ವೀರಾಜಪೇಟೆ, ಫೆ. ೧೨: ಪಟ್ಟಣದ ಕಂಚಿ ಕಾಮಾಕ್ಷಿ ದೇವಾಲಯ ರಸ್ತೆಯಲ್ಲಿರುವ ವಿನಾಯಕ ಇಂಗ್ಲೀಷ್ ಶಾಲೆಯಲ್ಲಿ ಮಾದಕ ವಸ್ತುಗಳ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಯಿತು.
ವೀರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದುಶ್ಚಟಗಳಿಂದ ಆರೋಗ್ಯ ಮಾತ್ರ ಸಮಾಜದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳು ಬದುಕನ್ನು ನಾಶ ಮಾಡುತ್ತದೆ. ದೇಶದಲ್ಲಿ ಶೇಕಡ ೩೦ ರಿಂದ ೪೦ ರಷ್ಟು ವಿದ್ಯಾರ್ಥಿಗಳು ಗಾಂಜಾ, ಕೊಕೇನ್, ತಂಬಾಕು, ಮದ್ಯಪಾನದಂತಹ ಮಾದಕ ವ್ಯಸನಕ್ಕೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಉದಾಹರಣೆಗಳಿವೆ. ಶಿಕ್ಷಕರು, ಪೋಷಕರು ಮಕ್ಕಳನ್ನು ಮಾದಕ ವಸ್ತುಗಳಿಂದ ರಕ್ಷಿಸಲು ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ತಪ್ಪುದಾರಿ ಹಿಡಿಯದೆ ವಿದ್ಯಾರ್ಥಿಗಳು ಸತ್ಪçಜೆಯಾಗಿ ರೂಪುಗೊಳ್ಳಬೇಕು. ಸಮಾಜದ ಬಗ್ಗೆ ಕಳಕಳಿ ಹೊಂದಬೇಕೆAದು ಕರೆ ನೀಡಿದರು.
ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಾ ಬಿ.ವಿ ಅವರ ಮಾರ್ಗದರ್ಶನದಲ್ಲಿ ಮಕ್ಕಳಿಂದ ಕಿರು ನಾಟಕವನ್ನು ಪ್ರದರ್ಶನವಾಯಿತು. ಶಾಲಾ ಶಿಕ್ಷಕಿ ಮೀನಾ ಎಂ.ಎನ್ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ನಾಡಿನತ್ತ ನಮ್ಮ ನಡಿಗೆಯು ಎಂಬ ಅರ್ಥಪೂರ್ಣವಾದ ಕವಿತೆಯನ್ನು ಮಕ್ಕಳು ಪ್ರಸ್ತುತಪಡಿಸಿದರು. ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಆಹಾರ ಹಬ್ಬವನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಶಾಲೆಯ ಆಡಳಿತ ಮಂಡಳಿಯ ಕಾರ್ಯನಿರ್ವಾಹಕಿ ಜಯಕುಮಾರಿ, ಶಾಲಾ ಮುಖ್ಯ ಶಿಕ್ಷಕಿ ಬಿ.ವಿ. ಶೈಲಾ ಹಾಗೂ ಪ್ರತಿಮಾ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಅರ್ಪಿತ ಎನ್.ಎಸ್, ದಿವ್ಯ ಟಿ.ಟಿ, ಭಾಮಿನಿ ಪಿ.ಪಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಭಾಗವಹಿಸಿದ್ದರು