸಂಷುದ್ ಉಲಾಮ ಶಾಲೆಯ ಶಿಕ್ಷಕ ಆಲಿ ಮಾಸ್ಟರ್ ಮಾತನಾಡಿ, ಮಾತಾಯಿ ಪುರುಷರ ಸ್ವ ಸಹಾಯ ಸಂಘವು ಎಲ್ಲಾ ಧರ್ಮದವರನ್ನು ಒಳಗೊಂಡು ಸಮಾಜ ಮುಖಿ ಕೆಲಸದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.
ಪೊನ್ನAಪೇಟೆ ಪ್ಯಾಕ್ಸ್ ಅಧ್ಯಕ್ಷ ಚೀರಂಡ ಕಂದಾ ಸುಬ್ಬಯ್ಯ ಮಾತನಾಡಿ, ಕೇವಲ ೧೮ ಸದಸ್ಯರು ಇರುವ ಮಹಾತಾಯಿ ಸಂಘದಲ್ಲಿ ೨೦ ವರ್ಷಗಳಿಂದ ಸತತವಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಮಾತಾಯಿ ಸಂಘದಲ್ಲಿ ಎಲ್ಲಾ ಧರ್ಮದವರು ಅನ್ಯೋನ್ಯತೆಯಿಂದ ಇರುವುದು ಸಮಾಜಕ್ಕೆ ಉತ್ತಮ ಸಂದೇಶವಾಗಿದೆ ಎಂದರು. ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ನಿವೃತ್ತ ಸೇನಾಧಿಕಾರಿ ಐನಂಡ ಕೆ.ಮಂದಣ್ಣ, ಕೆಪಿಎಸ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ರಂಗಯ್ಯ, ಕಿರುಗೂರಿನ ಪ್ರಗತಿಪರ ಕೃಷಿಕ ರವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗಮಾಡಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪೊನ್ನಂಪೇಟೆ ಭಾಗದ ೭, ೧೦ ಮತ್ತು ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಿವರಾತ್ರಿ ಅಂಗವಾಗಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಾವೇರಿ ಕಲಾಸಿರಿ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು. ಭಕ್ತಾದಿಗಳಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು. ಮಾತಾಯಿ ಪುರುಷರ ಸ್ವ ಸಹಾಯ ಸಂಘದ ಅಧ್ಯಕ್ಷ ಕರುಣಾಕರ ಬಿ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಸಿ.ಬಿ. ವಿನೋದ್, ಕಾರ್ಯದರ್ಶಿ ಸುದರ್ಶನ್ ಪಿ.ಕೆ, ಖಜಾಂಚಿ ಹನೀಫ್ ಎ.ಎ, ಸದಸ್ಯರಾದ ರುದ್ರಪ್ಪ ವಿ.ಬಿ, ಸುರೇಶ್ ವಿ.ವಿ, ಅನೀಸ್ ಎಂ.ಬಿ, ವಿನು. ಕೆ.ಬಿ, ಮುರಳಿ ಟಿ.ವಿ, ಕುಟ್ಟಪ್ಪ ಎಂ.ಕೆ, ಸುರೇಶ್ ಹೆಚ್.ಬಿ. ಅಣ್ಣಪ್ಪ ಬಿ.ಕೆ. ಉಮ್ಮರ್ ಕೆ.ಹೆಚ್. ಸಾದಿಕ್ ಎಂ.ಎA, ಮಹಮದ್ ಪಿ.ಎಂ. ಶೇಖರ್ ವಿ.ಬಿ. ಹರೀಶ್ ಇ.ಎ. ಮಂಜು ಎನ್, ಸತೀಶ್ ಎಸ್.ಪಿ. ಇನ್ನಿತರರು ಇದ್ದರು.
ಪೊನ್ನಂಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಚಂದನ ಕಾರ್ಯಕ್ರಮ ನಿರೂಪಿಸಿದರು. ಕಣಿವೆ: ನಗರದ ಗೊಂದಿಬಸವನಹಳ್ಳಿ ರಸ್ತೆಯ ನೆಹರು ಬಡಾವಣೆಯಲ್ಲಿ ಸ್ಥಳೀಯ ಭಕ್ತಾದಿಗಳ ಪ್ರಯತ್ನದಿಂದಾಗಿ ಅರಳಿ ಮರದ ಆವರಣದಲ್ಲಿನ ಮುನೇಶ್ವರ ದೇವರಿಗೆ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾದಿಗಳು ನಡೆದವು.
