ಕೂಡಿಗೆ, ಫೆ. ೧೩: ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಓಡೋಣ ಮೈಸೂರಿಗಾಗಿ ಒಂದಾಗೋಣ ಸ್ವಚ್ಚತೆಗಾಗಿ ಎಂಬ ಶೀರ್ಷಿಕೆಯಡಿ ನಡೆದ ಸ್ವಚ್ಚತಾ ಓಟ ಸ್ಪರ್ಧೆಯಲ್ಲಿ ತೊರೆನೂರು ಗ್ರಾಮದ ಗಣೇಶ್ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ೪೦ ವರ್ಷ ವಯೋಮಿತಿಯ ಮೇಲ್ಪಟ್ಟ ಸ್ಪರ್ಧೆಯ ೫ ಕಿಲೋಮೀಟರ್ ಓಟ ಸ್ಪರ್ಧೆಯಲ್ಲಿ ಗಣೇಶ್ ಭಾಗವಹಿಸಿದ್ದರು.