ಮಡಿಕೇರಿ, ಫೆ. ೧೬: ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ನ್ಯಾಯಾಧೀಶೆ ಶುಭ ಅವರು ಭಾಗವಹಿಸಿ ಪೋಕ್ಸೋ ಕಾಯ್ದೆ ಸೇರಿದಂತೆ ಇತರ ಹಲವಾರು ಪ್ರಕರಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಹನೀಯರಾದ ಎ.ಪಿ.ಜೆ ಅಬ್ದುಲ್ ಕಲಾಂ, ಥೇನ್ ಸಿಂಗ್, ಹಾಗೂ ವಿವೇಕಾನಂದರÀ ಕುರಿತು ಈ ಸಂದರ್ಭ ಅವರು ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಬಿ.ಎಸ್ ಜಯಪ್ಪ (ಆಡಳಿತ ಸಹಾಯಕ), ಹಾಗೂ ಸಂಸ್ಥೆಯ ಮಾಜಿ ಪೋಷಕರಾದ ಅರಮಣಮಾಡ ಸತೀಶ್ ದೇವಯ್ಯ, ಪ್ರಾಂಶುಪಾಲರಾದ ಪಿ.ಎ ನಾರಾಯಣ್ ಭಾಗವಹಿಸಿದ್ದರು. ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.