ಕೂಡಿಗೆ, ಫೆ. ೧೨: ಕೃಷಿ ಆವಿಷ್ಕಾರಗಳಿಗೆ ನೀಡಿದ ಕೊಡುಗೆಗಳನ್ನು ಗುರುತಿಸಿ, ನವದೆಹಲಿಯ ಇಂಡಿಯನ್ ಇಂಡಿಜೆನಸ್ ಸೊಸೈಟಿ ಫಾರ್ ಸೈನ್ಸಸ್ ಮತ್ತು ಸೋಷಿಯಲ್ ಸೈನ್ಸಸ್ನಿಂದ “ಕೃಷಿ ರತ್ನ ಪ್ರಶಸ್ತಿ-೨೦೨೬”ಅನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ಪ್ರದಾನ ಮಾಡಲಾಯಿತು.
ನಾಗಪುರದ ವಿಶ್ವವಿದ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಇಂಡಿಯನ್ ಇಂಡಿಜೆನಸ್ ಸೊಸೈಟಿ ಫಾರ್ ಸೈನ್ಸಸ್ ಅಂಡ್ ಸೋಷಿಯಲ್ ಸೈನ್ಸಸ್ನ ಅಧ್ಯಕ್ಷರಾದ ಡಾ.ದಯಾನಂದ ಗೋಗಲೆ ಮತ್ತು ಪದಾಧಿಕಾರಿಗಳು, ಉಜಬೆಕಿಸ್ತಾನದ ಇನ್ಸ್ಟಿಟ್ಯೂಟ್ ಆಫ್ ಜೆನಿಟಿಕ್ಸ್ ಅಂಡ್ ಪ್ಲಾಂಟ್ ಎಕ್ಸ್ಪೆರಿಮೆಂಟಲ್ ಬಯಾಲಾಜಿಯ ಮುಖ್ಯಸ್ಥೆ ಡಾ.ಡಿಲ್ಫುಜ ಜಬ್ಬಾರ್ವ, ಎಸ್ಬಿಎಸ್ಎಸ್ನ ಅಧ್ಯಕ್ಷರಾದ ಪ್ರೊ. ಪ್ರಮೋದ್ ರಾಮ್ ಟೆಕೆ ಹಾಗೂ ಇತರೆ ವಿಜ್ಞಾನಿಗಳು ಮತ್ತು ಅತಿಥಿ ಗಣ್ಯರು ಉಪಸ್ಥಿತರಿದ್ದರು.