ಮಡಿಕೇರಿ, ಫೆ. ೧೨ : ಕೊಡಗಿನ ಮೂಲನಿವಾಸಿ ೨೧ ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ ಇದೇ ಪ್ರಥಮ ಬಾರಿಗೆ ನಡೆಸುತ್ತಿರುವ ‘ದೇಶೀಯ ಕ್ರೀಡೋತ್ಸವ’ಕ್ಕೆ ಅನುದಾನ ಕೋರಿ ಕೊಡವ ಭಾಷಿಕ ಸಮುದಾಯಗಳ ಕೂಟವು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರಿಗೆ ಮನವಿ ಸಲ್ಲಿಸಿತು. ಕೊಡವ ಭಾಷಿಕ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಅವರ ನೇತೃತ್ವದಲ್ಲಿ ವೀರಾಜಪೇಟೆಯಲ್ಲಿ ಅರುಣ್ ಮಾಚಯ್ಯ ಅವರನ್ನು ಭೇಟಿಯಾದ ನಿರ್ದೇಶಕರುಗಳು ಹಾಗೂ ಸಮುದಾಯಗಳ ಮುಖಂಡರುಗಳು ಕ್ರೀಡೋತ್ಸವದ ಯಶಸ್ಸಿಗೆ ಅಗತ್ಯ ಸಹಕಾರ ನೀಡುವಂತೆ ಕೋರಿದರು.

ಕೆಂಬಟ್ಟಿ ಜಾನಪದ ನಮ್ಮೆಗೆ ಸಹಕಾರಕ್ಕೆ ಮನವಿ

ಕೊಡವ ಭಾಷಿಕ ಮೂಲನಿವಾಸಿ ಕೆಂಬಟ್ಟಿ ಸಮುದಾಯದ ವತಿಯಿಂದ ಪ್ರಥಮ ಬಾರಿಗೆ ‘ಕೆಂಬಟ್ಟಿ ಜಾನಪದ ನಮ್ಮೆ’ಯನ್ನು ನಡೆಸಲಾಗುತ್ತಿದ್ದು, ಅಗತ್ಯ ಸಹಕಾರ ಕೋರಿ ಕೆಂಬಟ್ಟಿ ಸಮುದಾಯದ ನಿಯೋಗ ವೀರಾಜಪೇಟೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷÀ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿತು.

ನಿಯೋಗದಲ್ಲಿ ಅಧ್ಯಕ್ಷ ಬಿಲ್ಲರೀಕುಟ್ಟಡ ಪ್ರಭು ಐಯ್ಯಪ್ಪ, ನಿರ್ದೇಶಕರುಗಳಾದ ಬಾಳೆಕುಟ್ಟಡ ಉದಯ್ ಮಾದಪ್ಪ, ಪೆಗ್ಗೋಲಿ ದಿನೇಶ್, ಚವರೆಕುಟ್ಟಡ ಜೀವನ್, ಕೋಪರೆ ಕುಟ್ಟಡ ಸಾಗರ್ ಪೊವಣ್ಣ, ಚಿಮ್ಮಿಕುಟ್ಟಡ ನಿತೇಶ್, ಪ್ರಮುಖರಾದ ಚೋಕುಟ್ಟಡ ಚಿಮ್ಮ ಅಯ್ಯಪ್ಪ, ಬಿದ್ದಣ ಕುಟ್ಟಡ ಕಿರಣ್ ಕಾವೇರಪ್ಪ, ಮೊಟ್ಟಕುಟ್ಟಡ ಭೋಜಮ್ಮ, ಜೋಕುಟ್ಟಡ ವ್ಯೆಶಾಲಿ ಪ್ರಕಾಶ್, ಬಿದ್ದಣಡ ಕುಟ್ಟ ರೋಹಿಣಿ ಪುಪ್ಪ, ಚಿಮ್ಮಿಡ ಕುಟ್ಟ ಗಿರೀಶ್ ಬೆಳ್ಳಿಪ್ಪ, ಚೋಕುಟ್ಟಡ ಸಂತೋಸ್, ಉತ್ತುಕುಟ್ಟಡ ಮನು ಬಿದ್ದಪ್ಪ, ಬಿಲ್ಲಿರಿಕುಟ್ಟಡ ಮಂಜೇಶ್, ಚವರೆಕುಟ್ಟಡ ಸುಬ್ರಮಣಿ, ಚಿಮ್ಮಿಕುಟ್ಟಡ ವಿಲ್ಮ ಅಶೋಕ್, ಚವರೆÀಕುಟ್ಟಡ ಸುಬ್ಬಕ್ಕಿ ಮುತ್ತಪ್ಪ ಮತ್ತಿತರರು ಹಾಜರಿದ್ದರು.