ಗೋಣಿಕೊಪ್ಪಲು, ಫೆ. ೧೩: ಸರ್ಕಾರದ ಸುತ್ತೋಲೆಯಂತೆ ೭ನೇ ಸಣ್ಣ ನೀರಾವರಿ ಮತ್ತು ೨ನೇ ನೀರಿನಾಸರೆಗಳ ಗಣತಿ ಕಾರ್ಯವನ್ನು ನಿರ್ವಹಿಸಲು ಗ್ರಾಮ ಆಡಳಿತ ಅಧಿಕಾರಿಗಳನ್ನು ಗಣತಿದಾರರನ್ನಾಗಿ ನೇಮಿಸಲಾಗಿದ್ದು ಕಾರ್ಯವು ಪ್ರಗತಿ ಹಂತದಲ್ಲಿದೆ. ಖಾಸಗಿ ನೀರಿನ ಮೂಲಗಳ ಗಣತಿಗೆ ತೆರಳಿದ ಸಂದರ್ಭದಲ್ಲಿ ಪ್ರಚಾರದ ಕೊರತೆಯಿಂದ ಸಮಯ ವ್ಯರ್ಥವಾಗುತ್ತಿರುವುದು ಹಾಗೂ ಅನಗತ್ಯ ಒತ್ತಡ ಉಂಟಾಗುತ್ತಿದೆ.
ಆದ್ದರಿಂದ ೭ನೇ ಸಣ್ಣ ನೀರಾವರಿ ಮತ್ತು ೨ನೇ ನೀರಿನಾಸರೆಗಳ ಗಣತಿ ಸಂದರ್ಭ ಸಾರ್ವಜನಿಕರು ಸಹಕರಿಸುವಂತೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಮಡಿಕೇರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.