ನೆಹರು ಬಡಾವಣೆಯ ವಿಶಾಲ ಆವರಣದಲ್ಲಿರುವ ಬೃಹತ್ ವೃಕ್ಷದ ಆವರಣದಲ್ಲಿ ಭಕ್ತಾದಿಗಳು ನಿರ್ಮಿಸಿರುವ ಮುನೇಶ್ವರ ಸನ್ನಿಧಿಯಲ್ಲಿ ಬಡಾವಣೆ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ನೂರಾರು ಭಕ್ತರು ಆಗಮಿಸಿ ಪೂಜಾ ಮಹೋತ್ಸವದಲ್ಲಿ ಭಾಗಿಯಾದರು. ಮಧ್ಯಾಹ್ನ ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ಹಾಗೂ ಅನ್ನಪ್ರಸಾದ ವಿನಿಯೋಗ ಮಾಡಲಾಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಸುಂದರೇಶ್, ಕಾರ್ಯದರ್ಶಿ ಹೆಚ್.ಟಿ. ಉದಯ್, ಖಜಾಂಚಿ ಧನರಾಜ್, ಗೌರವಾಧ್ಯಕ್ಷ ಜಿ.ಬಿ. ಜಗದೀಶ್, ಲಿಂಗA, ದಯಾನಂದ, ಎಂ.ಕೆ. ದಿನೇಶ್, ಎಸ್.ಜೆ. ಚಂದ್ರು ಮೊದಲಾದವರಿದ್ದರು.ಕಣಿವೆ: ನಗರದ ಗೊಂದಿಬಸವನಹಳ್ಳಿ ರಸ್ತೆಯ ನೆಹರು ಬಡಾವಣೆಯಲ್ಲಿ ಸ್ಥಳೀಯ ಭಕ್ತಾದಿಗಳ ಪ್ರಯತ್ನದಿಂದಾಗಿ ಅರಳಿ ಮರದ ಆವರಣದಲ್ಲಿನ ಮುನೇಶ್ವರ ದೇವರಿಗೆ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾದಿಗಳು ನಡೆದವು.
ನೆಹರು ಬಡಾವಣೆಯ ವಿಶಾಲ ಆವರಣದಲ್ಲಿರುವ ಬೃಹತ್ ವೃಕ್ಷದ ಆವರಣದಲ್ಲಿ ಭಕ್ತಾದಿಗಳು ನಿರ್ಮಿಸಿರುವ ಮುನೇಶ್ವರ ಸನ್ನಿಧಿಯಲ್ಲಿ ಬಡಾವಣೆ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ನೂರಾರು ಭಕ್ತರು ಆಗಮಿಸಿ ಪೂಜಾ ಮಹೋತ್ಸವದಲ್ಲಿ ಭಾಗಿಯಾದರು. ಮಧ್ಯಾಹ್ನ ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ಹಾಗೂ ಅನ್ನಪ್ರಸಾದ ವಿನಿಯೋಗ ಮಾಡಲಾಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಸುಂದರೇಶ್, ಕಾರ್ಯದರ್ಶಿ ಹೆಚ್.ಟಿ. ಉದಯ್, ಖಜಾಂಚಿ ಧನರಾಜ್, ಗೌರವಾಧ್ಯಕ್ಷ ಜಿ.ಬಿ. ಜಗದೀಶ್, ಲಿಂಗA, ದಯಾನಂದ, ಎಂ.ಕೆ. ದಿನೇಶ್, ಎಸ್.ಜೆ. ಚಂದ್ರು ಮೊದಲಾದವರಿದ್ದರು.ಕಣಿವೆ: ನಗರದ ಏಕೈಕ ಶಿವ ದೇವಾಲಯ ಶ್ರೀ ಸೋಮೇಶ್ವರ ದೇವಾಲ ಯದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾದಿಗಳು ಜರುಗಿದವು.
ಶಿವರಾತ್ರಿ ಅಂಗವಾಗಿ ಬೆಳಗ್ಗೆಯಿಂದ ದೇವಾಲ ಯದ ಸನ್ನಿಧಿ ಭಕ್ತಜನರಿಂದ ತುಂಬಿ ಹೋಗಿತ್ತು. ದೇವಾಲಯದ ಒಳ ಆವರಣವನ್ನು ಬಗೆ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಹಾಗೆಯೇ ಗರ್ಭಗುಡಿಯಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ, ಅಷ್ಟೋತ್ತರ, ನೈವೇದ್ಯ ನಂತರ ಮಹಾಮಂಗಳಾರತಿ ನಡೆಯಿತು.
ದೇವಾಲಯದ ಅರ್ಚಕರು ಧಾರ್ಮಿಕ ಕಾರ್ಯ ನೆರವೇರಿಸಿದರು. ದೇವಾಲಯದ ಭಕ್ತ ಆರ್.ಸಿ. ಬಡಾವಣೆಯ ಬಿ.ಸೋಮಶೇಖರ್ ಕುಟುಂಬದವರಿAದ ಶಿವರಾತ್ರಿ ಅಂಗವಾಗಿ ಪ್ರಸಾದÀ ಸೇವೆ ದಿನವಿಡೀ ನೆರವೇರಿತು.ಶನಿವಾರಸಂತೆ: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಗವಿಸಿದ್ಧೇಶ್ವರ ಸ್ವಾಮಿಯ ೩೮ ನೇ ವರ್ಷದ ವಾರ್ಷಿಕ ಪೂಜೆ ಹಾಗೂ ಜಾತ್ರಾ ಮಹೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಪ್ರತಿವರ್ಷ ಮಹಾಶಿವರಾತ್ರಿಯ ಮರುದಿನ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಬೆಳಿಗ್ಗೆ ೮ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಶ್ರೀಸ್ವಾಮಿಗೆ ವಿಶೇಷ ಪೂಜೆ, ಹಣ್ಣುಕಾಯಿ, ಅಭಿಷೇಕ, ಷೋಡೋಶೋಪಚಾರ, ಮಂಗಳಾರತಿ, ಪುಷ್ಪಾರ್ಚನೆ ನಡೆಯಿತು. ಪೂಜಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂತರ್ ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಮಡಿಕೇರಿಯ ಸಂಧ್ಯಾ ಹರೀಶ್, ಡ