ಚೆಯ್ಯಂಡಾಣೆ, ಫೆ. ೧೨: ಸಮೀಪದ ಕರಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ೭೭ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ಸಿಐಎಸ್ಎಫ್ ಬೇಪಡಿಯಂಡ. ಎಸ್.ಅಯ್ಯಣ್ಣ ನೆರವೇರಿಸಿ ಮಾತನಾಡಿ, ಮಕ್ಕಳು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು, ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳಬೇಕು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ದೇಶ ಅಭಿಮಾನ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷೆ ಎಂ.ಎ. ನೇತ್ರಾವತಿ ವಹಿಸಿದ್ದರು. ಮುಖ್ಯ ಶಿಕ್ಷಕಿ ಲೀಲಾವತಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಮೂಹಿಕ ಕವಾಯತು ಸೇರಿದಂತೆ ಭಾಷಣ, ಗಾಯನ, ನೃತ್ಯ ಕಾರ್ಯಕ್ರಮ ಮೂಡಿಬಂತು.
ಸಲಹಾ ಸಮಿತಿಯ ಸದಸ್ಯ ಐತಿಚಂಡ ಭೀಮಯ್ಯ, ಎಸ್ಡಿಎಂಸಿ ಸದಸ್ಯರಾದ ಬಿಂದು, ಪ್ರಿಯ, ಶಿಕ್ಷಕಿ ಫಸೀಲ ಉಪಸ್ಥಿತರಿದ್ದರು.