*ಗೋಣಿಕೊಪ್ಪ, ಫೆ.೧೪: ಕಾವೇರಿ ಪೊಮ್ಮಕ್ಕಡ ಕೂಟದ ‘ಮೀನ್ಯಾರ್ ನಮ್ಮೆ’ಯ ಲಾಂಛನ ಮತ್ತು ಒಕ್ಕೂಟದ ಶೀರ್ಷಿಕೆ ಗೀತೆಯನ್ನು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಲೋಕಾರ್ಪಣೆಗೊಳಿಸಿದರು.

ದಿ ಸ್ಪೆöÊಸ್ರ‍್ಯಾಕ್ ಸಭಾಂಗಣದಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಪ್ರಿಲ್ ಮೂರರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯುವ “ಮೀನ್ಯಾರ್ ನಮ್ಮೆ” ಲಾಂಛನ ಅನಾವರಣಗೊಂಡಿತು.

ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಕೊಡವ ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಕೊಡವ ಭಾಷೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಶಿಷ್ಟ ಭಾಷೆಗಳಲ್ಲಿ ಕೊಡವ ಭಾಷೆಯು ತನ್ನ ಶ್ರೀಮಂತಿಕೆಯನ್ನು ಉಳಿಸಿಕೊಂಡಿದೆ.ಕೊಡವ ಬಾಷೆಯಲ್ಲಿನ ಸಂಸ್ಕೃತಿ, ಸಂಪ್ರದಾಯ, ಸಾಹಿತ್ಯ, ಕಲೆ, ಸಂಗೀತಗಳನ್ನು ಮತ್ತಷ್ಟು ಪಸರಿಸುವ ಮೂಲಕ ಈ ಭಾಷೆಯ ಉಳಿವಿಗೆ ಪ್ರತಿಯೊಬ್ಬರೂ ಕ್ರಿಯರಾಗಿರಬೇಕು ಎಂದು ಹೇಳಿದರು.

ಕೊಡವ ಭಾಷೆಯಲ್ಲಿ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಹೆಚ್ಚಿನ ಕೊರತೆ ಕಾಡುತ್ತಿತ್ತು. ಇಂದು ಅಂತಹ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಕೊಡವ ಭಾಷೆಯ ಬರಹಗಾರರು ಮತ್ತು ಹಾಡುಗಾರರು ಮುಂದುವರೆದಿದ್ದಾರೆ ಎಂಬುವುದು ಈ ಭಾಷೆಯ ಸಂಭ್ರಮವಾಗಿದೆ. ಇಂತಹ ವ್ಯವಸ್ಥೆಗಳಿಗೆ ಕಾವೇರಿ ಪೋಮ್ಮಕ್ಕಡ ಕೂಟ ಪೂರಕ ವಾತಾವರಣವನ್ನು ಒದಗಿಸಿಕೊಡುತ್ತಿದೆ ಎಂದು ಹೇಳಿದರು.

ಕಾವೇರಿ ಪೋಮ್ಮಕ್ಕಡ ಕೂಟದ ಅಧ್ಯಕ್ಷೆ ವಿಜುದೇವಯ್ಯ ಮಾತನಾಡಿ, ಕೂಟವು ಕಳೆದ ೯ ವರ್ಷಗಳಿಂದ ಕಾರ್ಯನಿರತವಾಗಿದೆ. ಆರೋಗ್ಯ, ಪರಿಸರ, ಸಮಾಜದ ಕಳಕಳಿ ಮತ್ತು ಸೇವೆಗಳೊಂದಿಗೆ ಗುರುತಿಸಿಕೊಳ್ಳುವ ಮೂಲಕ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದೆ ಎಂದು ಕೂಟದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ಒಕ್ಕೂಟದ ಶೀರ್ಷಿಕೆ ಗೀತೆಯ ರಚನೆಗಾರ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ ಮತ್ತು ಹಾಡುಗಾರ್ತಿ ಕಬ್ಬಚ್ಚೀರ ರಶ್ಮಿ ಸೇರಿದಂತೆ ಕೊಟದ ಸದಸ್ಯರುಗಳು ಈ ಸಂದರ್ಭ ಇದ್ದರು.