ಸೋಮವಾರಪೇಟೆ, ಫೆ. ೧೧: ತಾಲೂಕಿನ ಹೊನವಳ್ಳಿ ಗ್ರಾಮದ ನಿವಾಸಿ ಹೆಚ್.ವಿ. ಕೃಪಾಗೆ ಪಿಹೆಚ್‌ಡಿ ದೊರೆತಿದೆ. ದಾವಣಗೆರೆ ವಿಶ್ವ ವಿದ್ಯಾಲಯ ವತಿಯಿಂದ ತೋಳಹುಣಸೆಯ ಶಿವ ಗಂಗೋತ್ರಿ ಆವgಣದಲ್ಲಿ ಈಚೆಗೆ ನಡೆದ ೧೩ನೇ ಘಟಿಕೋತ್ಸವದಲ್ಲಿ ಕೃಪಾಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು. ಉಪಕುಲಪತಿ ಚಂದ್ರಶೇಖರ್ ಕಂಬಾರ ಇದ್ದರು. ಆಧುನಿಕ ಕನ್ನಡ ಕಾದಂಬರಿ ಪರಿಸರವಾದಿ ವಿಮರ್ಶೆಯ ನೆಲೆಗಳು ಕುರಿತು ಕೃಪಾ ಅವರು ಸಿದ್ಧಪಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ದೊರೆತಿದ್ದು, ಡಾ. ಮಹಾಂತೇಶ ಪಾಟೀಲ ಇವರ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರು. ಕೃಪಾ ಹೊನವಳ್ಳಿ ಗ್ರಾಮದ ಕಾಫಿ ಬೆಳೆಗಾರ ಎಚ್.ಪಿ. ವೀರೇಶ್- ರೂಪ ದಂಪತಿಯ ಪುತ್ರಿ. ಪ್ರೋ ಕಬಡ್ಡಿ ಆಟಗಾರ ರತನ್ ಕೂತಿ ಅವರ ಪತ್ನಿ.