ಸಿದ್ದಾಪುರ, ಫೆ. ೧೬: ಅಮ್ಮತ್ತಿ ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ-ಶ್ರೀ ಪಾಷಾಣಮೂರ್ತಿ ಕ್ಷೇತ್ರದ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಹಾಗೂ ವಾದ್ಯಗೋಷ್ಠಿಯೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಅಭಿಷೇಕ, ಅಲಂಕಾರ ಪೂಜೆ, ಗಣಪತಿಹೋಮ, ದುರ್ಗಾ ಹೋಮ, ವಿಶೇಷ ಪೂಜೆ, ಅಗೇಲು ಸೇವೆ, ದೇವರ ದರ್ಶನ ನಡೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಚಾಮುಂಡೇಶ್ವರಿ-ಪಾಷಾಣಮೂರ್ತಿ ದೇವಾಲಯದ ಪ್ರಮುಖರಾದ ಕುಟ್ಟಂಡ ಸರಸ್ವತಿ, ಲೋಕೇಶ್ ಮುತ್ತಪ್ಪ, ಹಾಗೂ ಖಜಾಂಚಿ ಉದ್ದಪಂಡ ಕುಶೀ ಅಯ್ಯಪ್ಪ ಹಾಗೂ ಇನ್ನಿತರರು ಹಾಜರಿದ್ದರು.