ಸುಂಟಿಕೊಪ್ಪ, ಫೆ. ೧೩: ಕೊಡಗರಹಳ್ಳಿ ಮಾರುತಿ ನಗರದ ಬಳಿ ಗುರುವಾರ ತಡರಾತ್ರಿ ರಿಟ್ಜ್ ಹಾಗೂ ಬೊಲೆನೊ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ನಂತರ ಅದೇ ಜಾಗದಲ್ಲಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಮೂರ್ನಾಡಿನ ಲಾರಿಯೊಂದು ಮಗುಚಿಕೊಂಡು ಮತ್ತೊಂದು ಅವಘಡ ನಡೆದಿದೆ.

ಕೊಡಗರಹಳ್ಳಿ ರಾಷ್ಟಿçÃಯ ಹೆದ್ದಾರಿ ೨೭೫ರ ಮಾರುತಿ ನಗರದ ಬಳಿ ತಡರಾತ್ರಿ ೧೧ ಗಂಟೆಯ ಸಂದರ್ಭ ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದ ರಿಟ್ಜ್ (ಕೆಎ೦೯ಎಂಎ೮೪೬೨)ಹಾಗೂ ಮಡಿಕೇರಿ ಕಡೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಬೊಲೆನೊ ಕಾರುಗಳ ನಡುವೆ ಅಪಘಾತ ಸಂಭವಿಸಿ ರಿಟ್ಜ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಹಾಗೂ ಬೊಲೆನೊ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವರಿಗೆ ಗಾಯಗಳಾಗಿದ್ದು ಅಪಘಾತ ಸ್ಥಳದಲ್ಲೇ ವಾಹನಗಳನ್ನು ರಾತ್ರಿ ಇರಿಸಲಾಗಿತ್ತು. ನಂತರ ಅದೇ ಜಾಗದಲ್ಲಿ ಮತ್ತೊಂದು ಅವಘಡ ನಡೆದಿದೆ. ಇಂದು ನಸುಕಿನ ವೇಳೆ ೪ ಗಂಟೆಗೆ ಮಡಿಕೇರಿ ಕಡೆಯಿಂದ ಮೈಸೂರಿನತ್ತ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಮೂರ್ನಾಡಿನ ಲಾರಿ (ಕೆಎ೦೨ಎಡಿ೬೮೩೯) ಮಗುಚಿಕೊಂಡು ಅಪಘಾತದ ನಂತರ ರಸ್ತೆ ಬದಿ ನಿಂತಿದ್ದ ಬೊಲೆನೊ ಕಾರಿನ ಮೇಲೆ ಬಿದ್ದಿದೆ. ಇದರಿಂದ ಬೊಲೆನೊ ಕಾರು ಮತ್ತಷ್ಟು ಜಖಂಗೊAಡಿದೆ. ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.