ನಾಪೋಕ್ಲು, ಫೆ. ೧೨: ದಕ್ಷಿಣ ಕನ್ನಡದಲ್ಲಿ ಜನಪ್ರಿಯವಾಗಿರುವ ಯಕ್ಷಗಾನದ ಕಾರ್ಯಕ್ರಮ, ಮೂರ್ನಾಡು ಆಪ್ತಮಿತ್ರ ಬಳಗ ಸೇವಾರ್ಥ ನಡೆದಿದ್ದು, ಅಪಾರ ವೀಕ್ಷಕ ಜನಸಾಗರವನ್ನು ಮೂಕ ಪ್ರೇಕ್ಷಕರನ್ನಾಗಿಸಿತು.

ಪ್ರತಿ ವರ್ಷದಂತೆ ಈ ವರ್ಷವೂ ಮೂರ್ನಾಡಿನ ಆಪ್ತಮಿತ್ರ ಬಳಗ ಮೂರನೇ ವರ್ಷದ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಿ ಅತ್ಯದ್ಭುತವಾಗಿ ಮೂಡಿ ಬಂತು. ಬಳಗದವರ ಸೇವಾರ್ಥ ಶ್ರೀ ಕೋದಂಡ ರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಯಕ್ಷಗಾನ ಮೇಳದವರಿಂದ ಸಂಪೂರ್ಣ ಶ್ರೀ ದೇವೀ ಮಹಾತ್ಮೆ ಯಕ್ಷೋತ್ಸವ ಯಶಸ್ಸು ಗಳಿಸಿ ವೀಕ್ಷಕರು ಪುರಾಣ ಪಾತ್ರಧಾರಿಗಳ ವೇಷ ಭೂಷಣ ಹಾಗೂ ಮಾತಿನ ಚಾತುರ್ಯವನ್ನು ಕಣ್ತುಂಬಿಕೊAಡರು.

ಮಹಿಷನ ರಂಗಪ್ರವೇಶ ವಾದ್ಯಮೇಳ, ಸಿಡಿಮದ್ದು ಹಾಗೂ ನೂರಾರು ಬೆಂಕಿಯ ದೀವಟಿಕೆಯೊಂದಿಗೆ ಬೆಂಕಿಯನ್ನು ಉಗುಳುತ್ತಾ ಜನಸಾಗರದ ಮಧ್ಯ ಸಾಗಿ ಆಗಮಿಸಿದ್ದು ಅತ್ಯದ್ಭುತವಾಗಿತ್ತು.

ಆಪ್ತಮಿತ್ರ ಬಳಗದಲ್ಲಿ ೧೬೦ ಸದಸ್ಯರಿದ್ದು ಒಟ್ಟಾಗಿ ಹಲವು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಿದೆ. ಯಕ್ಷಗಾನ ಕಾರ್ಯಕ್ರಮವು ಸಹಸ್ರಾರು ವೀಕ್ಷಕರ ಮನ ರಂಜಿಸುತ್ತಿದೆ. ಸುಮಾರು ೩,೦೦೦ಕ್ಕೂ ಅಧಿಕ ಮಂದಿ ಯಕ್ಷಗಾನದ ವೈಭವವನ್ನು ಕಣ್ಣು ತುಂಬಿಕೊAಡಿದ್ದಾರೆ. ಇದರಲ್ಲಿ ಸಾರ್ವಜನಿಕರು ಸಂಘ-ಸAಸ್ಥೆಗಳು ಸಹಕಾರ ನೀಡಿದ್ದಾರೆ ಎಂದು ಆಪ್ತ ಮಿತ್ರ ಬಳಗದ ಸಂಯೋಜಕರಲ್ಲಿ ಒಬ್ಬರಾದ ಚಂದ್ರಶೇಖರ ಕುಲಾಲ್ ಹೇಳಿದರು.