ಮಡಿಕೇರಿ, ಫೆ. ೧೦: ಕಳತ್ಮಾಡು ಗ್ರಾಮದ ಹೊಸೂರು ಬೆಟ್ಟಕೇರಿಯ ಶ್ರೀ ಮಹಾದೇವರ ದೇವಾಲಯದ ಅಷ್ಟಬಂಧ ದ್ರವ್ಯ ಕಲಶಾಭಿಷೇಕ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ತಾ.೧೨ ರಿಂದ (ನಾಳೆ)ನಡೆಯಲಿವೆ.

ತಾ.೧೨ ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ೭:೩೦ಕ್ಕೆ ಸಾಮೂಹಿಕ ಪ್ರಾರ್ಥನೆ, ರಾತ್ರಿ ೮ ಗಂಟೆಗೆ ಮಹಾಸಂಕಲ್ಪ, ಧ್ವಜಸ್ತಂಭಕ್ಕೆ ಪೂಜೆ, ಮೂರು ಸುತ್ತು ದೇವರ ಬಲಿ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ತಾ.೧೩ ರಂದು ಬೆಳಿಗ್ಗೆ ೫:೪೫ಕ್ಕೆ ಮೂರು ಸುತ್ತು ದೇವರ ಬಲಿ, ೭ ಗಂಟೆಗೆ ಶ್ರೀ ಹಣಪತಿ ಹೋಮ, ಬೆಳಿಗ್ಗೆ ೧೦ ಗಂಟೆಗೆ ಕಲಶ ಸ್ಥಾಪನೆ ಪೂಜೆ ಮತ್ತು ಅಭಿಷೇಕ ನೆರವೇರಲಿದೆ. ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಇರಲಿದೆ. ಸಂಜೆ ೬:೩೦ ಗಂಟೆಗೆ ೫ ಸುತ್ತು ದೇವರ ಪ್ರದಕ್ಷಿಣೆ, ೭:೩೦ಕ್ಕೆ ಅಂದಿ ಬೆಳಕು, ೮:೦೦ಗಂಟೆಗೆ ಮಹಾಪೂಜೆ ನಂತರ ಪ್ರಸಾದ ವಿತರಣೆ ನೆರವೇರಲಿದೆ.

ತಾ.೧೪ ರಂದು ಬೆಳಿಗ್ಗೆ ೫:೩೦ಗಂಟೆಗೆ ಇರುಬೆಳಕು, ೫ ಸುತ್ತು ದೇವರ ನೃತ್ಯಬಲಿ, ೭ ಗಂಟೆಗೆ ಶ್ರೀ ಮಹಾಗಣಪತಿ ಹೋಮ, ಬೆಳಿಗ್ಗೆ ೧೦ ಗಂಟೆಗೆ ಕಲಶಪೂಜೆ, ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ೬ ಗಂಟೆಗೆ ೫ ಸುತ್ತು ದೇವರ ಪ್ರದಕ್ಷಿಣೆ, ೭:೩೦ಕ್ಕೆ ಅಂದಿ ಬೆಳಕು, ೮ ಗಂಟೆಗೆ ಮಹಾಪೂಜೆ ನಂತರ ಪ್ರಸಾದ ವಿತರಣೆ ಜರುಗಲಿದೆ

ತಾ.೧೫ ರಂದು ಬೆಳಿಗ್ಗೆ ೫:೩೦ಕ್ಕೆ ೯ಸುತ್ತು ದೇವರ ನೃತ್ಯಬಲಿ, ೭ ಗಂಟೆಗೆ ಗಣಪತಿ ಹೋಮ, ೯:೩೦ಕ್ಕೆ ಕಲಶ ಸ್ಥಾಪನೆ ಪೂಜೆ, ಮಹಾಶಿವರಾತ್ರಿ ಪ್ರಯುಕ್ತ ರುದ್ರ ಪಾರಾಯಣ, ಮಧ್ಯಾಹ್ನ ೧೨:೩೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ೫ ಗಂಟೆಗೆ ೯ ಸುತ್ತು ದೇವರ ನೃತ್ಯಬಲಿ, ೬ ಗಂಟೆಗೆ ವಸಂತ ಪೂಜೆ, ೮:೩೦ಕ್ಕೆ ಮಹಾಪೂಜೆ ನಂತರ ಪ್ರಸಾದ ವಿತರಣೆ ನೆರವೇರಲಿದೆ.

ತಾ.೧೬ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ನಂತರ ೧೧ ಗಂಟೆಯಿAದ ಪೂಜಾ ಕಾರ್ಯಕ್ರಮಗಳು, ಅಪರಾಹ್ನ ೫ ಗಂಟೆಗೆ ಶ್ರೀ ಮಹಾದೇವರ ಮೆರವಣಿಗೆ, ಅಪರಾಹ್ನ ೫:೩೦ಕ್ಕೆ ಶ್ರೀ ಭದ್ರಕಾಳಿ ದೇವಸ್ಥಾನ ಪ್ರವೇಶ, ಸಂಜೆ ೬-೩೦ ಗಂಟೆಗೆ ಅವಭೃತ ಸ್ನಾನ ನಂತರ ೧೧ ಸುತ್ತು ದೇವರ ನೃತ್ಯ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ. ತಾ.೧೭ ರಂದು ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ ೧೦ ಗಂಟೆಗೆ ನವಕ ಕಲಶ, ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಮಂತ್ರಾಕ್ಷತೆ ನಡೆಯಲಿದೆ.

ತಾ.೨೩ ರಂದು ಸಂಜೆ ೭ ರಿಂದ ಸಾಮೂಹಿಕ ಪ್ರಾರ್ಥನೆ, ಪಣ್ಯಾಹ, ಪ್ರಾಸಾದ ಶುದ್ದಿ, ವಾಸ್ತು ರಾಕ್ಷೆÆÃಗ್ನ ಹೋಮ, ವಾಸ್ತು ಬಲಿ ನಡೆಯಲಿದೆ.

ತಾ.೨೪ ರಂದು ಬೆಳಿಗ್ಗೆ ೭ ರಿಂದ ಗಣಪತಿ ಹೋಮ, ಬಿಂಬ ಶುದ್ದಿ, ಪ್ರೋಕ್ತ ಹೋಮ, ಪ್ರಯಶ್ಚಿತ್ ಹೋಮ, ಶಾಂತಿ ಹೋಮ, ಹೋಮ ಕಲಾಶಭಿಷೇಕ ನೆರವೇರಲಿದೆ. ಬಳಿಕ ಮಧ್ಯಾಹ್ನ ೧ ಗಂಟೆಗೆ ಪೂಜೆ, ಸಂಜೆ ೬ ರಿಂದ ಅಧಿವಾಸ ಹೋಮ, ದ್ರವ್ಯ ಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ ನಡೆಯಲಿದೆ.

ತಾ.೨೫ ರಂದು ಬೆಳಿಗ್ಗೆ ೭ ರಿಂದ ಗಣಪತಿ ಹೋಮ, ತತ್ವಹೋಮ, ತತ್ವಕಲಶ ಪೂಜೆ, ಬೆಳೆಗೆ ೧೦-೨೧ ರಿಂದ ೧೧-೩೬ರ ವೃಷಭ ಲಗ್ನದಲ್ಲಿ ತತ್ವಕಲಶಾಭಿಷೇಕ-ಅಷ್ಟಬಂಧ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.