ಮಡಿಕೇರಿ, ಫೆ. ೧೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಎರಡನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನೆ ಅರೆಕಾಡುವಿನ ಕೊಡವ ಭವನದಲ್ಲಿ ನಡೆಯಿತು.

ಕೊಡವ ವೆಲ್‌ಫೇರ್ ಆ್ಯಂಡ್ ರಿಕ್ರಿಯೇಶನ್ ಅಸೋಸಿಯೇಶನ್‌ನ ಕೊಡವ ಭವನವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಆ ಬಳಿಕ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ರಾಜ್ಯಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಇವರುಗಳು ದೀಪ ಬೆಳÀಗುವುದರ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಪುಸ್ತಕ ಪತ್ತಾಯವನ್ನು ಗಣ್ಯರ ಸಮ್ಮುಖದಲ್ಲಿ ಕೊಡವ ಭವನ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ, ನಿವೃತ್ತ ಪ್ರಾಂಶುಪಾಲೆ ಡಾ. ಮಂಡೇಪAಡ ಪುಷ್ಪ ಕುಟ್ಟಣ್ಣ ಉದ್ಘಾಟಿಸಿದರು. ಈ ವೇಳೆ ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯAಡ ಡೀನಾ ಬೋಜಣ್ಣ, ಪೊನ್ನಿರಯು. ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ ಸೇರಿದಂತೆ ಅಸೋಸಿಯೇಶನ್ ಪದಾಧಿಕಾರಿಗಳು, ಅಕಾಡೆಮಿಯ ಮಾಜಿ ಸದಸ್ಯೆ ಅಜ್ಜಿನಿಕಂಡ ಪ್ರಮೀಳ ನಾಚಯ್ಯ ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ತಮ್ಮ ಮಾತಿನಲ್ಲಿ, ಕೊಡವ ಜನಾಂಗದವರು ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರ, ಇಲಾಖೆಗಳಲ್ಲಿ ಕೊಡವರಿಗೆ ಒಳ್ಳೆಯ ಹೆಸರಿದೆ. ಇದು ಕೊಡವರ ಶಿಸ್ತು, ಪ್ರಾಮಾಣಿಕತೆ, ದೃಢತೆ ಹಾಗೂ ನಿಸ್ವಾರ್ಥವಾದ ಕಾರ್ಯವೈಖರಿಗೆ ಸಲ್ಲುವ ಗೌರವವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಇಲ್ಲಿನ ಪರಿಸರವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು. ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಶಾಸಕ ಪೊನ್ನಣ್ಣ ಅವರು ಎಲ್ಲಾ ಸೌಲಭ್ಯಗಳಿರುವ ಕ್ರೀಡಾ ಸಮುಚ್ಛಯವನ್ನು ವಿ.ಬಾಡಗದಲ್ಲಿ ಸ್ಥಾಪಿಸಲು ಕಾರಣರಾಗಿದ್ದಾರೆ. ಈ ಕ್ರೀಡಾ ಕೇಂದ್ರದಿAದ ಮುಂದಿನ ದಿನಗಳಲ್ಲಿ ಕೊಡಗಿನ ಮಕ್ಕಳಿಗೆ ತುಂಬಾ ಪ್ರಯೋಜನ ಆಗಲಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡವ ಸಂಸ್ಕೃತಿ, ಸಾಹಿತ್ಯದ ವಿಚಾರದಲ್ಲಿ ಪ್ರಸ್ತುತ ಅನುಷ್ಟಾನ ಸಮಿತಿ ಜಾಗೃತಿ ಕಂಡುಬರುತ್ತಿದೆ. ಜನಾಂಗದವರು ಒಗ್ಗಟ್ಟಿನಿಂದ ಕಾರ್ಯ ಸಾಧನೆ ಮಾಡುವಂತಾಗಬೇಕೆAದರು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯಿಂದ ಆರಂಭಿಸಿರುವ ಪುಸ್ತಕ ಪತ್ತಾಯದ ಪ್ರಯೋಜನವನ್ನು ಸಾಹಿತ್ಯಾಭಿಮಾನಿಗಳು ಪಡೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಕೊಡವ ಸಾಹಿತ್ಯ ಲೋಕವು ಬೆಳಗುವುದರಲ್ಲಿ ಸಂದೇಹವಿಲ್ಲ ಎಂದರು. ಕೊಡವ ಭವನದ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಬಲ್ಲಚಂಡ ವಿಠಲ್ ಕಾವೇರಪ್ಪ ಸ್ವಾಗತಿಸಿ, ಖಜಾಂಚಿ ಕುಕ್ಕೆರ ಕೇಶು ಉತ್ತಪ್ಪ ವಂದಿಸಿದರು.

ವೇದಿಕೆಯಲ್ಲಿ ಸ್ಥಳದಾನಿಗಳಾದ ನಡಿಕೇರಿಯಂಡ ಮೋಹನ್ ಮಾಚಯ್ಯ, ಕಾರ್ಯದರ್ಶಿ ನೆಲ್ಲಮಕ್ಕಡ ಪಾವನ್ ಮುತ್ತಪ್ಪ, ಸಹಕಾರ್ಯದರ್ಶಿ ಕುಕ್ಕೆರ ಅಯ್ಯಪ್ಪ ಹಾಗೂ ನಿರ್ದೇಕರುಗಳಾದ ತೊಂಡಿಯAಡ ವಾಸು ನಾಣಯ್ಯ, ಅಣ್ಣಾರ್‌ಕಂಡ ಸೋಮಯ್ಯ, ಬಿದ್ದಂಡ ಭೀಮಯ್ಯ, ಬಲ್ಲಾರಂಡ ಅಭಿನ್ ಮುತ್ತಣ್ಣ, ಕುಕ್ಕೆರ ಗಣೇಶ್ ಗಣಪತಿ, ಚೀಯಂಡಿರ ಉತ್ತಪ್ಪ, ಚೇರಂಡ ಸುಭಾಶ್, ಮುಕ್ಕಾಟಿರ ವಿನಯ್ ಬೋಪಯ್ಯ, ಕುಕ್ಕೆರ ದಿನೇಶ್, ಕುಕ್ಕೆರ ಕುಶ, ನೆಲ್ಲಮಕ್ಕಡ ಪ್ರಕಾಶ್, ಅಣ್ಣಾರ್‌ಕಂಡ ವಿಜು ದೇವಯ್ಯ ಹಾಗೂ ಬಿಲ್ಡಿಂಗ್ ಕಮಿಟಿ ಚೇರ್ಮನ್ ಬಿದ್ದಂಡ ಮಾದಯ್ಯ ಇದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.